ಅಮೂಲ್ಯವಾದ ನೀರನ್ನು ಉಳಿಸಿ ಮಿತವಾಗಿ ಬಳಕೆ ಮಾಡಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Mar 23 2025, 01:35 AM IST

ಅಮೂಲ್ಯವಾದ ನೀರನ್ನು ಉಳಿಸಿ ಮಿತವಾಗಿ ಬಳಕೆ ಮಾಡಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಆರಂಭಗೊಳ್ಳುತ್ತಿದೆ ಆಗಲೇ ನೀರಿಗೆ ಹಾಹಾಕಾರ ಎದುರಾಗುತ್ತಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿದ್ದರೂ ಸಹ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀರನ್ನು ಸಮರ್ಪಕವಾಗಿ ಮಾಡಿಕೊಳ್ಳುವದಕ್ಕಾಗಿ ಸರಿಯಾದ ವ್ಯವಸ್ಥೆ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಾತಾವರಣ ವೈಪರಿತ್ಯಗಳಿಂದ ನೀರಿನ ಅಭಾವ ಹೆಚ್ಚಾಗುತ್ತಿದೆ. ಅಮೂಲ್ಯ ನೀರು ಉಳಿಸಲು ಪ್ರತಿಯೊಬ್ಬರು ಮಿತವಾಗಿ ಬಳಕೆ ಮಾಡಬೇಕು ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಪ್ರತಿಯೊಬ್ಬರಿಗೂ ನೀರು ಅತ್ಯವಶ್ಯಕ. ಪ್ರಸ್ತುತ ಎದುರಾಗುತ್ತಿರುವ ನೀರಿನ ಅಭಾವ ನೋಡಿದರೆ ಐಎಂಎಫ್, ವಿಶ್ವಸಂಸ್ಥೆ ಮುಂದಿನ ಯುದ್ಧಗಳು ನೀರಿಗಾಗಿ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ನೀರಿನ ಬಳಕೆ ಮತ್ತು ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು, ನೀರನ್ನು ಸಂರಕ್ಷಣೆ ಮಾಡಿ ನಾವು ನಮ್ಮ ಮುಂದಿನ ಪೀಳಿಗೆಗೆ ಬಳುವಳಿ ನೀಡಬೇಕಾಗಿದೆ ಎಂದರು.

ಬೇಸಿಗೆ ಆರಂಭಗೊಳ್ಳುತ್ತಿದೆ ಆಗಲೇ ನೀರಿಗೆ ಹಾಹಾಕಾರ ಎದುರಾಗುತ್ತಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿದ್ದರೂ ಸಹ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀರನ್ನು ಸಮರ್ಪಕವಾಗಿ ಮಾಡಿಕೊಳ್ಳುವದಕ್ಕಾಗಿ ಸರಿಯಾದ ವ್ಯವಸ್ಥೆ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

2000 ರಿಂದ ಮಂಡ್ಯ ಜಿಲ್ಲೆ ಬರಗಾಲ ಎದುರಿಸುತ್ತಿದೆ. ಕೆರೆಕಟ್ಟೆಗಳು ಭರ್ತಿಯಾಗದಿದ್ದರೆ ಅಂತರ್ಜಲ ವೃದ್ದಿಸುವುದಿಲ್ಲ. ನಮ್ಮ ಪೂರ್ವಿಕ ನೀರಿನ ಸಮಸ್ಯೆಗಳನ್ನು ಅಥೈಸಿಕೊಂಡು ವೈಜ್ಞಾನಿಕವಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಆದರೀಗ ನಾವು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದೇವೆ. ಕೆಲವೆಡೆ ಕೆರೆಕಟ್ಟೆಗಳನ್ನು ಮುಚ್ಚಿದ್ದಾರೆ ಎಂದು ವಿಷಾದಿಸಿದರು.

