ದೇಶಿಯ ಸೊಗಡನ್ನು ಎಳೆಯ ಮನಸ್ಸಿಗೆ ತುಂಬಬೇಕು. ದೇವರಆರಾಧನೆ, ದೀಪ ಪೂಜೆಯಂತಹ ಆಚರಣೆಯಿಂದ ಆಗುವ ಪ್ರಯೋಜನ ತಿಳಿಸಬೇಕು. ಪರಿವರ್ತನೆ ಹಾದಿಯಲ್ಲಿ ನಾವು ಪ್ರಥಮರಾಗೋಣ. ತಂದೆ, ತಾಯಿ, ಗುರುಗಳನ್ನು ಪೂಜಿಸಿ ಕರ್ಪೂರ, ಗಂಧದಕಡ್ಡಿ ಸುಟ್ಟು ಪರಿಸರ ಹಾಳು ಮಾಡಬಾರದು.

ಕಿಕ್ಕೇರಿ:

ಪೆಟ್ರೋಲಿಯಂ ವಸ್ತುಗಳಲ್ಲಿ ತಯಾರಾದ ಕರ್ಪೂರ, ಗಂಧದಕಡ್ಡಿ ಬಳಸದೆ ತುಪ್ಪದ ದೀಪ ಬಳಸಿ ಪರಿಸರ ಕಾಪಾಡುವಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತಕ ಗೋಪಾಲಕೃಷ್ಣ ಅವಧಾನಿ ಹೇಳಿದರು.

ಹೋಬಳಿಯ ದೊಡ್ಡತರಹಳ್ಳಿಯ ಗ್ರಾಮ ವಿಕಾಸ ಸಂಸ್ಥೆಯಿಂದ ಶನಿವಾರ ಏರ್ಪಡಿಸಿದ್ದ ಮೂರು ದಿನಗಳ ದೀಪ ಪೂಜೆ, ಗೋಪೂಜೆ, ಅಭ್ಯಾಸ ವರ್ಗ, ಗುರುನಮನ ಕಾರ್ಯಕ್ರಮದಲ್ಲಿ ದೀಪ ಪೂಜೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮೊದಲು ಮಕ್ಕಳಿಗೆ ಕಲಿಸಬೇಕು. ಗುರು ಹಿರಿಯರನ್ನು ಗೌರವಿಸದೆ ನಮ್ಮ ಜನ್ಮ ಸಾರ್ಥಕತೆಯಾಗಲಾರದು ಎಂದರು.

ದೇಶಿಯ ಸೊಗಡನ್ನು ಎಳೆಯ ಮನಸ್ಸಿಗೆ ತುಂಬಬೇಕು. ದೇವರಆರಾಧನೆ, ದೀಪ ಪೂಜೆಯಂತಹ ಆಚರಣೆಯಿಂದ ಆಗುವ ಪ್ರಯೋಜನ ತಿಳಿಸಬೇಕು. ಪರಿವರ್ತನೆ ಹಾದಿಯಲ್ಲಿ ನಾವು ಪ್ರಥಮರಾಗೋಣ. ತಂದೆ, ತಾಯಿ, ಗುರುಗಳನ್ನು ಪೂಜಿಸಿ ಕರ್ಪೂರ, ಗಂಧದಕಡ್ಡಿ ಸುಟ್ಟು ಪರಿಸರ ಹಾಳು ಮಾಡಬಾರದು. ತುಪ್ಪದ ಅಣತೆ, ದೀಪಧಾರತಿ ಬೆಳಗಿ ಶುದ್ಧಗಾಳಿ ಜತೆ ಪರಿಸರದಲ್ಲಿ ಕ್ರಿಮಿಕೀಟ ಹತೋಟಿಯಾಗಲಿದೆ ಎಂದರು.

ಹಬ್ಬ ಹರಿದಿನಗಳು ನಮ್ಮ ಪೂರ್ವಜರು ಹಾಕಿಕೊಟ್ಟ ಪರಂಪರೆ, ಸಂತೋಷದಕ್ಷಣ ಕಳೆಯಲು, ಸಾಮರಸ್ಯ, ಸಹಬಾಳ್ವೆಗೆ ಸಹಕಾರಿಯಾಗಿದೆ. ಡಾಂಭೀಕರಣ ಪೂಜಾರಾಧನೆ ಬದಲು ಭಗವಂತನ ಸಾಕ್ಷಾತ್ಕಾರಕ್ಕಾಗಿ ಶ್ರದ್ಧೆಯ ಪೂಜೆ ಬಲುಮುಖ್ಯ ಎಂದರು.

