ಸಾರಾಂಶ
ಯಲಹಂಕ ಉಪನಗರ ಬಳಿಯ ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕ ಮತ್ತು ವೀರ ಸಾವರ್ಕರ್ ಛಾಯಾಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಯಲಹಂಕ ಉಪನಗರ ಬಳಿಯ ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕ ಮತ್ತು ವೀರ ಸಾವರ್ಕರ್ ಛಾಯಾಚಿತ್ರಕ್ಕೆ ಕಪ್ಪು ಬಣ ಬಳಿದ ಆರೋಪದಡಿ ಮೂವರು ಎನ್‌ಎಸ್‌ಯುಐ ಕಾರ್ಯಕರ್ತರನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಿಶ್ಚಲ್‌ಗೌಡ, ಪ್ರವೀಣ್ ಹಾಗೂ ಲಕ್ಷ್ ಗೌಡ ಬಂಧಿತರು. ಈ ಮೂವರು ಎನ್‌ಎಸ್‌ಯುಐ ಕಾರ್ಯಕರ್ತರು ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಸುಮಾರು 1.30ಕ್ಕೆ ಯಲಹಂಕ ಉಪನಗರದ ಸಂದೀಪ್ ಉನ್ನೀಕೃಷ್ಣನ್ ರಸ್ತೆಯ ಡೈರಿ ಸರ್ಕಲ್‌ನಲ್ಲಿ ಇರುವ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕ ಮತ್ತು ಅದರ ಮೇಲಿನ ಸಾವರ್ಕರ್ ಛಾಯಾಚಿತ್ರಕ್ಕೆ ಕಪ್ಪು ಬಣ ಬಳಿದು ವಿರೂಪಗೊಳಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.