ಸಾರಾಂಶ
ತಾಲೂಕಿನ ಲಚ್ಯಾಣ ಗ್ರಾಮದ ಕೊಳವೆಬಾವಿಯಲ್ಲಿ ಬಿದ್ದಿದ್ದ ಸಾತ್ವಿಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಸ್ವಗ್ರಾಮದ ಸಿದ್ಧಲಿಂಗ ಮಹಾರಾಜರ ಮಠಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಶರಣೋ ಶಂಕರ ಸಿದ್ಧಲಿಂಗ ಮಹಾರಾಜ ಕೀ ಜೈ ಎಂಬ ಹರ್ಷೋದ್ಗಾರದ ಮಧ್ಯೆ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಲಚ್ಯಾಣ ಗ್ರಾಮದ ಕೊಳವೆಬಾವಿಯಲ್ಲಿ ಬಿದ್ದಿದ್ದ ಸಾತ್ವಿಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಸ್ವಗ್ರಾಮದ ಸಿದ್ಧಲಿಂಗ ಮಹಾರಾಜರ ಮಠಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಶರಣೋ ಶಂಕರ ಸಿದ್ಧಲಿಂಗ ಮಹಾರಾಜ ಕೀ ಜೈ ಎಂಬ ಹರ್ಷೋದ್ಗಾರದ ಮಧ್ಯೆ ಸ್ವಾಗತಿಸಿದರು.ಬಾಲಕ ಸ್ವಾತಿಕ್ ಜಿಲ್ಲಾಸ್ಪತ್ರೆಯಿಂದ ಆ್ಯಂಬುಲೆನ್ಸ್ ಹಾಗೂ ಪೊಲೀಸ್ ಭದ್ರತೆ ಭದ್ರತೆನಲ್ಲಿ ಪಾಲಕರ ಜೊತೆ ಸ್ವಗ್ರಾಮಕ್ಕೆ ಆಗಮಿಸಿದನು. ಕೆಲ ಸಮಯದ ಬಳಿಕ ಇಂಡಿ ಮಾರ್ಗದ ಮೂಲಕ ಮಗುವನ್ನು ಮಠಕ್ಕೆ ತರುತ್ತಿದ್ದಂತೆ ಗ್ರಾಮಸ್ಥರು ಮಠದ ಮಹಾದ್ವಾರ ಬಾಗಿನಿನಲ್ಲಿ ಮಗುವಿಗೆ ಆರತಿ ಬೆಳಗಿ, ಸಿಡುಗಾಯಿ ಒಡೆದು ಬಾಲಕನನ್ನು ಸ್ವಾಗತಿಸಿಕೊಂಡರು. ಬಳಿಕ ಮಠ ಒಳ ಪ್ರವೇಶಿಸಿ ಶ್ರೀ ಸಿದ್ದಲಿಂಗನ ದರ್ಶನ ಮಾಡಿಸಲಾಯಿತು. ಮಗು ಸಿದ್ದಲಿಂಗನ ದರ್ಶನ ಮಾಡುತ್ತಿದಂತೆ ನೆರೆದ ಭಕ್ತರ ಸಂಭ್ರಮ ಮುಗಲು ಮುಟ್ಟಿತು.
ಈ ಸಂದರ್ಭದಲ್ಲಿ ಬಾಲಕನ ಸಮ್ಮುಖದಲ್ಲಿ ಸಿದ್ದಲಿಂಗನಿಗೆ ಭಕ್ತರು ಪೂಜೆ ಸಲ್ಲಿಸಿ ಮಗುವಿಗೆ ಮಠದಲ್ಲಿನ ಸಾಧು-ಸಂತರು ವಿಭೂತಿ, ಪ್ರಸಾದ ಹಚ್ಚಿ ತೀರ್ಥ ಬಾಯಿಗೆ ಹಾಕುವುದರ ಮೂಲಕ ಮಗು ನೂರು ವರ್ಷ ಬಾಳಲಿ ಎಂದು ಹಾರೈಸಿದರು.ಬಳಿಕ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ 108 ವಾಹನ ಸಿಬ್ಬಂದಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ತದ್ದೇವಾಡಿಯ ಮಹಾಂತೇಶ ಶಾಸ್ತ್ರಿಗಳ ದಿವ್ಯ ಸಾನ್ನಿಧ್ಯದಲ್ಲಿ ಸತ್ಕರಿಸಲಾಯಿತು.