ಶ್ರೇಷ್ಠ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸವಿತಾ ಮಹರ್ಷಿ

| Published : Jul 26 2024, 01:36 AM IST

ಶ್ರೇಷ್ಠ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸವಿತಾ ಮಹರ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ಸವಿತಾ ಸಮಾಜದವರು ಈ ರಾಷ್ಟ್ರಕ್ಕೆ ದೊಡ್ಡಕೊಡುಗೆ ನೀಡಿದ್ದಾರೆ. ತಮ್ಮ ವೃತ್ತಿಯನ್ನು ಅಕ್ಷರದಂತೆ ಪಾಲನೆ ಮಾಡುವ ನಿಜವಾದ ಕಾಯಕ ಜೀವಿಗಳು ಎಂದು ಹೊಗಳಿದರು. ಸವಿತಾ ಮಹರ್ಷಿಗಳು ಪವಾಡ ಪುರುಷರಾಗಿದ್ದರು. ನಂಬಿದ ಭಕ್ತರಿಗೆ ಅವರು ಉದ್ದಾರ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಸವಿತಾ ಮಹರ್ಷಿ ಸಮಾಜದ ಶ್ರೇಷ್ಟತೆಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಇವರು ರಥಸಪ್ತಮಿಯ ದಿನ ಶಿವನ ಬಲಗಣ್ಣಿನಿಂದ ಜನ್ಮ ತಾಳಿದ್ದರಿಂದ ಪ್ರತಿವರ್ಷ ಅದೇ ದಿನ ಜಯಂತಿ ಆಚರಿಸಲಾಗುತ್ತದೆ. ಆರ್ಥಿಕ, ಸಾಮಾಜಿಕ ರಾಜಕೀಯ ಹಾಗು ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ ಎಂದು ಕೆ.ಹೆಚ್.ಪಿ. ಫೌಂಡೇಷನ್ ಕಾರ್ಯದರ್ಶಿ ಶ್ರೀನಿವಾಸಗೌಡ ತಿಳಿಸಿದರು.

ತಾಲೂಕಿನ ಕಾಟನಕಲ್ಲು ಗ್ರಾಮದಲ್ಲಿ ದಾಸಪ್ಪ ಸಾಂಸ್ಕೃತಿಕ ಮತ್ತು ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್(ರಿ) ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾಟನಕಲ್ಲು ಶ್ರೀ ಪ್ರಸನ್ನಾಂಜನೇಯ ಸ್ವಾಮಿ ದೇವಾಲಯದಆವರಣದಲ್ಲಿ ಹಮ್ಮಿಕೊಂಡಿದ್ದ ನಾದಬ್ರಹ್ಮ ಶ್ರೀ ತ್ಯಾಗರಾಜ ಸ್ವಾಮಿ ಆರಾಧನೆ ಮತ್ತು ಸವಿತಾ ಮಹರ್ಷಿ ಜಯಂತ್ಸೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಯಕ ಜೀವಿಗಳು:

