ಮಾತೃಭಾಷೆ ಉಳಿಸಿ, ದೇಶಾಭಿಮಾನ ಬೆಳೆಸಿ: ಶ್ರೀನಾಥ ರಾವ್‌

| Published : Jan 13 2025, 12:48 AM IST

ಮಾತೃಭಾಷೆ ಉಳಿಸಿ, ದೇಶಾಭಿಮಾನ ಬೆಳೆಸಿ: ಶ್ರೀನಾಥ ರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ೩೪ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಭಟ್ಕಳ: ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಮಾತೃಭಾಷೆ ಹಾಗೂ ನಮ್ಮ ಅಸ್ಮಿತೆಯನ್ನು ಮರೆಯದೇ ಉಳಿಸಿ ಪೋಷಿಸಬೇಕೆಂದು ಮುಕ್ಕಾದ ಶ್ರೀನಿವಾಸ ಯುನಿವರ್ಸಿಟಿಯ ಪ್ರಾಧ್ಯಾಪಕ ಶ್ರೀನಾಥ ರಾವ್ ಹೇಳಿದರು.

ಪಟ್ಟಣದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್‌ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಸಾಧನಾ ೨೦೨೪- ೨೦೨೫ ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡದ ಅನೇಕ ವಿದ್ಯಾಲಯಗಳಿಗೆ ಭೇಟಿ ನೀಡಿದ್ದ ನನಗೆ ಈಗಿನ ಆಧುನಿಕ ಶಿಕ್ಷಣದ ಜತೆಗೆ ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಸಿಇಟಿ, ನೀಟ್ ಸಿದ್ಧತೆ, ಭಗವದ್ಗೀತೆ ಪಠಣ, ಮೌಲ್ಯಯುತ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳು ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಏಕೈಕ ಸಂಸ್ಥೆ ಇದಾಗಿದೆ ಎಂದರು.

ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಸುಮಿತ್ರಾ ಕೌಶಿಕ ಮತ್ತು ರಮೇಶ ಖಾರ್ವಿ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ೩೪ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ವಿಭಾಗವಾರು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಕಲಾ ವಿಭಾಗದಲ್ಲಿ ತೇಜಸ್ ಗೊಂಡ, ವಾಣಿಜ್ಯದ ಗಣಕಶಾಸ್ತ್ರ ವಿಭಾಗದಲ್ಲಿ ದೀಪಾ ಈಶ್ವರ ನಾಯ್ಕ, ವಾಣಿಜ್ಯದ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಪವಿತ್ರಾ ರಘುರಾಮ ಮಡಿವಾಳ, ವಿಜ್ಞಾನ ವಿಭಾಗದಲ್ಲಿ ಮತ್ತು ಮಹಾವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿಯಾಗಿ ತಿಲಕ ಹೆಬ್ಬಾರ ಆಯ್ಕೆಯಾದರು.

ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶ್ಯಾನಭಾಗ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಲಾವಣ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅನುಷಾ ನಾಯ್ಕ ಸ್ವಾಗತಿಸಿದರು. ಪರಮೇಶ್ವರ ಮತ್ತು ಅನನ್ಯಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮಂಜೂಷಾ ಕೇಶ ಕಾಮತ ವಂದಿಸಿದರು.ಸಂಗೀತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಕಾರವಾರ: ಮೈಸೂರಿನ ಗಂಗೂಬಾಯಿ ಹಾನಗಲ್ ವಿವಿ ನಡೆಸಿದ 2023- 24ನೇ ಸಾಲಿನ ವಿಶೇಷ ಸಂಗೀತ ನೃತ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅಂಕೋಲಾ- ಕಾರವಾರ ದಿನಕರ ಕಲಾನಿಕೇತನದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಕಾರವಾರದ ದಿನಕರ ಕಲಾನಿಕೇತನ ಶಾಲೆಯ ದಿಶಾ ಶಾನಭಾಗ ಶೇ. 81.25, ಸಾಯಿಶ್ರೀ ಶೇಟ್ ಶೇ. 78.25, ಅಂಕೋಲಾದ ದಿನಕರ ಕಲಾನಿಕೇತನದ ಅನಿಕೇತ ಕಾಂಜನ್ ಶೇ. 77.75 ಅಂಕ ಪಡೆದು ಡಿಸ್ಟಿಂಗ್ಶನ್‌ನೊಂದಿಗೆ ತೇರ್ಗಡೆಯಾಗಿ ಸಂಗೀತ ಶಾಲೆಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಸಂಗೀತ ಗುರುಗಳಾದ ಮಾರುತಿ ನಾಯ್ಕ, ಗಣಪತಿ ಹೆಗಡೆ, ಕೆನರಾ ವೆಲ್‌ಫೇರ್ ಟ್ಟಸ್ಟ್‌ನ ಅಧ್ಯಕ್ಷ ಎಸ್.ಪಿ. ಕಾಮತ ಹಾಗೂ ಎಲ್ಲ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.