ಸಾರಾಂಶ
ಸವಣೂರ ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜ. ೨೮ರಂದು ಸವಣೂರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಚಂದ್ರಗೌಡ ಪಾಟೀಲ ಹೇಳಿದರು.
ಸವಣೂರ: ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜ. ೨೮ರಂದು ಸವಣೂರ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಚಂದ್ರಗೌಡ ಪಾಟೀಲ ಹೇಳಿದರು.ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜ.೨೮ರಂದು ಬೆಳಗ್ಗೆ ೭-೩೦ಕ್ಕೆ ಜರುಗುವ ಧ್ವಜಾರೋಹಣ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿ ವಹಿಸಲಿದ್ದು, ಉಪವಿಭಾಗಾಧಿಕಾರಿ ಮಮತಾ ಹೊಸಗೌಡ್ರ ರಾಷ್ಟ್ರ ಧ್ವಜಾರೋಹಣ,
ತಹಸೀಲ್ದಾರ್ ಭರತರಾಜ್ ಕೆ.ಎನ್. ನಾಡ ಧ್ವಜಾರೋಹಣ, ಕಸಾಪ ಅಧ್ಯಕ್ಷ ಚಂದ್ರಗೌಡ ಪಾಟೀಲ ಪರಿಷತ್ತು ಧ್ವಜಾರೋಹಣವನ್ನು ನೆರವೇರಿಸುವರು.ಮೆರವಣಿಗೆ: ೮-೩೦ಕ್ಕೆ ವಿವಿಧ ಕಲಾ ತಂಡಗಳೊಂದಿಗೆ ಸಾಗುವ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಪಟ್ಟಣದ ಸಿಂಪಿಗಲ್ಲಿ ಶ್ರೀ ಗಣೇಶ ದೇವಸ್ಥಾನದಿಂದ ಹೊರಟು ಮಾರ್ಕೇಟ್ ರಸ್ತೆ, ಶುಕ್ರವಾರ ಪೇಟೆ ಮೂಲಕ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪ ತಲುಪುವುದು.೧೧-೩೦ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಕಲ್ಮಠದ ಮಹಾಂತ ಸ್ವಾಮೀಜಿ, ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಯಾಸೀರಅಹ್ಮದಖಾನ ಪಠಾಣ ಅಧ್ಯಕ್ಷತೆ ವಹಿಸುವರು. ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಪ್ರೊ.ವೀರಯ್ಯ ಗುರುಮಠ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿವೃತ್ತ ಐಎಎಸ್ ಅಧಿಕಾರಿ ಡಾ. ಅನಿಲ ವಿನಾಯಕ ಗೋಕಾಕ ಅವರು ಉದ್ಘಾಟಿಸುವರು.ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಪುಸ್ತಕಗಳ ಲೋಕಾರ್ಪಣೆಗೊಳಿಸುವರು. ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಮುಖ್ಯ ಸಚೇತಕ ಸಲೀಂಅಹ್ಮದ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ, ಸಿಪಿಐ ಆನಂದ ಒಣಕುದರಿ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಎಸ್.ಉಮಾ ಭಾಗವಹಿಸಲಿದ್ದಾರೆ.ಮಧ್ಯಾಹ್ನ ೧೨-೩೦ಕ್ಕೆ ನಡೆಯಲಿರುವ ಸಂಕೀರ್ಣ ಗೋಷ್ಠಿ-೧ ರ ಅಧ್ಯಕ್ಷತೆಯನ್ನು ಗದಗಿನ ನಿವೃತ್ತ ಉಪ ನಿರ್ದೇಶಕರಾದ ಐ.ಬಿ. ಬೆನಕೊಪ್ಪ ವಹಿಸಲಿದ್ದು, ಉಪನ್ಯಾಸಕ ಗಂಗಾನಾಯ್ಕ ಎಲ್., ಆಶಯ ನುಡಿ ನುಡಿಯಲಿದ್ದಾರೆ. ಮುಖ್ಯಗುರು ಸಂತೇಬೆನ್ನೂರ ಫೈಜ್ನಟ್ರಾಜ್, ಸುವರ್ಣ ಕರ್ನಾಟಕ ಕನ್ನಡದ ವೈಶಿಷ್ಟ್ಯತೆ ಮತ್ತು ಲಕ್ಷ್ಮೇಶ್ವರದ ಕಸಾಪ ಮಾಜಿ ಅಧ್ಯಕ್ಷೆ ಡಾ. ಜಯಶ್ರೀ ಹೊಸಮನಿ, ಸಮಕಾಲಿನ ಸಮಾಜದಲ್ಲಿ ಮಹಿಳೆ ಪಾತ್ರ ಎಂಬ ವಿಷಯದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.ಮಧ್ಯಾಹ್ನ ೨ಗಂಟೆಗೆ ನಡೆಯಲಿರುವ ಸಂಕೀರ್ಣ ಗೋಷ್ಠಿ-೨ರ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ವಹಿಸಲಿದ್ದಾರೆ. ಪ್ರಾಚಾರ್ಯ ಆರ್.