ಪೋವನ ಆಶ್ರಮ ಇದರ ಮಾಹಿತಿ ಕೇಂದ್ರವನ್ನು ಕ್ಷೇತ್ರದ ಏಕ ಜಾತಿಧರ್ಮ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ ಗುರುವಾರ ಉದ್ಘಾಟಿಸಿದರು.

ಕಾಪು: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ ಸಂಕಲ್ಪ ಆತ್ಮ ತಪೋವನ ಆಶ್ರಮ ಇದರ ಮಾಹಿತಿ ಕೇಂದ್ರವನ್ನು ಕ್ಷೇತ್ರದ ಏಕ ಜಾತಿಧರ್ಮ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ ಗುರುವಾರ ಉದ್ಘಾಟಿಸಿದರು.

ಸುಮಾರು 10 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಆಶ್ರಮದಲ್ಲಿ ವಿವಿಧ ಸೇವಾ ಕೇಂದ್ರಗಳು ನಿರ್ಮಾಣಗೊಳ್ಳಲಿವೆ. ಈ ಕೇಂದ್ರಗಳಿಗೆ ಭಕ್ತರು ನೆರವು ನೀಡಲು, ಮಾಹಿತಿಗಾಗಿ ನೆರವಾಗಲು ಈ ಕೇಂದ್ರ ಸ್ಥಾಪಿಸಲಾಗಿದೆ ಎಂದು ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ ಈ ಸಂದರ್ಭದಲ್ಲಿ ಹೇಳಿದರು.ಇನ್ನೊರ್ವ ಟ್ರಸ್ಟಿ ಸತೀಶ್ ದೇವಾಡಿಗ, ಆಡಳಿತ ಮಂಡಳಿಯ ಪ್ರಮುಖರಾದ ನಾಗರಾಜ್ ಬೈಂದೂರು, ಲಾವಣ್ಯ ವಿನೋದ್ ಕುಮಾರ್, ವಿಜಯ್ ಕುಂದರ್, ರಾಜೇಶ್ ಇನ್ನಂಜೆ, ಶ್ವೇತಾ ಜಯರಾಮ ಶೆಟ್ಟಿಗಾರ್, ಪ್ರತಿಮ ಪ್ರಭಾಕರ್, ಜ್ಯೋತಿ ಶೆಟ್ಟಿ, ಚೇತನ ಶೆಟ್ಟಿ, ವಿಘ್ನೇಶ್ ನೀಲಾವರ ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ ವಂದಿಸಿದರು.