ದೀಪಪೂಜೆಯಲ್ಲಿ ಗ್ರಾಮದ ಮಹಿಳೆಯರು ಸೇರಿದಂತೆ ವಿವಿಧಗ್ರಾಮ, ತಾಲೂಕು ಕೇಂದ್ರಗಳಿಂದ ಆಗಮಿಸಿದ್ದ ಪಾಲಕರು ಪಾಲ್ಗೊಂಡು ಭಕ್ತಿಭಾವ ಮೆರೆದರು. ಭಾರತಾಂಭೆ ಭಾವಚಿತ್ರಕ್ಕೆ ಪೂಜಿಸುವ ಮೂಲಕ ರಾಷ್ಟ್ರಗೌರವವನ್ನು ಸಲ್ಲಿಸಿದರು.

ಪ್ರಾಂತ ಸಹ ಸಂಯೋಜಕ ಚೇತನ್, ಸದಸ್ಯತಮ್ಮಣ್ಣಗೌಡ, ವಿಭಾಗ ಸಂಯೋಜಕ ಚನ್ನಪ್ಪ, ಜಿಲ್ಲಾಪಾಲಕರಾದ ರಂಗೇಗೌಡ, ಎಂ.ಎ.ಸೋಮಶೇಖರ್, ವಕೀಲ ಶಿವಕುಮಾರ್, ಯತೀಶ್, ಪ್ರವೀಣ್, ರವಿಕುಮಾರ್, ಬಸವರಾಜು, ಗುರುಮೂರ್ತಿ, ದಾನಶೇಖರ್, ವೇಣು, ದೊಡ್ಡಹಟ್ಟಿ ನಾಗೇಶ್, ಗುರುಮೂರ್ತಿ, ಮಹಿಳಾ ಪ್ರಮುಖ್, ಸಂಯೋಜಕರುಭಾಗವಹಿಸಿದ್ದರು.

ಅ.29 ರಂದು ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರೊಂದಿಗೆ ಸಂವಾದ ಸಭೆ

ಮಂಡ್ಯ:ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮತ್ತು ಸದಸ್ಯ ಶಂಕರ್ ಉಪಸ್ಥಿತಿಯಲ್ಲಿ ಅ.29ರಂದು ಜಿಲ್ಲೆಯ ಪೌರಕಾರ್ಮಿಕರು ಹಾಗೂ ವಿವಿಧ ಸಂಸ್ಥೆಗಳ ಸ್ವಚ್ಛತಾ ಕಾರ್ಮಿಕರೊಂದಿಗೆ ನೇರ ಸಂವಾದ ಸಭೆ ಆಯೋಜಿಸಲಾಗಿದೆ. ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಂವಾದ ಸಭೆಯಲ್ಲಿ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸಮಸ್ಯೆಗಳು, ಕುಂದುಕೊರತೆಗಳು ಹಾಗೂ ಅವರ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಮಧ್ಯಾಹ್ನ 12.30 ಗಂಟೆಗೆ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ಸಂಬಂಧಿಸಿದ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.

ಸಭೆಗೆ ಅಗತ್ಯವಿರುವ ಮಾಹಿತಿಯನ್ನು ಸಂಬಂಧಪಟ್ಟ ಕಚೇರಿಗಳಿಗೆ ಇ-ಮೇಲ್ ಮೂಲಕ ಈಗಾಗಲೇ ಕಳುಹಿಸಲಾಗಿದೆ. ಅಧಿಕಾರಿಗಳು ನಿಗದಿತ ವಿಷಯಸೂಚಿಯನ್ವಯ ಸಂಪೂರ್ಣ ಮಾಹಿತಿ ಸಿದ್ಧಪಡಿಸಿಕೊಂಡು ಸಭೆಗೆ ಹಾಜರಾಗಬೇಕು. ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಖುದ್ದಾಗಿ ಹಾಜರಾಗಿ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.