ಎಸ್. ತೊಂಡೂರ ಆಶಯ ನುಡಿ ನುಡಿಯಲಿದ್ದಾರೆ. ಕರಾರೈಸಂ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಪ್ರಸ್ತುತ ದಿನಗಳಲ್ಲಿ ರೈತರ ಸಮಸ್ಯೆಗಳು ಮತ್ತು ಜಾನಪದ ಕಲಾವಿದ ಎಸ್.ಎಸ್. ಹಿರೇಮಠ ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಷಯದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.ಮಧ್ಯಾಹ್ನ ೩-೩೦ಕ್ಕೆ ಜರುಗುವ ಕವಿಗಳ ಕಲರವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಡಗಿ ಸಾಹಿತಿ ಜೀವರಾಜ ಛತ್ರದ ವಹಿಸಲಿದ್ದು, ಸಾಹಿತಿ ಲಿಂಗರಾಜ ಸೊಟ್ಟಪ್ಪನವರ ಆಶಯ ನುಡಿ ನುಡಿಯಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಕವಿಗಳು ಭಾಗವಹಿಸಲಿದ್ದಾರೆ.ಸಂಜೆ ೫ ಗಂಟೆಗೆ ಜರಗುವ ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ಚಂದ್ರಗೌಡ ಪಾಟೀಲ ವಹಿಸಲಿದ್ದು, ಕಸಾಪ ಗೌರವ ಕಾರ್ಯದರ್ಶಿ ಸಿ.ವಿ. ಗುತ್ತಲ ಆಶಯ ನುಡಿ ನುಡಿಯಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿ ಎಸ್.ವಿ. ಕೋಳಿವಾಡ ನಿರ್ಣಯಗಳ ಮಂಡನೆ ಮಾಡಲಿದ್ದಾರೆ.ಸಂಜೆ ೫-೩೦ಕ್ಕೆ ನಡೆಯಲಿರುವ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಗುವುದು.ಸಂಜೆ ೫-೪೫ಕ್ಕೆ ಜರುಗುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯ ಅಜ್ಜನವರು, ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ, ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ ವಹಿಸುವರು. ಸಮ್ಮೇಳನಾಧ್ಯಕ್ಷರಾದ ಸಾಹಿತಿ, ಪ್ರೊ. ವೀರಯ್ಯ ಗುರುಮಠ ಉಪಸ್ಥಿತಿಯಲ್ಲಿ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಚಂದ್ರಗೌಡ ಪಾಟೀಲ ವಹಿಸಲಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಹಿರಿಯ ಸಾಹಿತಿ ಎಚ್.ಐ. ತಿಮ್ಮಾಪೂರ ಸಮಾರೋಪ ನುಡಿ ನುಡಿಯಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ, ಬಿಇಒ ಎಂ.ಎಫ್. ಬಾರ್ಕಿ, ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ, ಪ್ರಮುಖರಾದ ಶಶಿಧರ ಯಲಿಗಾರ, ಮಹೇಶ ಸಾಲಿಮಠ, ಸದಾನಂದ ಕೆಮ್ಮಣಕೇರಿ, ಮಂಜುನಾಥ ಗಾಣಿಗೇರ, ತಿಪ್ಪಣ್ಣ ಸುಬ್ಬಣ್ಣನವರ, ಧರಿಯಪ್ಪಗೌಡ ಪಾಟೀಲ ಭಾಗವಹಿಸಲಿದ್ದಾರೆ.ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಾರೆಪ್ಪ ತಳ್ಳಿಹಳ್ಳಿ, ಕರಾಸನೌ ಸಂಘದ ಅಧ್ಯಕ್ಷ ಬಸವರಾಜ ಹೊಸಮನಿ, ಸ್ವಾಗತಿ ಸಮಿತಿ ಕಾರ್ಯಾಧ್ಯಕ್ಷ ರಮೇಶ ಅರಗೋಳ, ಉಪಾಧ್ಯಕ್ಷ ಎಂ.ಜೆ. ಮುಲ್ಲಾ, ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ ಮಾತನಾಡಿದರು.ಸ್ವಾಗತ ಸಮಿತಿ ಪದಾಧಿಕಾರಿಗಳಾದ ಸುಭಾಸ ಮಜ್ಜಗಿ, ಸಿ.ವಿ.ಗುತ್ತಲ, ಉಮೇಶ ದಾಮೋಧರ, ಚನ್ನಯ್ಯ ಹಿರೇಮಠ, ಶ್ರೀನಿವಾಸ ಖಾರದ, ಆರ್.ಎಸ್.ತೊಂಡೂರ, ವಿಶ್ವನಾಥ ಹಾವಣಗಿ, ಬಸನಗೌಡ ಪಾಟೀಲ ಹಾಗೂ ಇತರರು ಇದ್ದರು.