Satyagraha until water from Bhima River is released into Amarja Reservoir
-ತಕ್ಷಣ ಪೈಪ್‌ಲೈನ್ ಮರುಸ್ಥಾಪಿಸಿ- ಹೆದ್ದಾರಿ ಅಧಿಕಾರಿಗಳಿಗೆ ಆರ್ ಕೆ ಪಾಟೀಲ್ ಆಗ್ರಹ
- -ಕನ್ನಡಪ್ರಭ ವಾರ್ತೆ ಕಲಬುರಗಿ
ಭೀಮಾ ನದಿಯಿಂದ ಅಫಜಲಪುರ, ಆಳಂದ ಹಾಗೂ ಅಮರ್ಜಾ ಜಲಾಶಯಕ್ಕೆ ನೀರು ತುಂಬಿಸುವ ಮಹತ್ವದ ಜೀವಜಲ ಯೋಜನೆಯ ಪೈಪ್‌ಲೈನ್ ತೆರವು ಕುರಿತು ಹೆದ್ದಾರಿ ಪ್ರಾಧಿಕಾರ ತಕ್ಷ ಕಾರ್ಯಪ್ರವೃತ್ತರಾಗಬೇಕು. ತಕ್ಷಣ ಪೈಪ್‌ಲೈನ್ ಮರುಸ್ಥಾಪಿಸುವಂತೆ ಆರ್ ಕೆ ಪಾಟೀಲ್ ಆಗ್ರಹಿಸಿದ್ದಾರೆ.ಹೋರಾಟದ ಸ್ಥಳದಲ್ಲಿ ಮಾತನಾಡಿ, ಆಳಂದ ತಾಲೂಕಿನ ಹಡಲಗಿ ಗ್ರಾಮದಿಂದ ಅಫಜಲಪುರ ತಾಲೂಕಿನ ಅರ್ಜುಣಗಿ ಸಮೀಪ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳದವರೆಗೆ ಪಾದಯಾತ್ರೆ ನಡೆಸಲಾಗಿದೆ. ಭೀಮಾ ನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ಹರಿಸುವವರೆಗೆ ರೈತರೊಂದಿಗೆ ಸ್ಥಳದಲ್ಲೇ ಸತ್ಯಾಗ್ರಹ ನಡೆಸೋದಾಗಿ ಹೇಳಿದರು.
ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ, ಮುನ್ಸೂಚನೆಯನ್ನೂ ನೀಡದೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನೆಪದಲ್ಲಿ ಜೀವಜಲ ಯೋಜನೆಯ ಪೈಪ್‌ಲೈನ್ ಕತ್ತರಿಸಿರುವುದು ಅತ್ಯಂತ ಖಂಡನೀಯ. ರೈತರ ಹಿತಾಸಕ್ತಿ ಹಾಗೂ ಜನರ ನೀರಿನ ಹಕ್ಕಿಗಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದೂ ಆರ್ ಕೆ ಪಾಟೀಲ್ ಹೇಳಿದರು.ಫೋಟೋ
ಪಾದಾತಯತ್ರೆ 1 ಮತ್ತು ಪಾದಯಕ್ತ್ರೆ 3ಹಡಗಿಲ್‌ದಿಂದ ಅರ್ಜುಣಗಿವರೆಗೂ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ್ ನೇತೃತ್ವದಲ್ಲಿ ರೈತರು ಪಾದಯಾತ್ರೆ ನಡೆಸಿ ಬಡದಾಳ- ಅರ್ಜುಣಗಿ ಬಳಿ ಹೋರಾಟ ಆರಂಭಿಸಿದರು
---ಫೋಟೋ- ಪಾದಯಾತ್ರೆ 2
ಕಲಬುರಗಿ ಹಾಲು ಒಕ್ಕೂಟದ ಅದ್ಯಕ್ಷ ಆರ್ ಕೆ ಪಾಟೀಲ್ ನೇತೃತ್ವದಲ್ಲಿ ಬಡದಾಳ- ಅರ್ಜುಣಗಿ ಬಳಿ ಗುರುವಾರದಿಂದ ಶುರುವಾಗಿರುವ ಧರಣಿ ಸತ್ಯಾಗ್ರಹ. ಭೀಮಾದಿಂದ ಅಮರ್ಜಾಕ್ಕೆ ನೀರು ಹರಿಸುವವರೆಗೂ ಹೋರಾಟ ನಿರಂತರವೆಂದು ಘೋಷಿಸಿದ ಆರ್‌ಕೆ ಪಾಟೀಲ್.