ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸುವರ್ಣ ಸಂಭ್ರಮದಲ್ಲಿರುವ ಇಲ್ಲಿನ ಶರಣಬಸವೇಶ್ವರ ಸಂಯುಕ್ತ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೇ 2024ರಲ್ಲಿ ನಡೆದ ಕೆ.ಸಿ.ಇ.ಟಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ಕೆ ಸಿಇಟಿ ಐದು ವಿಭಾಗಗಳಲ್ಲಿಯೂ ಸ್ಟೇಟ್ ರ್‍ಯಾಂಕ್ ಪಡೆಯುವ ಮೂಲಕ ಸಾಂಪ್ರದಾಯಿಕ ದಾಖಲೆ ಮುಂದುವರೆಸಿದ್ದಾರೆ.ಈ ಕಾಲೇಜಿನ ವಿನಯಕುಮಾರ. ಕೆ ಈತ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 14 ನೇ ರ್‍ಯಾಂಕ್, ನ್ಯಾಚುರೋಪಥಿಯೋಗ ವಿಜ್ಞಾನದಲ್ಲಿ ರಾಜ್ಯಕ್ಕೆ 29ನೇ ರ್‍ಯಾಂಕ್, ಪಶು ಸಂಗೋಪನಾ ವಿಜ್ಞಾನದಲ್ಲಿ ರಾಜ್ಯಕ್ಕೆ 47ನೇ ರ್‍ಯಾಂಕ್, ಬಿ. ನರ್ಸಿಂಗ್‌ನಲ್ಲಿ ರಾಜ್ಯಕ್ಕೆ 47ನೇ ರ್‍ಯಾಂಕ್, ಔಷಧೀಯ ವಿಜ್ಞಾನದಲ್ಲಿ ರಾಜ್ಯಕ್ಕೆ 74ನೇ ರ್‍ಯಾಂಕ್ ಹಾಗೂ ಇಂಜೀನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 193ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ.
ಇನ್ನು ಇದೇ ಕಾಲೇಜಿನ ಪಂಚಾಕ್ಷರಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 60ನೇ ರ್‍ಯಾಂಕ್, ನ್ಯಾಚುರೋಪಥಿಯೋಗ ವಿಜ್ಞಾನದಲ್ಲಿ 105ನೇ ರ್‍ಯಾಂಕ್, ಪಶು ಸಂಗೋಪನಾ ವಿಜ್ಞಾನದಲ್ಲಿ 153ನೇ ರ್‍ಯಾಂಕ್, ಬಿ. ನರ್ಸಿಂಗ್ ರಾಜ್ಯಕ್ಕೆ 153ನೇ ರ್‍ಯಾಂಕ್, ಔಷಧೀಯ ವಿಜ್ಞಾನದಲ್ಲಿ ರಾಜ್ಯಕ್ಕೆ 256ನೇ ರ್‍ಯಾಂಕ್, ಇಂಜೀನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 462ನೇ ರ್‍ಯಾಂಕ್ ಗಳಿಸಿದ್ದಾನೆ. ಇವರಿಬ್ಬರ ಕೆ ಸಿಇಟಿ ಸಾಧನೆಯಿಂದಾಗಿ ಎಸ್ಬಿಆರ್ ಕಾಲೇಜಿನ ಕೀರ್ತಿ ಗಗನಕ್ಕೆ ಚಿಮ್ಮಿದೆ.ಈ ಕಾಲೇಜಿನ ವಿದ್ಯಾರ್ಥಿಗಳ ಪೈಕಿ 5000 ರ್‍ಯಾಂಕಿಂಗ್‍ನಲ್ಲಿ ಇಂಜೀನಿಯರಿಂಗ್ ವಿಭಾಗದಲ್ಲಿ 57, ಕೃಷಿ ವಿಜ್ಞಾನ ವಿಭಾಗದಲ್ಲಿ 103 ವಿದ್ಯಾರ್ಥಿಗಳು, ಔಷಧೀಯ ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು, ನ್ಯಾಚುರೋಪಥಿಯೋಗ ವಿಜ್ಞಾನದಲ್ಲಿ 101 ವಿದ್ಯಾರ್ಥಿಗಳು, ಪಶುಸಂಗೋಪನಾ ವಿಜ್ಞಾನ ವಿಭಾಗದಲ್ಲಿ 102 ವಿದ್ಯಾರ್ಥಿಗಳು, ಬಿ. ನರ್ಸಿಂಗ್ 5100 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಸಾಧನೆ ಗಮನಿಸಿ, ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಗುರು-ಶಿಷ್ಯರ ಶ್ರಮ ಸಂಸ್ಕøತಿಗೆ ದೊರೆತ ಫಲಿತಾಂಶ ಇದಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಾಧನೆಯನ್ನು ಮಾಡಿರುವುದು ಮೆಚ್ಚಿಕೊಂಡು ಕೆ.ಸಿ.ಇ.ಟಿ.ಯಲ್ಲಿ ಉತ್ತಮ ರ್‍ಯಾಂಕ್ ಪಡೆದ ಪ್ರತಿಭಾನ್ವಿತರಿಗೆ ಅಭಿನಂದಿಸಿ ಆಶೀರ್ವದಿಸಿದ್ದಾರೆ.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಇವರು ಎಸ್.ಬಿ.ಆರ್ ರಾಷ್ಟ್ರಮಟ್ಟದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು ಇದು ಅಲ್ಲಿನ ಶಿಕ್ಷಕರ ಪರಿಶ್ರಮ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಮುಂದೆ ನಡೆಯುವ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಆಶೀರ್ವದಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು ಅನುಭವಿ ಪ್ರಾಚಾರ್ಯರ ಮಾರ್ಗದರ್ಶನ ಹಾಗೂ ಅದಕ್ಕೆ ತಕ್ಕಂತೆ ಶ್ರಮವಹಿಸುವ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಸತತ ಪ್ರಯತ್ನಕ್ಕೆ ಸಿಕ್ಕ ಫಲಿತಾಂಶವಾಗಿದೆ. ಫಲಿತಾಂಶವನ್ನು ಕಂಡು ಆನಂದ ವ್ಯಕ್ತಪಡಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.ಕಾಲೇಜಿನ ಪ್ರಾಚಾರ್ಯರಾದ ಎನ್.ಎಸ್. ದೇವರಕಲ್ ಸರ್ ಅವರು ಹಾಗೂ ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವೃಂದದವರು ಸಾಧಕರಿಗೆ ಶುಭ ಹಾರೈಸಿದ್ದಾರೆ.