ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿ: ಶಾಸಕ ತುನ್ನೂರು

| Published : Feb 05 2024, 01:50 AM IST

ಸಾರಾಂಶ

ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ ಕಲೆ ಉಳಿಸಿ ಬೆಳೆಸುವ ಸಂಸ್ಥೆಯು ಮುಂದಿನ ದಿನಗಳಲ್ಲಿ ಸದಾಕಾಲವೂ ಯಶಸ್ವಿಯಾಗಲಿ ಕಲ್ಯಾಣದಿಂದ ಅಖಂಡ ಕರ್ನಾಟಕದವರಿಗೆ ಸಂಸ್ಥೆಯ ಹೆಮ್ಮರವಾಗಿ ಬೆಳೆಯಲಿ.

ಕನ್ನಡಪ್ರಭ ವಾರ್ತೆ ಶಹಾಪುರ

ನಮ್ಮ ನಾಡಿನ ಸಂಸ್ಕೃತಿ ಸಾರುವ, ನಮ್ಮ ಬದುಕಿನ ವಿವಿಧ ಮಜಲುಗಳನ್ನು ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ ಕಲೆ ಸಂಪ್ರದಾಯ, ಆಚರಣೆ, ಉಡುಗೆ-ತೊಡುಗೆಗಗಳು, ಸಾಹಿತ್ಯ ಮತ್ತು ಸಂಗೀತ ಇವುಗಳನ್ನು ಉಳಿಸಿ, ಪೋಷಿಸುವ ಜವಾಬ್ದಾರಿ ನಮ್ಮೆಲರದ್ದಾಗಿದೆ ಎಂದು ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದಲ್ಲಿರುವ ಜನನಿ ಪೂರ್ವ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಕಾಡಂಗೇರಾ 2ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಲ್ಯಾಣ ಕಲಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ ಕಲೆ ಉಳಿಸಿ ಬೆಳೆಸುವ ಸಂಸ್ಥೆಯು ಮುಂದಿನ ದಿನಗಳಲ್ಲಿ ಸದಾಕಾಲವೂ ಯಶಸ್ವಿಯಾಗಲಿ ಕಲ್ಯಾಣದಿಂದ ಅಖಂಡ ಕರ್ನಾಟಕದವರಿಗೆ ಸಂಸ್ಥೆಯ ಹೆಮ್ಮರವಾಗಿ ಬೆಳೆಯಲಿ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಚರಬಸವೇಶ್ವರ ಸಂಸ್ಥಾನದ ಬಸವಯ್ಯ ಶರಣರು ಮಾತನಾಡಿದರು.

ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರೆಡ್ಡಿ ದರ್ಶನಾಪೂರ ಮಾತನಾಡಿ, ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯು ಮುಂದಿನ ಅನೇಕ ವಿವಿಧ ರೀತಿಯ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಮ್ಮ ಯಾದಗಿರಿ ಜಿಲ್ಲೆಯಲ್ಲಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಗೌಡಪ್ಪಗೌಡ ಆಲ್ದಾಳ, ಪ್ರಕಾಶ್ ಅಂಗಡಿ, ಆಯೂಬ ಜಮಾದಾರ್, ದೇವಿಂದ್ರಪ್ಪ ತಳವಾರ ಮೌನೇಶ್ ಹಳಿಸಗರ್ ಅವರನ್ನು ಸನ್ಮಾನಿಸಲಾಯಿತು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಸಂಸ್ಥೆಯ ಅಧ್ಯಕ್ಷ ಶರಣು ಎಸ್. ಕಾಡಂಗೇರಾ, ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ, ಕಸಾಪ ಭೀ.ಗುಡಿ ವಲಯದ ಅಧ್ಯಕ್ಷ ಶರಣಬಸವ ಬಿರಾದಾರ್, ಕರವೇ ತಾಲೂಕಾಧ್ಯಕ್ಷರಾದ ವೆಂಕಟೇಶ ಬೊನೇರ, ಕೆಂಭಾವಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್, ಅಂಬ್ರೇಶಗೌಡ, ಮಲ್ಲಣ್ಣಗೌಡ ರಾಯಚೂರು, ಕಾರ್ಮಿಕ ಸಂಘದ ಅಧ್ಯಕ್ಷ ಅಂಬ್ರೇಶ ಗುಡಗುಂಟಿ, ಡಾ. ಶಂಕರಗೌಡ ಯಕ್ಷಂತಿ ಇತರರಿದ್ದರು. ಮಲ್ಲಯ್ಯ ಸ್ವಾಮಿ ನಿರೂಪಿಸಿದರು. ತಿಪ್ಪಣ್ಣ ಕ್ಯಾತನಾಳ ಸ್ವಾಗತಿಸಿದರು.