ಸಾರಾಂಶ
- ಮಾನವತಾವಾದಿ ಈಶ್ವರ್ ಚಂದ್ರ ವಿದ್ಯಾಸಾಗರ್ ಜನ್ಮದಿನಾಚರಣೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಜಿಲ್ಲಾ ಸಮಿತಿಯಿಂದ ನಗರದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಮಹಾನ್ ಧರ್ಮನಿರಪೇಕ್ಷ ಮಾನವತಾವಾದಿ ಈಶ್ವರ್ ಚಂದ್ರ ವಿದ್ಯಾಸಾಗರರ ಜನ್ಮದಿನಾಚರಣೆಯನ್ನು ವಿದ್ಯಾರ್ಥಿಗಳು ಆಚರಿಸಿದರು.
ಹೋರಾಟದ ಮುಂದಿನ ಹಂತವಾಗಿ ಸಾರ್ವಜನಿಕರ ನಡುವೆ ಸಹಿ ಸಂಗ್ರಹಣ ಅಭಿಯಾನಕ್ಕೆ ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಚಾಲನೆ ನೀಡಿ, ವಿದ್ಯಾಸಾಗರರು, ಸಮಾಜದಲ್ಲಿದ್ದ ಮೌಢ್ಯ, ಅಜ್ಞಾನ ಹಾಗೂ ಅವೈಜ್ಞಾನಿಕ ಚಿಂತನೆಗಳನ್ನು ಮಟ್ಟಹಾಕಲು ಹಾಗೂ ಮಾನವ ಸಮಾಜದ ಏಳಿಗೆಗೆ ಅವಶ್ಯವಿರುವ ವಿಜ್ಞಾನ, ಅರ್ಥಶಾಸ್ತ್ರ, ಗಣಿತ, ತರ್ಕ ಹಾಗೂ ಇಂಗ್ಲೀಷ್ ಶಿಕ್ಷಣದ ಮಹತ್ವವನ್ನು ಸಾರಿದರು ಎಂದರು.ತಮ್ಮ ಇಡೀ ಜೀವನವನ್ನು ವೈಉಕ್ತಿಕ ಹಿತಾಸಕ್ತಿಗಳಿಂದ ದೂರವಿರಿಸಿ, ಸಾಮಾಜಿಕ ಹಿತಾಸಕ್ತಿಗೆ ಮುಡುಪಾಗಿಟ್ಟಿದ್ದರು. ಇಂತಹ ಉದಾತ್ತ ಮೌಲ್ಯ ಮತ್ತು ಸಂಸ್ಕ್ರತಿಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವ ಅತ್ಯಾವಶ್ಯಕತೆ ನಮ್ಮ ಮುಂದಿದೆ ಎಂದರು.
ವಿದ್ಯಾಸಾಗರರ ಜೀವನ ಹೋರಾಟದಿಂದ ಸ್ಫೂರ್ತಿ ಪಡೆದು ಯುಬಿಡಿಟಿ ಕಾಲೇಜಿನಲ್ಲಿ ನಡೆಯುತ್ತಿರುವ 50% ಸೀಟುಗಳ ಮಾರಾಟದ ವಿರುದ್ಧದ ಹೋರಾಟವನ್ನು ನೆರೆದಿದ್ದ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಹರಿತಗೊಳಿಸುವ ಸಂಕಲ್ಪ ಮಾಡಿದರು.ಈ ಸಂದರ್ಭ ಎಐಡಿಎಸ್‌ಓ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್, ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ಸದಸ್ಯರಾಗಿರುವ ಹಲವಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- - - -26ಕೆಡಿವಿಜಿ32, 33ಃ:ದಾವಣಗೆರೆಯಲ್ಲಿಂದು ಯುಬಿಡಿಟಿ ಉಳಿಸಿ ಸಹಿ ಸಂಗ್ರಹಣ ಅಭಿಯಾನಕ್ಕೆ ಎಐಡಿಎಸ್‌ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಚಾಲನೆ ನೀಡಿ ಮಾತನಾಡಿದರು.