ಮಿತ ಬಳಕೆ ಮಾಡಿ ನೀರನ್ನು ಮುಂದಿನ ಪೀಳಿಗೆಗೂ ಉಳಿಸಿ

| Published : Mar 24 2025, 12:31 AM IST

ಸಾರಾಂಶ

ನೀರನ್ನು ನಾವು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಿಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಎ. ಅರುಣ ಕುಮಾರಿ ತಿಳಿಸಿದರು. ಭೂಮಿಯ ಮೇಲೆ ಲಭ್ಯ ಇರುವ ನೀರಿನ ಪ್ರಮಾಣದಲ್ಲಿ ಶೇ. ೩ರಷ್ಟು ಮಾತ್ರ ಕುಡಿಯುವುದಕ್ಕೆ ಯೋಗ್ಯವಾಗಿದೆ. ಹೀಗಾಗಿ ನೀರನ್ನು ಪೋಲು ಮಾಡದೆ ಎಚ್ಚರಿಕೆಯಿಂದ ಬಳಸಬೇಕು. ಜಲಮೂಲಗಳ ರಕ್ಷಣೆಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನೀರನ್ನು ನಾವು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಿಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಎ. ಅರುಣ ಕುಮಾರಿ ತಿಳಿಸಿದರು.

ಪಟ್ಟಣದ ಟೈಮ್ಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಟೈಮ್ಸ್ ಪಿಯು ಕಾಲೇಜಿನ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ಜಲ ದಿನಾಚರಣೆ ಹಾಗೂ ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿ ಜೀವಿಗೂ ಬದುಕಲು ನೀರು ಬೇಕು. ಹೀಗಾಗಿ ಜಲ ಮೂಲಗಳ ಸಂರಕ್ಷಣೆ ಮಾಡುವುದು ಹಾಗೂ ಆಗದಂತೆ ಜನರು ಪೋಲು ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗುತ್ತಿದೆ. ಭೂಮಿಯ ಮೇಲೆ ಲಭ್ಯ ಇರುವ ನೀರಿನ ಪ್ರಮಾಣದಲ್ಲಿ ಶೇ. ೩ರಷ್ಟು ಮಾತ್ರ ಕುಡಿಯುವುದಕ್ಕೆ ಯೋಗ್ಯವಾಗಿದೆ. ಹೀಗಾಗಿ ನೀರನ್ನು ಪೋಲು ಮಾಡದೆ ಎಚ್ಚರಿಕೆಯಿಂದ ಬಳಸಬೇಕು. ಜಲಮೂಲಗಳ ರಕ್ಷಣೆಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಗ್ರಾಹಕರಿಗೆ ಜಾಗೃತಿ ಮೂಡಿಸಿ ಅವರ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ವಿಶ್ವ ಗ್ರಾಹಕರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಯಾವುದೇ ವಂಚನೆಗೆ ಗುರಿಯಾಗಬಾರದು, ಅವರಿಗಿರುವ ಗ್ರಾಹಕ ಹಕ್ಕುಗಳ ಬಗ್ಗೆ ರಾಷ್ಟ್ರೀಯ ಉಚಿತ ಪ್ರಾಧಿಕಾರ ತಿಳಿಸಿ ಕೊಡುವುದು ವಿಶ್ವ ಗ್ರಾಹಕ ಹಕ್ಕುಗಳ ದಿನದ ಉದ್ದೇಶವಾಗಿದೆ ಎಂದರು.

ಕಾನೂನಿನ ಅರಿವು ಹೊಂದುವುದರಿಂದ ಗ್ರಾಹಕರು ತಮಗೆ ಸೇವಾ ನ್ಯೂನತೆ, ಅನುಚಿತ ವ್ಯಾಪಾರ ಪದ್ಧತಿಗಳಿಂದ ಆಗುವ ಸಮಸ್ಯೆ ಹಾಗೂ ನಷ್ಟಗಳಿಗೆ ಸುಲಭವಾಗಿ ಗ್ರಾಹಕರ ಆಯೋಗಗಳ ಮೂಲಕ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಂದರ್‌ರಾಜ್ ಮಾತನಾಡಿ, ಮಾನವನ ದುರಾಸೆಯಿಂದ ನೀರುಬೇಕು ಎಂದಾಗ ಭೂಮಿಯನ್ನು ಎಷ್ಟು ಕೊರೆದರೂ ನೀರು ಸಿಗದೆ ಇರುವ ಪರಿಸ್ಥಿತಿಯನ್ನು ತಲುಪುತ್ತಿದ್ದೇವೆ. ಇನ್ನು ಮುಂದೆಯಾದರೂ ನೀರನ್ನು ಮಿತವಾಗಿ ಬಳಸುತ್ತಾ ಹೋಗಬೇಕು. ನೀರಿನ ದುಂದುವೆಚ್ಚ ಮುಂದುವರಿಯುತ್ತಾ ಈ ಭೂಮಿಯು ಹೋದರೆ ಬರಡಾಗಿ ಯಾವುದೇ ರೀತಿಯ ಸಸ್ಯಗಳು, ಪ್ರಾಣಿಸಂಕುಲಗಳು ಇಲ್ಲದೇ ಹೋಗಬಹುದು. ಆದ್ದರಿಂದ ನೀರನ್ನು ಮಿತವಾಗಿ ಬಳಸಿ ಹಾಗೂ ಅಂತರ್ಜಲದ ಸಂರಕ್ಷಣೆಯನ್ನು ಮಾಡಿ ಮುಂದಿನ ಪೀಳಿಗೆಗೆ ನೀರಿನ ಅಭಾವ ತಡೆಯಲು, ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಎ.ಡಿ.ಕುಮಾರ್, ಸಹ ಕಾರ್ಯದರ್ಶಿ ಶ್ವೇತ, ಟೈಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಸಿಸುನಿಲ್ ಕುಮಾರ್, ಶಿಕಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.