ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸ್ವಾತಂತ್ರ್ಯ ಪೂರ್ವ ಶತಮಾನದ ಸರ್ಕಾರಿ ಶಾಲೆಯು ಐತಿಹಾಸಿಕ ಕುರುಹಾಗಿದೆ. ಈ ಶಾಲೆ ಉಳಿಸಲು ಪೋಷಕರು, ಗ್ರಾಮಸ್ಥರು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಹೇಳಿದರು.ಮಾದಾಪುರ ಗ್ರಾಮದಲ್ಲಿ 139 ವರ್ಷ ಹಳೆಯದಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ರಾಜ ಮಹಾರಾಜರ ಕಾಲದಲ್ಲಿ ಶಾಲೆ ಆರಂಭವಾಗಿದೆ. ವೇದಾಗಮ, ಪಂಡಿತರು ಇರುವ ಸುಶಿಕ್ಷಿತ ಗ್ರಾಮದಲ್ಲಿ ಅಂದಿನ ಕಾಲದಲ್ಲಿ ವಿದ್ಯಾರ್ಜನೆಗಾಗಿ ಶಾಲೆ ತೆರೆಯಲು ಕಾರಣಕರ್ತರಾದ ಮಹನೀಯರನ್ನು ನಿತ್ಯ ಸ್ಮರಿಸಬೇಕಿದೆ ಎಂದರು.
ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಐತಿಹಾಸಿಕ ಕುರುಹಾಗಿರುವ ಶಾಲೆಯನ್ನು ಉಳಿಸಬೇಕು ಎಂದು ಕೋರಿದರು.ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಖಾಸಗಿ ಶಾಲಾ ವಾಹನಗಳು ಬಂದು ಗ್ರಾಮದ ಮಕ್ಕಳನ್ನು ತುಂಬಿಕೊಂಡು ಹೋಗುವುದನ್ನು ನಿಲ್ಲಿಸಿ ನಿಮ್ಮೂರ ಶಾಲೆ ಉಳಿಸಬೇಕು. ಇದಕ್ಕೆ ತಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಎನ್. ಯೋಗೇಶ್ ಮಾತನಾಡಿದರು. ಬಲು ದೀರ್ಘಾವಧಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ರಾಜಪ್ಪ ವಿನೋದ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ದಾನಿಗಳನ್ನು ಗೌರವಿಸಲಾಯಿತು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಇಸಿಒ ಮೋಹನಕುಮಾರ್, ಇಸಿಒ ನವೀನ್, ಸಿಆರ್‌ಪಿ ಆಶಾರಾಣಿ, ಗ್ರಾಪಂ ಅಧ್ಯಕ್ಷ ಕುಮಾರ್, ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಡೇರಿ ಅಧ್ಯಕ್ಷ ಶಂಕರೇಗೌಡ, ಮುಖಂಡ ರಾಮಕೃಷ್ಣೇಗೌಡ, ನ್ಯಾಯಬೆಲೆ ಮಂಜೇಗೌಡ, ದಾನಿ ಶಂಕರೇಗೌಡ, ಅಶೋಕ್, ಮುಖ್ಯಶಿಕ್ಷಕ ನಂಜುಂಡಯ್ಯ, ಶಿಕ್ಷಕರಾದ ಶ್ರೀನಿವಾಸ್, ಎಚ್.ಟಿ.ಜ್ಯೋತಿ ಲಕ್ಷ್ಮೀ,ರೇಖಾ, ಮಧು, ಕೋದಂಡರಾಮ್, ಕಾಂತರಾಜು, ಕುಮಾರಸ್ವಾಮಿ, ರಾಜ್ಯಯುವ ಪ್ರಶಸ್ತಿ ಎಂ.ಎನ್. ಸೋಮಶೇಖರ್, ಎಸ್‌ಡಿಎಂಸಿ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.