ಶ್ರೀರಾಮರೂಢಸ್ವಾಮಿ ಮಠದ ಹತ್ತು ಜನಗಳ ಗರಡಿ ವತಿಯಿಂದ ಸಿಡಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಜವಾಬ್ದಾರಿಯುತವಾಗಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿಲಾಗುತ್ತಿದೆ. ಪ್ರತಿದಿನ ಕುಸ್ತಿ ಅಭ್ಯಾಸ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಾಮಾರ್ಥ್ಯಕ್ಕೆ ಸಹಾಯವಾಗಲಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕುಸ್ತಿ ಗ್ರಾಮೀಣ ಭಾಗದ ದೇಶಿ ಕ್ರೀಡೆ. ನಾಡಕುಸ್ತಿ ಕಲೆ ಉಳಿಸಿ ದೇಶೀಯ ಸಂಸ್ಕೃತಿ ಬೆಳೆಯಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಸಂತೆಮೈದಾನ ಆವರಣದಲ್ಲಿ ಪಟ್ಟಲದಮ್ಮ ಸಿಡಿ ಹಬ್ಬದ ಅಂಗವಾಗಿ ಶ್ರೀರಾಮರೂಢಸ್ವಾಮಿ ಮಠದ ಹತ್ತು ಜನಗಳ ಗರಡಿ ವತಿಯಿಂದ ನಡೆದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ನಾಡ ಸಂಸ್ಕೃತಿಯನ್ನು ಬಿಂಬಿಸುವ ಕುಸ್ತಿ ಪಂದ್ಯಾವಳಿಗಳು ಹೆಚ್ಚಾಗಿ ನಡೆಸಬೇಕು. ಸ್ಪರ್ಧಾಳುಗಳು ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿ ಭವಿಷ್ಯದಲ್ಲಿ ಸಾಧಕರಾಗಬೇಕೆಂದು ಕರೆ ನೀಡಿದರು.
ಶ್ರೀರಾಮರೂಢಸ್ವಾಮಿ ಮಠದ ಹತ್ತು ಜನಗಳ ಗರಡಿ ವತಿಯಿಂದ ಸಿಡಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಜವಾಬ್ದಾರಿಯುತವಾಗಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿಲಾಗುತ್ತಿದೆ. ಪ್ರತಿದಿನ ಕುಸ್ತಿ ಅಭ್ಯಾಸ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಾಮಾರ್ಥ್ಯಕ್ಕೆ ಸಹಾಯವಾಗಲಿದೆ. ದೇಶಿ ಸಂಸ್ಕೃತಿ ಬಿಂಬಿಸುವ ನಾಡಕುಸ್ತಿಯನ್ನು ಯುವಕರು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.ಮೈಸೂರಿನ ಹಿರಿಯ ಕುಸ್ತಿ ಪಟು ಟೈಗರ್ ಬಾಲಾಜಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲಾಯಿತು. ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಪೈಲ್ವಾನರು ಆಗಮಿಸಿ ಪಂದ್ಯಾವಳಿಗೆ ಮೆರಗು ನೀಡಿದರು.
ಇದೇ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿ ವ್ಯವಸ್ಥಾಪಕ ರವಿ, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಕೆ.ಜೆ ದೇವರಾಜು, ಪುರಸಭೆ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ದೊಡ್ಡಯ್ಯ, ಆಟೋ ಮಂಜಣ್ಣ, ಅಣ್ಣಪ್ಪ, ರವಿ, ವೆಂಕಟೇಶ್, ಕೃಷ್ಣ, ನಂಜುಂಡಯ್ಯ, ಆನಂದ್, ಬಸವರಾಜು, ಚೇತನ್, ಮಲ್ಲೇಶ್, ನೂರುಲ್ಲಾ ಸೇರಿದಂತೆ ಇತರರು ಇದ್ದರು.