ರೈತರು ಒತ್ತವರಿ ಮಾಡಿಕೊಂಡಿರುವ ಕೆರೆಕಟ್ಟೆಗಳನ್ನು ತೆರವು ಮಾಡಬೇಕು, ಜೆಜೆಎಂ ಯೋಜನೆ ಕಳಪೆಯಿಂದ ಕೂಡಿದೆ ಇದೇ ವಿಚಾರವಾಗಿ ಸಿಇಓ ಅವರೊಂದಿಗೆ ಚರ್ಚಿಸಲಾಗಿದ್ದು ಜೆಜೆಎಂ ಕಾಮಗಾರಿ ಬಗ್ಗೆ ತನಿಖೆ ನಡೆಸುವಂತೆ ರೈತಸಂಘದಿಂದ 18 ದಿನ ಹೋರಾಟವನ್ನು ಸಹ ನಡೆಸಿದ್ದೇವೆ ಎಂದರು.

ಸಹಕಾರ ಸಂಘಗಳು ಚೆನ್ನಾಗಿ ನಡೆದರೆ ಹಳ್ಳಿಯ ಜನಜೀವನ ಸುಧಾರಿಸಲು ಸಾಧ್ಯ. ಗ್ರಾಮಗಳಲ್ಲಿ ನಮ್ಮ ಪೂರ್ವಿಕರು ಹಿಂದೆ ಸೀಮೆಎಣ್ಣೆ, ಉಪ್ಪುಬಿಟ್ಟರೆ ಬೇರೆ ಯಾವುದೇ ವಸ್ತು, ಪದಾರ್ಥಗಳನ್ನು ಕೊಳ್ಳುತ್ತಿರಲಿಲ್ಲವಂತೆ, ಇಲ್ಲಿ ಬೆಳೆದು ತಿನ್ನುತ್ತಿದ್ದರು. ಆದರೀಗ ನಾವು ಬೆಳೆದರೂ ಬೇರೆಡೆಗೆ ಮಾರಾಟ ಮಾಡಿ ಅಲ್ಲಿಂದ ಕೊಂಡು ತಿನ್ನುವಂತಹ ಪರಿಸ್ಥಿತಿ ಎದುರಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಬೆಳೆದ ಬೆಳೆಗಳ ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ಹಾಗಾಗಿ ನಾವು ಬೆಳೆದ ಬೆಳೆಗಳನ್ನು ಸಹಕಾರ ಸಂಘಗಳ ಮೂಲಕವೇ ಮಾರಾಟ ಮಾಡಿ ಬರುವ ಲಾಭವನ್ನು ಸಂಘದ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಲು ಕಾರ್‍ಯಕ್ರಮ ರೂಪಿಸಿಕೊಳ್ಳಲಾಗುತ್ತಿದೆ. ಟಿಎಪಿಸಿಎಂಎಸ್ ಅಭಿವೃದ್ದಿಗೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಆಗಮಿಸಿ ಗ್ರಾಹಕರಿಗೆ ಕುಡಿಯುವ ನೀರಿನ ಘಟಕದ ಕಾರ್ಡ್‌ಗಳನ್ನು ವಿತರಣೆ ಮಾಡಿ ಶುಭಕೋರಿದರು. ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಉಪಾಧ್ಯಕ್ಷೆ ತಿಬ್ಬಮ್ಮ, ನಿರ್ದೇಶಕರಾದ ಗುರುಸ್ವಾಮಿ, ರಾಮಕೃಷ್ಣೇಗೌಡ, ಕೆ.ಎಸ್.ದಯಾನಂದ, ಶ್ರೀಕಾಂತ್, ಕಣಿವೆಯೋಗೇಶ್, ಬೆಟ್ಟಸ್ವಾಮೀಗೌಡ, ಜಯಶೀಲ, ಮಾಲತಿ, ಸರಕಾರಿ ನಾಮಿನಿ ನಿರ್ದೇಶಕ ಚಿಟ್ಟಿಬಾಬು, ಕಾರ್‍ಯದರ್ಶಿ ನವೀನ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.