ಸಾರಾಂಶ
ಕನ್ನಡಪ್ರಭವಾರ್ತೆ ಗಂಗಾವತಿ
ಶ್ರೀಮಾತಾ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಸತ್ಯಂ ಚಲನಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಡಿ.17ರಂದು ಜರುಗಲಿದೆ ಎಂದು ಚಿತ್ರ ನಿರ್ಮಾಪಕ ಮಹಾಂತೇಶ ವಿ.ಕೆ. ತಿಳಿಸಿದರು.ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಾತಾ ಕ್ರಿಯೇಷನ್ಸ್ ಅಡಿಯಲ್ಲಿ ಕನ್ನಡ, ತೆಲುಗು ಭಾಷೆಗಳಲ್ಲಿ “ಸತ್ಯಂ " ಚಲನಚಿತ್ರ ನಿರ್ಮಾಣಗೊಂಡಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಬಾಬು ಜಗಜೀವನರಾಮ್ ವೃತ್ತದ ಬಳಿ ಡಿ.17ರಂದು ಸಂಜೆ 5:30ಕ್ಕೆ ಸಮಾರಂಭ ಜರುಗಲಿದೆ. ಈಗಾಗಲೇ ಪ್ರಥಮ ಚಿತ್ರ ಲಡ್ಡುಮುತ್ಯಾ ಚಿತ್ರ ಯಶಸ್ಸಿಗೊಂಡಿದೆ. ಈಗ ಎರಡನೇ ಚಿತ್ರ ಸತ್ಯಂ ತೆರೆಗೆ ಸಿದ್ಧಗೊಂಡಿದೆ ಎಂದರು.ಚಿತ್ರದ ನಾಯಕ ಗಣಪ ಮತ್ತು ಕರಿಯಾ-2 ಖ್ಯಾತಿಯ ಸಂತೋಷ ಬಾಲರಾಜ, ಚಿತ್ರದ ನಾಯಕಿ ರಂಜಿನಿ ರಾಘವನ್, ಹಿರಿಯ ಹೆಸರಾಂತ ನಟರಾಜ, ಅವಿನಾಶ, ಪವಿತ್ರ ಲೋಕೇಶ, ಮುಖ್ಯಮಂತ್ರಿ ಚಂದ್ರು, ವಿನಯಪ್ರಸಾದ್, ಕಾಮಿಡಿ ಆರ್ಟಿಸ್ಟ್ ಉಮೇಶ, ಜಿ.ಬಸವರಾಜ ಕಟ್ಟಿ, ಸತ್ಯಂ ಚಿತ್ರದ ನಿರ್ದೇಶಕರಾದ ಆಶೋಕ ಕಡಬಾ, ಕ್ಯಾಮರಾಮ್ಯಾನ್ ನೋನಿಚೇಕ್ ಸುರಿ, 19-4-ಎಫ್ ಖ್ಯಾತಿಯ ಹಾಡುಗಳ ಬರಹಗಾರ ನಮ್ಮ ಚಿತ್ರದ ಸಾಹಿತಿ ರಾಜ ಕಿನ್ನಾಳ ಸೇರಿದಂತೆ ಕಲಾವಿದರು ಚಿತ್ರದಲ್ಲಿದ್ದಾರೆ ಎಂದರು.ನಗರಸಭಾ ಸದಸ್ಯ ಮನೋಹರಸ್ವಾಮಿ ಮಾತನಾಡಿದರು.ಸಮಾರಂಭಕ್ಕೆ ಸಚಿವ ಶಿವರಾಜ ತಂಗಡಗಿ, ಸಂಸದ ಕರಡಿ ಸಂಗಣ್ಣ, ಶಾಸಕ ಜನಾರ್ದನ ರೆಡ್ಡಿ, ಬಸವರಾಜ ರಾಯರಡ್ಡಿ, ಬಾದರ್ಲಿ ಹಂಪನಗೌಡ, ಮಾಜಿ ಸಂಸದ ಶಿವರಾಮಗೌಡ, ಪ್ರತಾಪಗೌಡ, ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ ಎಚ್.ಆರ್.ಶ್ರೀನಾಥ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ನ್ಯಾಯವಾದಿ ತಿಪ್ಪೇರುದ್ರಸ್ವಾಮಿ, ಅಶೋಕಸ್ವಾಮಿ ಹೇರೂರು, ರಾಘವೇಂದ್ರಶೆಟ್ಟಿ ಇದ್ದರು.