ಚಿಕ್ಕೋಡಿ ಭಾಗದ ಸತೀಶ್ ಪುರಸ್ಕಾರ ಅವಾರ್ಡ್

| Published : Nov 26 2024, 12:51 AM IST

ಸಾರಾಂಶ

ಚಿಕ್ಕೋಡಿ ಭಾಗದ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿಕೊಡಲು ಮುಂಬರುವ ದಿನಗಳಲ್ಲಿ ಅಲ್ಲಿಯೂ ಕೂಡ ಸತೀಶ್ ಪುರಸ್ಕಾರ ಅವಾರ್ಡ್ ಆರಂಭಿಸಲಾಗುವುದು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಚಿಕ್ಕೋಡಿ ಭಾಗದ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿಕೊಡಲು ಮುಂಬರುವ ದಿನಗಳಲ್ಲಿ ಅಲ್ಲಿಯೂ ಕೂಡ ಸತೀಶ್ ಪುರಸ್ಕಾರ ಅವಾರ್ಡ್ ಆರಂಭಿಸಲಾಗುವುದು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಇಲ್ಲಿನ ಎನ್.ಎಸ್.ಎಫ್ ಶಾಲಾ ಅವರಣದಲ್ಲಿ ಆಯೋಜಿಸಿದ 11ನೇ ಸತೀಶ್ ಪ್ರತಿಭಾ ಪುರಸ್ಕಾರದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟಲ್ಲಿರುವ ಪ್ರತಿಭೆಗಳನ್ನು ಹುಡುಕಿ ಸೂಕ್ತ ವೇದಿಕೆ ಕಲ್ಪಿಸಿ ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ತಂದೆ ಸತೀಶ ಜಾರಕಿಹೊಳಿಯವರು ನಾವು ಚಿಕ್ಕವರಿದ್ದಾಗ ಗೋಕಾಕದಲ್ಲಿ ಸತೀಶ್ ಪ್ರತಿಭಾ ಪುರಸ್ಕಾರ ಆರಂಭಿಸಿದರು. ವಿದ್ಯಾರ್ಥಿಗಳ ಕಲೆಗಳಿಗೆ ಪ್ರೋತ್ಸಾಹ ನೀಡಿ ಉನ್ನತ ಮಟ್ಟಕ್ಕೆ ಬೆಳೆಸುವುದೇ ನಮ್ಮ ತಂದೆಯವರ ಆಶಯವಾಗಿದೆ ಎಂದು ತಿಳಿಸಿದರು.ಹತ್ತರಗಿ ಹರಿಮಂದಿರದ ಆನಂದ್ ದೇಸಾಯಿ ಮಹಾರಾಜರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿಯವರು ಕೇವಲ ಮನರಂಜನೆಗಾಗಿ ಈ ವೇದಿಕೆಯನ್ನು ಕಲ್ಪಿಸಿಲ್ಲ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ಕಾರ್ಯ ನಿಜಕ್ಕೂ ಶ್ಲಾಘನೀವಾದದು. ಅವರಲ್ಲಿರುವ ಶೈಕ್ಷಣಿಕ ಕಾಳಜಿಯು ಸರ್ವರಿಗೂ ಮಾದರಿಯಾಗಿದೆ ಎಂದರು.ಹತ್ತರಗಿ ಕಾರಿಮಠದ ಗುರುಸಿದ್ದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದರು. ಸಮಾರೋಪದಲ್ಲಿ ಯುವಧುರೀಣ ರಾಹುಲ ಜಾರಕಿಹೊಳಿ, ಬೆಳಗಾವಿ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಕಿರಣ್‌ಸಿಂಗ್ ರಜಪೂತ, ರವಿ ಜಿಂಡ್ರಾಳಿ, ದಯಾನಂದ ಪಾಟೀಲ, ರಿಯಾಜ್ ಚೌಗಲಾ, ಸತೀಶ ಹಟ್ಟಿಹೋಳಿ ಸುರೇಶ್ ಜೋರಾಪುರ್, ಈರಣ್ಣ ಬಿಸಿರೊಟ್ಟಿ, ಮಹದೇವ ಪಟೋಳಿ, ಜಂಗ್ಲಿ ಸಾಹೇಬ್ ನಾಯಕ, ಶಶಿಕಾಂತ್ ಹಟ್ಟಿಹೋಳಿ ಇದ್ದರು. ಎ.ಜೆ.ಕೋಳಿ ಕಾರ್ಯಕ್ರಮ ನಿರೂಪಿಸಿದರು.ಸಾಧಕರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಅನಿಲ ನಂಜನ್ನವರ(ವೈದ್ಯಕೀಯ), ಶಿವಾಜಿ ಕಳವಿಕಟ್ಟಿ (ಶಿಕ್ಷಣ), ಭರಮಾ ಧುಬದಾಳಿ (ಕೃಷಿ), ಶಿಕ್ಷಕ ಅಡಿಯಪ್ಪ ನಾಯಿಕ (ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್), ಪ್ರಜ್ವಲ್‌ಕುಮಾರ್ ತಳವಾರ (ಕ್ರೀಡಾ), ರೂಪಾ ಕಡಗಾವಿ (ಸಂಗೀತ) ಅವರನ್ನು ಸತ್ಕರಿಸಿ ಗೌರವಿಸಲಾಯಿತು.