ನಶಿಸಿ ಹೋಗುತ್ತಿರುವ ಜಾನಪದ ಕಲೆ ಉಳಿಸಿ ಬೆಳೆಸಿ: ಡಾ.ಎಸ್.ಬಾಲಾಜಿ

| Published : Jan 13 2025, 12:47 AM IST

ಸಾರಾಂಶ

ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಅರ್ಹ ಕಲಾವಿದರಿಗೆ ಮಾಶಾಸನ ದೊರಕಿಸಲು ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮ ಮೇಲಿದೆ. ಎಲೆ ಮರೆಯ ಕಾಯಿಯಂತಿರುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.

ಪಟ್ಟಣದ ಸಮೀಪದ ಬಳ್ಳೂರ ಪುನರ್ವಸತಿ ಕೇಂದ್ರದಲ್ಲಿ ಕನ್ನಡ ಜಾನಪದ ಪರಿಷತ್ ಮುಧೋಳ ತಾಲೂಕು ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರ ಸ್ಥಿತಿಗತಿ ಅರಿಯಲು ಸಮೀಕ್ಷೆ ಮಾಡಬೇಕು. ಜಾನಪದ ಕಲೆ ಮತ್ತು ಕಲಾವಿದರ ಕುರಿತು ದಾಖಲೀಕರಣ ಮಾಡಬೇಕು ಎಂದರು. ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಅರ್ಹ ಕಲಾವಿದರಿಗೆ ಮಾಶಾಸನ ದೊರಕಿಸಲು ಪ್ರಯತ್ನಿಸಬೇಕೆಂದು ಹೇಳಿದರು. ರಾಜ್ಯ ಕಾರ್ಯದರ್ಶಿ ಪ್ರೊ.ಕೆ.ಎಸ್. ಕೌಜಲಗಿ ಮಾತನಾಡಿ, ಜಾನಪದ ಕಲೆಗಳಲ್ಲಿ ಹಲವಾರು ವಿಧಗಳಿವೆ. ಅವುಗಳನ್ನು ಇಂದಿನ ಯುವ ಸಮೂಹಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಬೇಕೆಂದು ಪದಾಧಿಕಾರಿಗಳಿಗೆ ಹೇಳಿದರು.

ಮುಧೋಳ ಘಟಕದ ನೂತನ ಅಧ್ಯಕ್ಷ ಡಾ. ಸುನೀಲ ಬಿರಾದಾರ, ಗೌರವಾಧ್ಯಕ್ಷ ಸುರೇಶ ಭಸ್ಮೆ ಮತ್ತು ಪದಾಧಿಕಾರಿಗಳಿಗೆ ಪದಪತ್ರ ನೀಡಲಾಯಿತು. ವಿವಿಧ ಜಾನಪದ ಕಲಾ ತಂಡಗಳಿಂದ ಗಾಯನ, ಭಜನೆ, ಹಂತಿ ಪದ ಸೇರಿದಂತೆ ಜಾನಪದ ಹಾಡುಗಳು ಮೊಳಗಿದವು. ಮುಧೋಳ ತಾಲೂಕು ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹಾರುಗೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಗಾಣಿಗ ಸಮಾಜ ನೌಕರರ ಸಂಘದ ರಾಜ್ಯಾಧ್ಯಕ್ಷ ಆರ್.ಜಿ.ಪಾಟೀಲ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಬಿ.ನಬಿವಾಲೆ, ಜಿಲ್ಲಾ ಖಜಾಂಚಿ ಸುರೇಶ ವಸ್ತ್ರದ, ಶ್ರೀಕಾಂತಯ್ಯ ಹಿರೇಮಠ, ಸಿದ್ದಯ್ಯ ಬುಗಟಗಿಮಠ, ಬಸಯ್ಯ ಪೂಜಾರಿ, ನಾಗನಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ರಾಜಶೇಖರ ಬಿರಾದಾರ, ಹಣಮಂತ ಬಿರಾದಾರ, ಲಕ್ಕವ್ವ ನಾವಿ, ಸದಾನಂದ ಕಳ್ಳೆಪ್ಪಗೋಳ, ರೇವಣಸಿದ್ದಯ್ಯ ಮರೇಗುದ್ದಿ, ನಾಮದೇವ ಕೋಪರಡೆ, ಅವಿನಾಶ ಕೋಷ್ಠಿ, ಹನಮಂತ ಪೂಜಾರಿ, ಬಸವರಾಜ ಮಹಾಲಿಂಗೇಶ್ವರಮಠ, ಶಶಿಕಾಂತ ಮೋರೆ, ರವಿ ಅಕ್ಕಿಮರಡಿ, ಸಂಜು ಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಮರನೂರ ನಿರೂಪಿಸಿದರು. ಶಿವಕನ್ಯೆ ಕುಳ್ಳೋಳ್ಳಿ ಸ್ವಾಗತಿಸಿದರು. ರೇಖಾ ಒಂಟಗೋಡಿ ವಂದಿಸಿದರು.