ಸಾರಾಂಶ
ಹರಪನಹಳ್ಳಿ: 19ನೇ ಶತಮಾನದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿ ಸ್ತ್ರೀಕುಲಕ್ಕೆ ಶಿಕ್ಷಣದ ಬೆಳಕು ತೋರಿದವರು ಸಾವಿತ್ರಿಬಾಯಿ ಪುಲೆ ಎಂದು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತೆ ಟಿ.ಎಚ್.ಎಂ. ಲಲಿತಮ್ಮ ತಿಳಿಸಿದರು.ಪಟ್ಟಣದ ಎಡಿಬಿ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.ವೈದಿಕಶಾಹಿಗಳ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಯಶಸ್ಸು ಕಂಡ ಭಾರತದ ಮೊದಲ ಮಹಿಳಾ ಹೋರಾಟಗಾರ್ತಿ ಪುಲೆ. ಮಹಿಳೆಯರಲ್ಲಿ ಅಕ್ಷರದ ಅರಿವು ಮೂಡಿಸಿ ಸ್ವಾಭಿಮಾನ ಮೂಡಿಸಿದ ಮಹಾಮಾತೆ ಇವರು ಎಂದು ಹೇಳಿದರು.ಉಪನ್ಯಾಸಕಿ ಡಾ.ಸುವರ್ಣ ಅರುಂಡಿ ನಾಗರಾಜ್ ಮಾತನಾಡಿ, ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಮಹತ್ವವಾದದ್ದು ಎಂದು ಮಹಿಳೆಯರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.ಪ್ರಾಚಾರ್ಯ ಡಾ.ಸಿದ್ದಲಿಂಗಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇಣುಕಪ್ರಸಾದ ಕಲ್ಮಠ ಮಾತನಾಡಿದರು.ಈ ಸಂದರ್ಭದಲ್ಲಿ ಡಾ.ಅಣ್ಣೇಶ್, ಡಾ. ಎ.ಎಂ. ರಾಜಶೇಖರಯ್ಯ, ಡಾ. ತಿಪ್ಪೇಸ್ವಾಮಿ, ಜಿ.ಬಿ. ನಾಗನಗೌಡ, ಆನಂದ್ ಎಸ್, ಆಶಾ ಎಚ್., ಡಾ.ಗೋವರ್ಧನ್, ಸಿ.ನವಾಜ್ ಬಾಷಾ, ಮಧುಕುಮಾರ್, ಕಲ್ಪನಾ, ಭರತ್, ಡಾ. ರಮೇಶ್, ಸೃಷ್ಟಿ ಕೆ. ಮಹೇಂದ್ರ, ಚನ್ನವೀರ, ಹಿಮವಂತ, ಚಂದ್ರಶೇಖರ, ನಂದೀಶ್, ಕಿರಣ್ ಹರ್ಷವರ್ಧನ್, ಹರೀಶ್, ನಯಾಜ್, ಪ್ರವೀಣ್, ವಿದ್ಯಾಶ್ರೀ, ನಂದಿನಿ, ಅನುಪಮ, ತೇಜಸ್ವಿನಿ, ಪ್ರಭುದೇವ್ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.