ಲಿಂಗಧಾರಣೆ ಮಾಡಿ ಧರ್ಮ ಉಳಿಸಿ: ಸಿದ್ದಲಿಂಗ ಸ್ವಾಮೀಜಿ

| Published : Sep 11 2024, 01:14 AM IST

ಲಿಂಗಧಾರಣೆ ಮಾಡಿ ಧರ್ಮ ಉಳಿಸಿ: ಸಿದ್ದಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಪ್ರತಿಯೊಬ್ಬ ಲಿಂಗಾಯತರು ಲಿಂಗಧಾರಣೆ ಮಾಡಿಕೊಳ್ಳುವ ಮೂಲಕ ನಮ್ಮ ಸಮಾಜದ ಧರ್ಮ ಉಳಿಸಿ ಬೆಳೆಸಬೇಕಿದೆ ಎಂದು ಚಕ್ರಬಾವಿ ಮರಳು ಸಿದ್ದೇಶ್ವರ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಮಾಗಡಿ: ಪ್ರತಿಯೊಬ್ಬ ಲಿಂಗಾಯತರು ಲಿಂಗಧಾರಣೆ ಮಾಡಿಕೊಳ್ಳುವ ಮೂಲಕ ನಮ್ಮ ಸಮಾಜದ ಧರ್ಮ ಉಳಿಸಿ ಬೆಳೆಸಬೇಕಿದೆ ಎಂದು ಚಕ್ರಬಾವಿ ಮರಳು ಸಿದ್ದೇಶ್ವರ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಚಕ್ರಬಾವಿ ಮರಳು ಸಿದ್ದೇಶ್ವರ ಮಠದಲ್ಲಿ ಮೈಸೂರಿನ ಶಿವರಾತ್ರೇಶ್ವರ ಧಾರ್ಮಿಕ ದತ್ತಿ ಜೆಎನ್ಎಸ್ ಮಹಾ ವಿದ್ಯಾಪೀಠದಿಂದ ಲಿಂಗೈಕ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಸ್ಮರಣಾರ್ಥ 40ಕ್ಕೂ ಹೆಚ್ಚು ವಟುಗಳಿಗೆ ಲಿಂಗಧಾರಣೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪ್ರತಿದಿನ ಶ್ರದ್ಧೆಯಿಂದ ಇಷ್ಟಲಿಂಗ ಪೂಜೆ ಮಾಡುವ ಮೂಲಕ ನಮ್ಮ ಧರ್ಮದ ಆಚರಣೆಯನ್ನು ಪ್ರತಿಯೊಬ್ಬರು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ನಮ್ಮ ಸಂಸ್ಕಾರವನ್ನು ನಾವು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.

ಬೆಟ್ಟಹಳ್ಳಿ ಮಠಾಧ್ಯಕ್ಷರಾದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿರುವುದಲ್ಲಿ ಲಿಂಗಾಯತರೇ ಹೆಚ್ಚು ಎಂದು ಹೇಳುವುದಕ್ಕೆ ಬೇಸರವಾಗುತ್ತಿದೆ. ಪೋಷಕರು ಮಕ್ಕಳಿಗೆ ಲಿಂಗಾಯತ ಧರ್ಮದ ತಳಹದಿ ಬಗ್ಗೆ ಅಭ್ಯಾಸ ಮಾಡಿಸುತ್ತಿಲ್ಲ. ಪ್ರತಿ ಶನಿವಾರ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗು ಎಂದು ಹೇಳುವ ಪೋಷಕರು ಎದೆಯ ಮೇಲೆ ಲಿಂಗ, ಹಣೆಯ ಮೇಲೆ ವಿಭೂತಿ ಇಟ್ಟು ಲಿಂಗ ಪೂಜೆ ಮಾಡಿ ಎಂದು ಮಕ್ಕಳಿಗೆ ನಮ್ಮ ಧರ್ಮದ ಬಗ್ಗೆ ಮಾಹಿತಿ ಕೊಡದಿರುವುದರಿಂದಲೇ ಮತಾಂತರ ಆಗುತ್ತಿದ್ದಾರೆ. ವೀರಶೈವ ಧರ್ಮ ಲಿಂಗ ಸಂಸ್ಕಾರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತಿದ್ದು ಸ್ವಯಂ ಶಿವನಾಗು ಎಂದು ಹೇಳುವ ಏಕೈಕ ಧರ್ಮ ಲಿಂಗಾಯತ ಧರ್ಮವಾಗಿದೆ. ಮಾದೇಶ್ವರ, ಸಿದ್ದಲಿಂಗೇಶ್ವರ, ವೀರಭದ್ರಸ್ವಾಮಿ, ಎದೆಯ ಮೇಲೆ ಲಿಂಗಧಾರಣೆ ಮಾಡಿದ ಪರಿಣಾಮ ಅವರನ್ನು ನಾವು ಈಗ ಪೂಜೆ ಮಾಡುತ್ತಿದ್ದೇವೆ ಎಂದರೆ ಲಿಂಗಧಾರಣೆಗೆ ಎಷ್ಟು ಮಹತ್ವ ಇದೆ ಎಂಬುದು ಇದರಿಂದ ತಿಳಿಯುತ್ತದೆ ಎಂದರು.

ಇದೇ ವೇಳೆ ಸೂತ್ತೂರು ಮಠದ ಪಂಚಾಕ್ಷರಿ, ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾ ನಿರ್ದೇಶಕರಾದ ಪಟೇಲ್ ಜಗದೀಶ್, ಕೆರೆ ಬೀದಿ ಸಿದ್ದಲಿಂಗಪ್ಪ, ಹಾಲಶೆಟ್ಟಿಹಳ್ಳಿ ಶಿವಪ್ರಸಾದ್, ಚಕ್ರಬಾವಿ ರಾಜಣ್ಣ, ಗೌರೀಶ, ಸಿ.ಮಹೇಶ್, ಕೆಇಬಿ ಮನು, ವಿಶ್ವ, ಮಹೇಶ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

10ಮಾಗಡಿ1 :

ಮಾಗಡಿ ತಾಲೂಕಿನ ಚಕ್ರಬಾವಿ ಮಠದಲ್ಲಿ 40ಕ್ಕೂ ಹೆಚ್ಚು ವಟುಗಳಿಗೆ ಚಕ್ರಬಾವಿ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಹಾಗೂ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಲಿಂಗಧಾರಣೆ ನೆರವೇರಿಸಿದರು.