ಕವಿತಾಳ ಪಪಂನಿಂದ ₹2.21 ಲಕ್ಷ ಉಳಿತಾಯ ಬಜೆಟ್‌

| Published : Mar 30 2025, 03:08 AM IST

ಸಾರಾಂಶ

ನೀರಿನ ಕರ, ಆಸ್ತಿ ತೆರಿಗೆ, ಕಟ್ಟಡ ನಿರ್ಮಾಣ ಪರವಾನಗಿ, 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಸೇರಿ ವಿವಿಧ ಮೂಲಗಳಿಂದ ಅಂದಾಜು 5.49 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ, ಕುಡಿಯುವ ನೀರು, ಚರಂಡಿ, ಸ್ವಚ್ಚತೆ ಸೇರಿ ಆದ್ಯತೆ ಮೇರೆಗೆ ಮೂಲ ಸೌಕರ್ಯ ಒದಗಿಸಲು ಒದಗಿಸಲು ₹5.47 ಖರ್ಚು ಮಾಡಲಾಗಿ ₹2.21 ಲಕ್ಷ ಉಳಿತಾಯ ಬಜೆಟ್ ಇದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಜಗನ್ನಾಥ ಹೇಳಿದರು.

ಕವಿತಾಳ: ನೀರಿನ ಕರ, ಆಸ್ತಿ ತೆರಿಗೆ, ಕಟ್ಟಡ ನಿರ್ಮಾಣ ಪರವಾನಗಿ, 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಸೇರಿ ವಿವಿಧ ಮೂಲಗಳಿಂದ ಅಂದಾಜು 5.49 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ, ಕುಡಿಯುವ ನೀರು, ಚರಂಡಿ, ಸ್ವಚ್ಚತೆ ಸೇರಿ ಆದ್ಯತೆ ಮೇರೆಗೆ ಮೂಲ ಸೌಕರ್ಯ ಒದಗಿಸಲು ಒದಗಿಸಲು ₹5.47 ಖರ್ಚು ಮಾಡಲಾಗಿ ₹2.21 ಲಕ್ಷ ಉಳಿತಾಯ ಬಜೆಟ್ ಇದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಜಗನ್ನಾಥ ಹೇಳಿದರು.ಇಲ್ಲಿನ ಪಪಂ ಕಚೇರಿಯಲ್ಲಿ ಅಧ್ಯಕ್ಷೆ ಕಾಸೀಂ ಬೀ ಚಾಂದ್‌ ಪಾಶಾ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಬಜೆಟ್‌ ಸಭೆ ಮಾತನಾಡಿದರು. ನಗರೋತ್ಥಾನ ಯೋಜನೆಯಡಿ 5 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 5 ಮತ್ತು 6ನೇ ವಾರ್ಡ್‌ಗಳಿಗೆ ಯಾವುದೇ ರೀತಿಯ ಹಣ ನಿಗದಿ ಮಾಡಿಲ್ಲ, 16 ವಾರ್ಡ್‌ಗಳಿಗೂ ಸಮಾನ ಹಂಚಿಕೆ ಮಾಡಬೇಕು ಎಂದು ಸದಸ್ಯ ರುಕ್ಮುದ್ದೀನ್‌ ಸಭೆಯಲ್ಲಿ ಒತ್ತಾಯಿಸಿದರು. ಉಪಾಧ್ಯಕ್ಷೆ ಎಲಿಜಾ ಒವಣ್ಣ, ಸದಸ್ಯರಾದ ರಮೇಶ ನಗನೂರು, ಲಾಳೇಶ ನಾಯಕ, ಯಲ್ಲಪ್ಪ ಮಾಡಗಿರಿ,ಅಮರೇಶ ಕಟ್ಟಿಮನಿ, ಮಲ್ಲಿಕಾರ್ಜುನಗೌಡ, ರಾಜೇಶ್ವರಿ ತಿಪ್ಪಯ್ಯಸ್ವಾಮಿ, ಅಂಬಮ್ಮ ಮ್ಯಾಗಳಮನಿ, ಗೌರಮ್ಮ ಮೌನೇಶ ಸಭೆಯಲ್ಲಿ ಭಾಗವಹಿಸಿದ್ದರು.