ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು, ಕುಂದಾಪುರ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಸಾವಿಷ್ಕರ್ - ೨೦೨೬ ರಲ್ಲಿ ಸಮಗ್ರ ಚಾಂಪಿಯಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕಂಪ್ಯೂಟರ್ ಸೈನ್ಸ್‌ ವಿಭಾಗದ ವಿದ್ಯಾರ್ಥಿಗಳಾದ ಗುರು ಗಣೇಶ್ ಎನ್. ಭಟ್, ಕಾಮಾಕ್ಷಿ ಜಿ. ನಾಯಕ್, ನಾಗರಾಜ, ಸಾತ್ವಿಕ್ ಜೆ. ಮತ್ತು ಸಂಜನಾ ಇವರು ಸಿನಿಕ್ಯಾಪ್ಚರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಮೆಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳಾದ ನಾಗರಾಜ, ಸಾತ್ವಿಕ್ ಜೆ. ಮತ್ತು ಸಂಜನಾ ಇವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ಪ್ರಾಂಪ್ಟ್ ಸ್ಪರ್ಧೆಯಲ್ಲಿ ವಿಷ್ಣುಪ್ರಸಾದ್ ಪ್ರಥಮ ಬಹುಮಾನ ಪಡೆದಿರುತ್ತಾರೆ. ಸಮೂಹ ನೃತ್ಯ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸಾಯನ್ಸ್ ವಿಭಾಗ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಅನನ್ಯ, ಸ್ಪೂರ್ತಿ, ಗ್ಲೆನ್ ಸ್ಟನ್ ಕ್ರಿಸ್ ಡಯಾಸ್ ಮತ್ತು ಕಾರ್ತಿಕ್ ಪ್ರಥಮ ಹಾಗೂ ಗಾನವಿ ಸುಷ್ಮಾ, ಕಾವ್ಯ, ಅನುಶ್ರೀ ಪಿ. ತಂತ್ರಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಡಮ್ ಚಾರಡೇಸ್ ಸ್ಪರ್ಧೆಯಲ್ಲಿ ಕಂಪ್ಯೂಚರ್ ಸಾಯನ್ಸ್ ವಿಭಾಗದ ವಿದ್ಯಾರ್ಥಿಗಳಾದ ಗಾನವಿ ಸುಷ್ಮಾ, ಕಾವ್ಯ, ಅನುಶ್ರೀ ಪಿ. ತಂತ್ರಿ, ಚಂದ್ರಕಲಾ ಪ್ರಥಮ ಹಾಗೂ ಶ್ರೀಧನ್ಯ, ಶ್ರೇಯ, ಸೌಂದರ್ಯ, ಸೌಜನ್ಯ ದ್ವಿತೀಯ ಬಹುಮಾನ ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಂಸ್ಥೆಯ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.