ಸಾರಾಂಶ
ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಹವಾಮಾನ ಬಿಕ್ಕಟ್ಟನ್ನು ವಾಸ್ತವವಾಗಿ ಅರಿಯಲು ವಾರ್ಷಿಕವಾಗಿ ಏ.22ರಂದು ಭೂಮಿ ದಿನವನ್ನು ಆಚರಿಸಲಾಗುತ್ತದೆ.
ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದಲ್ಲಿ ಏರ್ಪಡಿಸಲಾದ ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಕಾಂತ ಕುರಣೆ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಹವಾಮಾನ ಬಿಕ್ಕಟ್ಟನ್ನು ವಾಸ್ತವವಾಗಿ ಅರಿಯಲು ವಾರ್ಷಿಕವಾಗಿ ಏ.22ರಂದು ಭೂಮಿ ದಿನವನ್ನು ಆಚರಿಸಲಾಗುತ್ತದೆ. ವರ್ಷಗಳು ಉರುಳಿದಂತೆ ಹವಾಮಾನವು ಹದಗೆಡುತ್ತಿದೆ. ನಮ್ಮ ಪ್ರಕೃತಿ ಸಂರಕ್ಷಿಸಲು ಕೈಜೋಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಪ್ರಧಾನ ಸಿವಿಲ್ ಜಡ್ಜ್ ಹಾಗೂ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ದೀಪಾ ಅರಳಗುಂಡಿ ಹಾಗೂ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು. ನ್ಯಾಯವಾದಿ, ಸಂಪನ್ಮೂಲ ವ್ಯಕ್ತಿ ರವೀಂದ್ರ ಎಸ್ ಎಮ್ ಮಾತನಾಡಿ, ವಿಶ್ವ ಭೂ ದಿನದ ಹಿನ್ನೆಲೆಯನ್ನು ಹಾಗೂ ಮಹತ್ವವನ್ನು ವಿವರಿಸಿ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಜೆ.ನಾಯ್ಕ ಮಾತನಾಡಿ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ, ಕಾಡುಗಳ ಕಣ್ಮರೆಯಾಗುವಿಕೆ ಮತ್ತು ಓಝೋನ್ ಪದರದ ಸವಕಳಿ ಬಗ್ಗೆ ವಿವರಿಸಿದರು.
ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಸೀತಾರಾಮ ಹರಿಕಾಂತ, ವಿವೇಕ ನಾಯ್ಕ, ಶೇಖರ ಹರಿಕಾಂತ ಹಾಗೂ ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ ನಾಯ್ಕ ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಆರ್. ಜಿ. ನಾಯ್ಕ ನಿರೂಪಿಸಿದರು.ಭಟ್ಕಳದ ನ್ಯಾಯಾಲಯದಲ್ಲಿ ವಿಶ್ವಭೂಮಿ ದಿನ ಆಚರಿಸಲಾಯಿತು.