ಶಿಕ್ಷಣ ಸಂಸ್ಥೆಯ ವಾರ್ಷಿಕ ಹಬ್ಬದದಲ್ಲಿ ಶಿವಾನಂದ ಶ್ರೀ ಹೇಳಿಕೆ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಶಾಲಾ ವಾರ್ಷಿಕೋತ್ಸವ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲ ಅದೊಂದು ಶಾಲೆಯ ಪ್ರಗತಿಯ ಪಕ್ಷಿನೋಟ ಎಂದು ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಎಸ್.ನಿಜಲಿಂಗಪ್ಪ ಎಜುಕೇಶನಲ್ ಅಂಡ್ ರೂರಲ್ ಡೆವಲಂಪಮೆಂಟ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಶಿಕ್ಷಣ ಸಂಸ್ಥೆಯ ವಾರ್ಷಿಕ ಹಬ್ಬದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದಿನ ದಿನಗಳು ಬರೀ ವಿದ್ಯಾವಂತರ ಕಾಲವಲ್ಲ ಬುದ್ಧಿವಂತರ ಕಾಲವಾಗಿದೆ. ಹಣೆಬರಹದ ವಿರುದ್ಧ ಹೋರಾಡುವಂತಹ ಸಾಮರ್ಥ್ಯವನ್ನು ವಿದ್ಯೆ ಕೊಡುತ್ತದೆ. ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ನೈತಿಕತೆ ಕಲಿಸುವ ಕಾರ್ಯವಾಗಬೇಕು ಎಂದರು.

ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಖಜಾಂಚಿ ಕೆ.ಸಿ ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೆ ವೇಳೆ ಮುಖಂಡರಾದ ಡಿ.ಆರ್.ಚಂದ್ರಪ್ಪ, ಡಿ.ಎನ್.ಶಂಕರಮೂರ್ತಿ, ಎಂ.ಲಕ್ಷ್ಮಣ್, ಪಿ.ಎಲ್. ಲೋಕೇಶ್, ಎಸ್.ಎಂ.ಷಡಾಕ್ಷರಯ್ಯ, ಹೆಗ್ಗೆರೆ ರಂಗಪ್ಪ ಹಾಗೂ ಆದಿರಾಜಯ್ಯ,ಪಿ.ಎಲ್, ಲೋಕೇಶ್ವರ, ಎಸ್.ಎಂ.ಷಡಾಕ್ಷರಿ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಡಿಐಜಿ ರಮೇಶ್, ಎಸ್‌ಜೆಎಂ ವಿದ್ಯಾಸಂಸ್ಥೆಯ ಅಧಿಕಾರಿ ಪ್ರದೀಪ್ ಕುಮಾರ್, ಜೀವ ವಿಮಾ ನಿಗಮದ ಅಧಿಕಾರಿ ನವೀನ್ ಕುಮಾರ್, ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಸೇರಿದಂತೆ ಸಂಸ್ಥೆಯ ಧರ್ಮದರ್ಶಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.