ಸವಿತಾ ಸಮಾಜದವರು ಈ ರಾಷ್ಟ್ರಕ್ಕೆ ದೊಡ್ಡಕೊಡುಗೆ ನೀಡಿದ್ದಾರೆ. ತಮ್ಮ ವೃತ್ತಿಯನ್ನು ಅಕ್ಷರದಂತೆ ಪಾಲನೆ ಮಾಡುವ ನಿಜವಾದ ಕಾಯಕ ಜೀವಿಗಳು ಎಂದು ಹೊಗಳಿದರು. ಸವಿತಾ ಮಹರ್ಷಿಗಳು ಪವಾಡ ಪುರುಷರಾಗಿದ್ದರು. ನಂಬಿದ ಭಕ್ತರಿಗೆ ಅವರು ಉದ್ದಾರ ಮಾಡಿದ್ದಾರೆ. ಹಡಪದ ಹಪ್ಪಣ್ಣವನರು ಬಸವನ್ಣವನರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಸವಾದಿ ಶರಣರ ಆಚರಣೆಯ ಉದ್ದೇಶ ಅವರಕಾಲದಲ್ಲಿ ಸಮಾಜಕ್ಕೆ ಕೊಟ್ಟ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಟ್ರಸ್ಟ್‌ನ ಅಧ್ಯಕ್ಷ ಜಿ.ಡಿ.ಶಿವಕುಮಾರ್ ಮಾತನಾಡಿ ಬಸವಾದಿ ಶರಣರು ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು, ಸಕಲರಿಗೆ ಲೇಸೆನ್ನೆ ಬರಸಿದವರು ಕಾಶಿಯಲ್ಲಿಸಿಕ್ಕ ಪುರಾವೆಗಳಿಂದ ಸವಿತಾ ಮಹರ್ಷಿಗಳ ಇತಿಹಾಸ ನಮಗೆ ತಿಳೀದು ಬರುತ್ತದೆ. ನಮ್ಮ ಸಮಾಜದ ಇತರೆ ರಾಜ್ಯಗಳಲ್ಲಿ ನಾವ್ಹಿ ಬ್ರಾಹ್ಮಣರ ಸಂಘ ಎಂದು ಕರೆಯಲಾಗುತ್ತದೆ. ಕನರಾಟಕದ ಮೈಸೂರು ಭಾಗದಲ್ಲಿ ಮಹಾರಾಜರ ಕಾಲದಲ್ಲಿ ಸವಿತಾ ಸಮಾಜ ಎಂದು ಕರೆಯುತ್ತಿದ್ದರು. ಆ ಹೆಸರೇ ಚಾಲ್ತಿಯಲ್ಲಿದೆ ಎಂದರು.

ಕಲಾವಿದ ಡಾ.ವಿ.ಮಣಿಗೆ ಸನ್ಮಾನ

ನಾದಕಲಾನಿಧಿನಾದಬ್ರಹ್ಮಾಲಯ ತವಿಲ್(ಡೋಲು)ಚಕ್ರವರ್ತಿ ಅಂತರರಾಷ್ಟ್ರೀಯ ಡೋಲು ಕಲಾವಿದರು ಕಾರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ತಮಿಳುನಾಡು ಸರ್ಕಾರದ ಕಲೈಮಮಣಿ ಪ್ರಶಸ್ತಿ ಪುರಸ್ಕೃತರು ಡೋಲು ವಿದ್ವಾನ್ ಡೆಂಕಣಿಕೋಟೆ ಡಾ.ವಿ.ಮಣಿ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಇದೇ ಸಮಯದಲ್ಲಿ ದೂರದರ್ಶನ ಕಲಾವಿದರು ಡೋಲು ವಿದ್ವಾನ್ ಸಿ.ಎಸ್.ಮಂಜುನಾಥ್, ನಾದಸ್ವರ ವಿದ್ವಾನ ಎಲ್ಲಂಪಲ್ಲಿ ವೈ،ವಿ،ನರಸಿಂಹಮೂರ್ತಿ, ಚಿಂತಲಪಲ್ಲಿ ಗಂಗಣ್ಣ, ಚಿಂತಾಮಣಿ ಕೆ.ವಿ.ಶ್ಯಾಮಣ್ಣ, ಪಿ۔ಎಸ್۔ವೆಂಕಟೇಶ್ ಬಾಗೇಪಲ್ಲಿ ಈ ಗಣ್ಯರಿಂದ ಸಂಗೀತಕಛೇರಿಯನ್ನು ನಡೆಸಿಕೊಟ್ಟರು.

ಎಂ.ಎನ್.ರಾಧಾಕೃಷ್ಣ, ಶಿವಾರೆಡ್ಡಿ, ಬಿ.ಎಮ್.ಮಂಜುನಾಥ್, ಎಂ.ಎನ್.ಸುರೇಶ್, ಮತ್ತಿತರರು ಭಾಗವಹಿಸಿದ್ದರು.