ಸಾರಾಂಶ
ಸನಾತನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಗ್ರಂಥರೂಪದಲ್ಲಿ ನಮ್ಮ ಋಷಿಮುನಿಗಳು ಸನಾತನ ಧರ್ಮ ಸಂಸ್ಕಾರವನ್ನು ನಮಗೆ ಧಾರೆ ಎರದಿದ್ದಾರೆ. ಇಡೀ ವಿಶ್ವವೇ ನಮ್ಮ ಸನಾತನವನ್ನು ಮೆಚ್ಚುತ್ತಿದೆ. ಇಂತಹ ಧರ್ಮವನ್ನು ನಾವೆಲ್ಲರೂ ಉಳಿಸಿ-ಬೆಳೆಸಬೇಕು.
ಹುಬ್ಬಳ್ಳಿ:
ಸನಾತನ ಧರ್ಮ ಉಳಿಸಿ-ಬೆಳೆಸಬೇಕು. ಹಿಂದೂ ಧರ್ಮ ಪಾಲಿಸಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಶ್ರೀಯೋಗೀಶ್ವರ ಯಾಜ್ಞವಲ್ಕ್ಯಸೇವಾ ಟ್ರಸ್ಟ್ ವತಿಯಿಂದ ಶನಿವಾರದಿಂದ ಎರಡು ದಿನ ನಡೆಯುವ ಶ್ರೀಯೋಗಿಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಯಾಜ್ಞವಲ್ಕ್ಯ ಮುನೀಂದ್ರರು ಯೋಗಶಾಸ್ತ್ರದಲ್ಲಿ ನಿಷ್ಣಾತರೂ, ಯೋಗಸಿದ್ಧಿ ಹೊಂದಿದವರೂ ಆಗಿದ್ದರಿಂದ ಇವರಿಗೆ "ಯೋಗಿಶ್ವರ " ಎಂಬ ಹೆಸರಿನಿಂದ ಖ್ಯಾತರಾಗಿದ್ದಾರೆ. ಈ ಭರತ ಖಂಡ ಜಾಗೃತವಾಗಿ ನಿಂತಿರುವುದೇ ಇಂತಹ ಯೋಗಿ-ಸಂತರಿಂದ ಎಂದರು.ಸನಾತನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಗ್ರಂಥರೂಪದಲ್ಲಿ ನಮ್ಮ ಋಷಿಮುನಿಗಳು ಸನಾತನ ಧರ್ಮ ಸಂಸ್ಕಾರವನ್ನು ನಮಗೆ ಧಾರೆ ಎರದಿದ್ದಾರೆ. ಇಡೀ ವಿಶ್ವವೇ ನಮ್ಮ ಸನಾತನವನ್ನು ಮೆಚ್ಚುತ್ತಿದೆ. ಇಂತಹ ಧರ್ಮವನ್ನು ನಾವೆಲ್ಲರೂ ಉಳಿಸಿ-ಬೆಳೆಸೋಣ ಎಂದು ಕರೆ ನೀಡಿದರು.
ಕಣ್ವಮಠದ ಪೀಠಾಧ್ಯಕ್ಷ ವಿದ್ಯಾಕಣ್ವ ವಿರಾಜತೀರ್ಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗೋವಿಂದ ಜೋಶಿ, ಶ್ರೀಕಾಂತ್ ಕರಿ, ಸತ್ಯನಾರಾಯಣ ಮುಜಮದಾರ, ಮನೋಹರ ಮಾಡಗೇರ, ಗುರುಚಿದಂಬರ ದೀಕ್ಷಿತ, ವಿಶ್ವನಾಥ ಸ್ವಾಮಿಗಳು, ಶಂಕರಭಟ್ ಜೋಶಿ, ವೇಣುಗೋಪಾಲ ಕೃಷ್ಣ, ಸತ್ಯನಾರಾಯಣ ಮರಟಗೇರಿ ಸೇರಿದಂತೆ ಹಲವರಿದ್ದರು.