ಮಹಿಳಾ ಶಿಕ್ಷಣಕ್ಕೆ ಶ್ರಮಿಸಿದ ಸಾವಿತ್ರಿ ಬಾಫುಲೆ: ಭೂದೇಶ

| Published : Jan 04 2025, 12:31 AM IST

ಸಾರಾಂಶ

ಬಾಳೆಹೊನ್ನೂರು, ಮಹಿಳೆಯರ ಶಿಕ್ಷಣಕ್ಕಾಗಿ ಸಾವಿತ್ರಿ ಬಾಫುಲೆ ಅವರು ಶ್ರಮಿಸಿದ್ದು, ಅವರ ಸೇವೆಯನ್ನು ಮರೆಯಲು ಅಸಾಧ್ಯ ಎಂದು ಎಸ್‌ಜೆಆರ್ ಕಾಲೇಜಿನ ಪ್ರಾಚಾರ್ಯ ಕೆ.ಆರ್.ಭೂದೇಶ ಹೇಳಿದರು.

ಎಸ್‌ಜೆಆರ್ ಕಾಲೇಜಿನಲ್ಲಿ ಸಾವಿತ್ರಿ ಬಾಫುಲೆ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಹಿಳೆಯರ ಶಿಕ್ಷಣಕ್ಕಾಗಿ ಸಾವಿತ್ರಿ ಬಾಫುಲೆ ಅವರು ಶ್ರಮಿಸಿದ್ದು, ಅವರ ಸೇವೆಯನ್ನು ಮರೆಯಲು ಅಸಾಧ್ಯ ಎಂದು ಎಸ್‌ಜೆಆರ್ ಕಾಲೇಜಿನ ಪ್ರಾಚಾರ್ಯ ಕೆ.ಆರ್.ಭೂದೇಶ ಹೇಳಿದರು.ಪಟ್ಟಣದ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿ ಬಾಫುಲೆ ಜನ್ಮ ದಿನಾಚರಣೆ ಯಲ್ಲಿ ಮಾತನಾಡಿದರು. ಸಾವಿತ್ರಿ ಬಾಫುಲೆ ಅವರ ಜೀವನ ಚರಿತ್ರೆ ಎಲ್ಲರಿಗೂ ಮಾದರಿಯಾಗಿದ್ದು, ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬ ನುಡಿ ಪಾಲಿಸಿದ ಏಕೈಕ ವ್ಯಕ್ತಿ ಹಾಗೂ ಅದರ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಉಪನ್ಯಾಸಕ ಕೆ.ಎಂ.ರಾಕೇಶ್ ಮಾತನಾಡಿ, ಸಾವಿತ್ರಿ ಬಾಫುಲೆ ಹೇಳಿದಂತೆ ಈ ಸಮಾಜದ ಮುಖ್ಯ ಶತ್ರು ಅಜ್ಞಾನ ಅದನ್ನು ನಾವೆಲ್ಲರೂ ಕೂಡಿ ಓಡಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಸಾವಿತ್ರಿ ಬಾಫುಲೆಯವರ ಸಾಧನೆ, ಮಹಿಳಾ ಶಿಕ್ಷಣಕ್ಕಾಗಿ ನೀಡಿದ ಕೊಡುಗೆ ಹಾಗೂ ಸಮಾಜ ಸೇವೆ ಗಮನಿಸಿ ಅವರ ಜನ್ಮದಿನವನ್ನು ಮಹಿಳಾ ಶಿಕ್ಷಕರ ದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಇದು ಸಂತೋಷದ ವಿಚಾರ ಎಂದರು. ಎಸ್‌ಜೆಆರ್ ಪ್ರೌಢಶಾಲೆ ಹಿರಿಯ ಶಿಕ್ಷಕ ಕುಮಾರ್ ಚಂದ್ರನಾಯಕ್, ದೈಹಿಕ ಶಿಕ್ಷಣ ಶಿಕ್ಷಕ ಉಮಾಶಂಕರ್, ಅರವಿಂದ್, ಶಿಕ್ಷಕಿಯರಾದ ರಮಾಮಣಿ, ಲತಾ, ಸುಜಾತ, ಇಂಚರ, ಸಿಬ್ಬಂದಿ ರ‍್ರಿ ಜೇಮ್ಸ್, ಮುತ್ತುಕುಮಾರ್, ಜ್ಯೋತಿಶ್ರೀ ಮತ್ತಿತರರು ಹಾಜರಿದ್ದರು. ೦೩ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಾವಿತ್ರಿ ಬಾಫುಲೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಕೆ.ಆರ್.ಭೂದೇಶ, ಕೆ.ಎಂ.ರಾಕೇಶ್, ಕುಮಾರಚಂದ್ರ ನಾಯಕ್, ರಮಾಮಣಿ, ಲತಾ, ಸುಜಾತ, ಇಂಚರ ಇದ್ದರು.