ಸಾರಾಂಶ
ಹಣ, ಅನ್ನ ಸೇರಿ ಹಲವಾರು ದಾನಗಳಲ್ಲಿಯೂ ರಕ್ತದಾನ ಶ್ರೇಷ್ಠವಾದ ದಾನವಾಗಿದೆ. ಕಾರಣ ಜೀವವೇ ಇಲ್ಲದ ಮೇಲೆ ಬೇರೆ ದಾನ ಪಡೆದು ಫಲವೇನು. ಹೀಗಾಗಿ ಜೀವ ರಕ್ಷಕ ರಕ್ತದಾನ ಮಹಾದಾನವಾಗಿದೆ. ರಕ್ತದಾನ ಮಾಡಿ, ಜೀವ ಉಳಿಸಿ
ಕನ್ನಡಪ್ರಭ ವಾರ್ತೆ ಭಾಲ್ಕಿ
ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಿ ಎಂದು ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟನ ಅಧ್ಯಕ್ಷ ಡಾ. ವಿಲಾಸ ಕನಸೆ ಮನವಿ ಮಾಡಿದರು.ಅವರು ಪಟ್ಟಣದ ಖಂಡ್ರೆ ಗಲ್ಲಿ ಹತ್ತಿರದ ಪಾಟೀಲ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ ವತಿಯಿಂದ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬರು ರಕ್ತದಾನ ಮಾಡುವದರಿಂದ ಮೂರು ಜೀವ ಉಳಿಸಬಹುದು. ಜೀವ ರಕ್ಷಕ ರಕ್ತದಾನ ಮಹಾದಾನವಾಗಿದೆ ಎಂದರು.
ಹಣ, ಅನ್ನ ಸೇರಿ ಹಲವಾರು ದಾನಗಳಲ್ಲಿಯೂ ರಕ್ತದಾನ ಶ್ರೇಷ್ಠವಾದ ದಾನವಾಗಿದೆ. ಕಾರಣ ಜೀವವೇ ಇಲ್ಲದ ಮೇಲೆ ಬೇರೆ ದಾನ ಪಡೆದು ಫಲವೇನು. ಹೀಗಾಗಿ ಜೀವ ರಕ್ಷಕ ರಕ್ತದಾನ ಮಹಾದಾನವಾಗಿದೆ. ರಕ್ತದಾನ ಮಾಡಿ, ಜೀವ ಉಳಿಸಿ ಎಂದು ಹೇಳಿದರು.ನ್ಯಾಯವಾದಿ ಉಮಾಕಾಂತ ವಾರದ ಪ್ರಾಸ್ತಾವಿಕ ಮಾತನಾಡಿ, ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಪ್ರತಿವರ್ಷ ರಕ್ತದಾನ ಶಿಬಿರ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ರಸಪ್ರಶ್ನೆ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳಲ್ಲಿ ಆಸನ ವ್ಯವಸ್ಥೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಸೇರಿ ಹಲವಾರು ಜನಪರ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರ ಸೇವೆಯೇ ರೋಟರಿ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಡೈಮಂಡ್ ಗ್ರೂಪ್ ಆಫ್ ಇನ್ಸಿಟ್ಯೂಟ್ ಅಧ್ಯಕ್ಷ ಎಸ್‌ಕೆ ಮಸ್ತಾನ್ ವಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ. ವಸಂತ ಪವಾರ, ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿದರು.ಡಾ. ಶಶಿಕಾಂತ ಭೂರೆ, ರೋಟರಿ ಕ್ಲಬ್‌ನ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದರು. ಇದೇ ವೇಳೆ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ನಿತಿನ ಪಾಟೀಲ, ಡಾ. ಕವಿತಾ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಡಾ. ಸಂತೋಷ ಕಾಳೆ, ನ್ಯಾಯವಾದಿ ಸಾಗರ ನಾಯಿಕ, ಡಾ. ಅಮಿತ ಅಷ್ಟೂರೆ, ಉದ್ಯಮಿ ಯೋಗೇಶ ಅಷ್ಟೂರೆ, ಪ್ರಮುಖರಾದ ಸಂಜೀವ ಪಂಡರಗಿರೆ, ಡಾ. ವಿಕ್ರಮ ದೇವಪ್ಪ, ಡಾ. ಸಜ್ಜಲ್ ಬಳತೆ, ಪ್ರಾಂಶುಪಾಲ ಅಶೋಕ ರಾಜೋಳೆ, ನ್ಯಾಯವಾದಿ ಸೌರಭ ನಾಯಿಕ, ಬಸವಾ ಪಾಟೀಲ, ಬೀದರಿನ ಬ್ರಿಮ್ಸ್ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ಎಂ. ಪಾಟೀಲ, ಶಾಂತಕುಮಾರ ಸಿರಗಾಪೂರೆ, ಡಾ. ಸುಪ್ರಿಯಾ ಪಾಟೀಲ, ಪ್ರಭು ಬೆಳ್ಳೂರ, ಡಾ. ಪ್ರಭುಲಿಂಗ ಸ್ವಾಮಿ ಉಪಸ್ಥಿತರಿದ್ದರು.