ಸಾರಾಂಶ
ಸವಿತ ಸಮುದಾಯ ಸಮಾಜದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಸಮುದಾಯಗಳ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಈ ಸಮುದಾಯ ಸಾಕಷ್ಟು ನಿರ್ಲಕ್ಷ್ಯಗೆ ಒಳಗಾಗಿದೆ. ಹಾಗಾಗಿ ಸರ್ಕಾರಗಳು ಹಾಗೂ ಶಾಸಕರು ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಪಟ್ಟಣದಲ್ಲಿ ಇರುವ ಸಮುದಾಯದ ರಾಮಮಂದಿರದ ಬಳಿ ಸವಿತ ಸಮುದಾಯ ಹಾಗೂ ಮಂಗಳವಾಧ್ಯ ಕಲಾವಿದರಿಗೆ ಸಮುದಾಯ ಭವನ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದ್ದೀರಿ. ಆ ಬಗ್ಗೆ ಪ್ರಯತ್ನಿಸಲಾಗುವುದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ವೈದ್ಯಕೀಯ ಕ್ಷೇತ್ರವನ್ನು ಹೊರತು ಪಡಿಸಿದರೆ ಸವಿತ ಸಮುದಾಯ ಮಾತ್ರ ಸಮಾಜದ ಎಲ್ಲಾ ವರ್ಗ, ಜಾತಿ, ಸಮುದಾಯಗಳ ಜನರ ಸೇವೆ ನಡೆಸುತ್ತಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ಸವಿತ ಸಮುದಾಯದ ಗಜಾನನ ನಯನಜ ಕ್ಷತ್ರೀಯ ರಾಮಮಂದಿರದಲ್ಲಿ ನಡೆದ ಶ್ರೀತ್ಯಾಗರಾಜರ 2ನೇ ವರ್ಷದ ಆರಾಧನೆ ಮಹೋತ್ಸವದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸವಿತ ಸಮುದಾಯ ಸಮಾಜದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಸಮುದಾಯಗಳ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಈ ಸಮುದಾಯ ಸಾಕಷ್ಟು ನಿರ್ಲಕ್ಷ್ಯಗೆ ಒಳಗಾಗಿದೆ. ಹಾಗಾಗಿ ಸರ್ಕಾರಗಳು ಹಾಗೂ ಶಾಸಕರು ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಇರುವ ಸಮುದಾಯದ ರಾಮಮಂದಿರದ ಬಳಿ ಸವಿತ ಸಮುದಾಯ ಹಾಗೂ ಮಂಗಳವಾಧ್ಯ ಕಲಾವಿದರಿಗೆ ಸಮುದಾಯ ಭವನ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದ್ದೀರಿ. ಆ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.ಈ ವೇಳೆ ಸಮುದಾಯದ ಮುಖಂಡರಾದ ತಮ್ಮಣ್ಣ, ರಘು, ಮಂಜಣ್ಣ, ಬ್ಯಾಡತಿಮ್ಮನಕೊಪ್ಪಲು ರವಿಕುಮಾರ್, ಬೇಬಿಕುಮಾರ್, ಹಾರೋಹಳ್ಳಿ ತೋಪಣ್ಣ, ಮಂಜುನಾಥ್, ಲೋಕೇಶ್, ಮೋಹಿತ್, ಟೌನ್ ಅಧ್ಯಕ್ಷ ಸ್ವಾಮಿ, ಕಾರ್‍ಯದರ್ಶಿ ಡಿ.ವೀರಭದ್ರ ಸೇರಿದಂತೆ ಹಲವರು ಹಾಜರಿದ್ದರು.ಅನುತ್ತೀರ್ಣ ಅಭ್ಯರ್ಥಿ: ಪರೀಕ್ಷೆಗೆ ಹಾಜರಾಗಲು ಅವಕಾಶ
ಮಂಡ್ಯ: ರಾಜ್ಯದ ಎಲ್ಲಾ ಸರ್ಕಾರಿ/ಖಾಸಗಿ/ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2017-19 ನೇ ಸಾಲಿನಲ್ಲಿ 2 ವರ್ಷದ ಅವಧಿಯ ವೃತ್ತಿಗಳಿಗೆ ಪ್ರವೇಶ ಪಡೆದು, ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಸೆಮಿಸ್ಟರ್ ಪದ್ಧತಿಯ ಅಭ್ಯರ್ಥಿಗಳಿಗೆ ಮಾ.11 ರಿಂದ 16 ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲು ಕೊನೆ ಅವಕಾಶ ಕಲ್ಪಿಸಲಾಗಿದೆ. ನವದೆಹಲಿಯ ಡಿಜಿಟಿಯವರು ಪರೀಕ್ಷೆ ನಡೆಸಲಿದೆ. ಪರೀಕ್ಷೆಗೆ, ಪರೀಕ್ಷಾ ಶುಲ್ಕ ಪಾವತಿಸಲು ಫೆಬ್ರವರಿ 15 ಕೊನೆ ದಿನ ಅನುತ್ತೀರ್ಣ ಅಭ್ಯರ್ಥಿಗಳು ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತಾಂತ್ರಿಕ ರೇಖಾ ಚಿತ್ರ ಹಾಗೂ ವೃತ್ತಿ ಪ್ರಾಯೋಗಿಕ ವಿಷಯಗಳ ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಸಿಬಿಟಿ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಿ ಪರೀಕ್ಷೆಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು ಸಂಪರ್ಕಿಸಬಹುದು.