ಸಾರಾಂಶ
ಹೊನ್ನಾವರ: ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಉ.ಕ, ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಮಾತೃ ಫೌಂಡೇಶನ್ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಹಸ್ರಾರು ವೃಕ್ಷಾರೋಪಣ ಅಭಿಯಾನ ಕಾರ್ಯಕ್ರಮವು ಆ.೧೭ರಂದು ಮುಂಜಾನೆ ೯:೩೦ಕ್ಕೆ ಕರಿಕಾನ ಪರಮೇಶ್ವರಿ ಸತ್ಯಸಾಯಿ ಶಿಕ್ಷಣ ಸಂಸ್ಥೆ ಆವರಣ ಅರೇಂಗಡಿಯಲ್ಲಿ ನಡೆಯಲಿದೆ ಎಂದು ನ್ಯಾಯವಾದಿ ಸತೀಶ ಭಟ್ಟ ಉಳಗೆರೆ ಹೇಳಿದರು.
ಅವರು ವಕೀಲರ ಸಂಘ ಹೊನ್ನಾವರ ಆಯೋಜನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಮಾಹಿತಿಯನ್ನು ಪತ್ರಕರ್ತರಿಗೆ ನೀಡಿದರು.ಅಂದು ಕಾರ್ಯಕ್ರಮವು ಮುಂಜಾನೆ ೯:೩೦ಕ್ಕೆ ಆರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್, ನ್ಯಾ.ಸಚಿನ್ ಶಂಕರ ಮಗದುಮ್, ನ್ಯಾ.ಪ್ರದೀಪ್ ಸಿಂಗ್ ಯೆರೂರ್, ನ್ಯಾ.ಅನಂತ ರಾಮನಾಥ ಹೆಗಡೆ, ನ್ಯಾ.ಸಿ.ಎಂ. ಜೋಶಿ, ನ್ಯಾ.ಕೆ.ಎನ್. ಫಣೀಂದ್ರ, ನ್ಯಾ.ಬಿ.ವೀರಪ್ಪ, ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಮಧುಸೂದನ ಆರ್ ನಾಯ್ಕ, ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ಅಧ್ಯಕ್ಷ ಮೊಹಮ್ಮದ ತಬ್ರೇಜ್ ಅಲಂ ಶರೀಫ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿಶೇಷ ಅಹ್ವಾನಿತರಾಗಿ ಉಕ ಜಿಲ್ಲಾ ಪ್ರಬಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್, ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಕಾರವಾರ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ, ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ, ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಕೆ., ಪೋಲಿಸ್ ಅಧೀಕ್ಷಕ ದೀಪನ್ ಎಂ.ಎನ್., ಉಪ ಅರಣ್ಯಾಧಿಕಾರಿ ಯೋಗೀಶ್ ಸಿ. ಕೆ ಆಗಮಿಸಲಿದ್ದಾರೆ.ಹೈಕೋರ್ಟ್ ನ ಹಿರಿಯ ಪದಾಂಕಿತ ವಕೀಲರಾದ ಜಯಕುಮಾರ್ ಎಸ್ ಪಾಟಿಲ್, ಜಿ.ಕೆ ಭಟ್, ಎಂ.ಎಸ್ ಭಾಗವತ್, ಗಣಪತಿ ನಾರಾಯಣ ಹೆಗಡೆ ತಲೆಕೆರೆ, ಆರ್.ಎಸ್ ರವಿ, ಮೂರ್ತಿ ಡಿ.ನಾಯ್ಕ, ಹಿರಿಯ ವಕೀಲರಾದ ನಾಗೇಂದ್ರ ರಾಮಚಂದ್ರ ನಾಯ್ಕ, ಹಿರಿಯ ವಕೀಲ ಜಿ.ಎ ಶ್ರೀಕಂಠೇ ಗೌಡ ಉಪಸ್ಥಿತರಿರಲಿದ್ದಾರೆ.
ಮಾಜಿ ಅಡ್ವೋಕೇಟ್ ಜನರಲ್‌ಗಳಾದ ಉದಯ ಹೊಳ್ಳ ಮತ್ತು ಅಶೋಕ್ ಹಾರನಳ್ಳಿ. ವಕೀಲರಾದ ಸತೀಶ್ ಭಟ್ ಕರ್ಕಿ, ವಿನಯ್ ಬಿ., ಮಾಯಣ್ಣ ಗೌಡ ಎನ್.ಆರ್., ಹೊನ್ನಾವರ ವಕೀಲರ ಸಂಘದ ಅಧ್ಯಕ್ಷ ವಿ.ಎಂ ಭಂಡಾರಿ, ಕಾರ್ಯದರ್ಶಿ ಉದಯ ನಾಯ್ಕ ಚಿತ್ತಾರ, ವಕೀಲರ ವಾಹಿನಿ ಮಾಸ ಪತ್ರಿಕೆಯ ಸಂಪಾದಕ ಡಿ.ಎಂ ಹೆಗಡೆ ಸಹಕರಿಸಲಿದ್ದಾರೆ.ಕಾರ್ಯಕ್ರಮವು ಹಿರಿಯ ಪದಾಂಕಿತ ವಕೀಲ ವಿಘ್ನೇಶ್ವರ್ ಎಸ್ ಶಾಸ್ತ್ರಿ ಮತ್ತು ಸತೀಶ್ ಭಟ್ ಉಳಗೇರೆ, ನಾಗರಾಜ ಹೆಗಡೆ ಹೊಸಾಕುಳಿ, ಸಂಚಾಲಕತ್ವದಲ್ಲಿ ನಡೆಯಲಿದೆ.
ಕರಾವಳಿ ಮತ್ತು ಸಹ್ಯಾದ್ರಿಯ ಸೊಬಗಿನ ರಮಣೀಯ ಪ್ರದೇಶದಲ್ಲಿನ ಹಸಿರನ್ನು ಉಳಿಸಲು, ಸಮಾಜವನ್ನು ಪ್ರೇರೇಪಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ವಿ.ಎಂ ಭಂಡಾರಿ ಮಾತನಾಡಿ, ಹೊನ್ನಾವರ ವಕೀಲರ ಸಂಘದ ಆಯೋಜನೆಯೊಂದಿಗೆ ಈ ಕಾರ್ಯಕ್ರಮವು ನಡೆಯಲಿದೆ. ಜಿಲ್ಲೆಯ, ತಾಲೂಕಿನ, ಎಲ್ಲ ವಕೀಲರ ಸಂಘ, ಸೇವಾ ಸಹಕಾರಿ ಸಂಘಗಳು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕೈಜೊಡಿಸಲಿವೆ. ಕಾರ್ಯಕ್ರಮದಲ್ಲಿ ಬಂದು ಗಿಡ ನೆಡಲು, ಸಹಕರಿಸಲು ಕೋರಿದರು.
ವಕೀಲರ ಸಂಘದ ಕಾರ್ಯದರ್ಶಿ ಉದಯ ನಾಯ್ಕ ಚಿತ್ತಾರ ಹಾಗೂ ವಕೀಲರ ಸಂಘದ ಸಧಸ್ಯರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.