ಕೈ ಪಡೆ ಸೇರಿದ ಸವದತ್ತಿ ಬಿಜೆಪಿ ಮುಖಂಡರು

| Published : Apr 04 2024, 01:00 AM IST / Updated: Apr 04 2024, 01:01 AM IST

ಸಾರಾಂಶ

ಸವದತ್ತಿ: ಪಟ್ಟಣದ ಪುರಸಭೆ ಬಿಜೆಪಿಯ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಪಕ್ಷವನ್ನು ತೊರದು ಶಾಸಕ ವಿಶ್ವಾಸ ವೈದ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌ ಬೆಂಬಲಾರ್ಥವಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವದಾಗಿ ಸೇರ್ಪಡೆಗೊಂಡ ಬಿಜೆಪಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸವದತ್ತಿ: ಪಟ್ಟಣದ ಪುರಸಭೆ ಬಿಜೆಪಿಯ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಪಕ್ಷವನ್ನು ತೊರದು ಶಾಸಕ ವಿಶ್ವಾಸ ವೈದ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌ ಬೆಂಬಲಾರ್ಥವಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವದಾಗಿ ಸೇರ್ಪಡೆಗೊಂಡ ಬಿಜೆಪಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ಸದಸ್ಯರಾದ ಶಿವಾನಂದ ಹೂಗಾರ, ಮೌಲಾಸಾಬ ತಬ್ಬಲಜಿ, ಮಂಜುನಾಥ ಬೆಟಸೂರ, ಪ್ರವೀಣ ಪಟ್ಟಣಶೆಟ್ಟಿ ಹಾಗೂ ಬಿಜೆಪಿ ಪ್ರಮುಖರಾದ ರಾಮಾಚಾರಿ ಲಮಾಣಿ, ರಾಜು ಹಳಕಟ್ಟಿ, ರಜಾಕ ಗುಡಗುಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಪಕ್ಷದ ಶಾಲು ಹಾಕಿ ಶಾಸಕ ವಿಶ್ವಾಸ ವೈದ್ಯ ಸ್ವಾಗತಿಸಿದರು.

ಕಾಂಗ್ರೆಸ್ ಮುಖಂಡರಾದ ಮಹಾರಾಜಗೌಡ ಪಾಟೀಲ, ಮಲ್ಲು ಜಕಾತಿ, ಬಸವರಾಜ ಪ್ರಭುನವರ, ಚಂದ್ರಣ್ಣ ಶಾಮರಾಯನವರ, ಮಲ್ಲಿಕಾರ್ಜುನ ಪುರದಗುಡಿ, ಸುರೇಶ ಬಡಗಿಗೌಡರ, ಬಸವರಾಜ ಗುರಣ್ಣವರ, ದೀಪಕ ಜಾನ್ವೇಕರ, ಪ್ರಭು ಪ್ರಭುನವರ, ರಾಮನಗೌಡ ತಿಪರಾಶಿ, ಲತೀಪ ಸವದತ್ತಿ, ಸುಭಾಸ ರಜಪುತ, ಧರೆಪ್ಪ ಮಡ್ಲಿ, ಪ್ರವೀಣ ರಾಮಪ್ಪನವರ, ಎಫ್.ವೈ.ಗಾಜಿ, ಅಮಿತ ಜೋರಾಪುರ ಉಪಸ್ಥಿತರಿದ್ದರು.