ವಿಜಯಪುರ: ನಗರದ ಸಿಕ್ಯಾಬ್ ಆಂಗ್ಲ ಮಾದ್ಯಮ ಕೆ.ಜಿ. ಪ್ರಾಥಮಿಕ ಮತ್ತು ಪ್ರೌಢಶಾಲೆ ನವರಸಪುರ ಶಾಲೆಯ ವಿದ್ಯಾರ್ಥಿನಿ ಸುಮನ್ ನಡುವಿನಮನಿ. 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 606 ಅಂಕ (ಶೇ.96.96) ಗಳಿಸಿದ್ದಾರೆ.
ವಿಜಯಪುರ: ನಗರದ ಸಿಕ್ಯಾಬ್ ಆಂಗ್ಲ ಮಾದ್ಯಮ ಕೆ.ಜಿ. ಪ್ರಾಥಮಿಕ ಮತ್ತು ಪ್ರೌಢಶಾಲೆ ನವರಸಪುರ ಶಾಲೆಯ ವಿದ್ಯಾರ್ಥಿನಿ ಸುಮನ್ ನಡುವಿನಮನಿ. 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 606 ಅಂಕ (ಶೇ.96.96) ಗಳಿಸಿದ್ದಾರೆ.
ಈ ಹಿಂದೆ ಅವರು 596 ಅಂಕ ಪಡೆದಿದ್ದರು. ಮರುಮೌಲ್ಯಮಾಪನದ ನಂತರ 10 ಅಂಕ ಜಾಸ್ತಿಯಾಗಿದೆ. ಕನ್ನಡ-100, ಇಂಗ್ಲಿಷ್-123, ಹಿಂದಿ-100, ಗಣಿತ-92, ವಿಜ್ಞಾನ-93 ಮತ್ತು ಸಮಾಜ ವಿಜ್ಞಾನದಲ್ಲಿ- 98 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ನರೆಗಲ್, ಸಂಸ್ಥೆಯ ಅಧ್ಯಕ್ಷ ಸಲಾವುದ್ದಿನ ಪುಣೆಕರ, ನಿರ್ದೇಶಕರಾದ ಡಾ.ಜಿಯಾ ಪುಣೆಕರ, ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ ಹಾಗೂ ಶಾಲೆಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.