ಶಾಲಾ ಬಸ್‌ ಚಾಲಕನ ಮಗಳು ಜಿಲ್ಲೆಗೆ ಪ್ರಥಮ

| Published : May 12 2024, 01:16 AM IST

ಶಾಲಾ ಬಸ್‌ ಚಾಲಕನ ಮಗಳು ಜಿಲ್ಲೆಗೆ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಈ ಬಾರಿ ಪ್ರಕಟಗೊಂಡ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿನಿ ಶಾಲಾ ಬಸ್ ಚಾಲಕ ದರ್ಶನ್ ಟಿ.ವೈ.ಮತ್ತು ರೋಹಿಣಿ ಡಿ.ಅವರ ಮಗಳು ಮೋನಿಷಾ ಡಿ 625 ಅಂಕಗಳಿಗೆ 619 ಅಂಕ ಗಳಿಸಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿ ಪಟ್ಟಣಕ್ಕೆ, ಓದಿದ ಶಾಲೆಗೆ ಪಾಠ ಹೇಳಿಕೊಟ್ಟ ಗುರುಗಳಿಗೆ, ತಂದೆ ತಾಯಿಗಳಿಗೆ ಕೀರ್ತಿ ತಂದಿದ್ದಾರೆ.

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಗಳಿಸಿದ ಮೊನಿಷಾ

ಕನ್ನಡಪ್ರಭ ವಾರ್ತೆ, ತರೀಕೆರೆ

ಈ ಬಾರಿ ಪ್ರಕಟಗೊಂಡ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿನಿ ಶಾಲಾ ಬಸ್ ಚಾಲಕ ದರ್ಶನ್ ಟಿ.ವೈ.ಮತ್ತು ರೋಹಿಣಿ ಡಿ.ಅವರ ಮಗಳು ಮೋನಿಷಾ ಡಿ 625 ಅಂಕಗಳಿಗೆ 619 ಅಂಕ ಗಳಿಸಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿ ಪಟ್ಟಣಕ್ಕೆ, ಓದಿದ ಶಾಲೆಗೆ ಪಾಠ ಹೇಳಿಕೊಟ್ಟ ಗುರುಗಳಿಗೆ, ತಂದೆ ತಾಯಿಗಳಿಗೆ ಕೀರ್ತಿ ತಂದಿದ್ದಾರೆ.ಈ ಸಂದರ್ಭದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಮೋನಿಷಾ ಶಾಲೆಯಲ್ಲಿ ಗುರುಗಳು ತುಂಬಾ ಆಸಕ್ತಿ ವಹಿಸಿ ಪಾಠ ಹೇಳಿಕೊಟ್ಟರು. ವಿಶೇಷ ತರಗತಿಗಳಲ್ಲಿ ಎಲ್ಲ ವಿಷಯಗಳಲ್ಲೂ ಹೆಚ್ಚಿನ ತರಬೇತಿ ನೀಡುತ್ತಿದ್ದರು. ಶಾಲೆ ಪ್ರಿನ್ಸಿಪಾಲ್ ಪ್ರಶಾಂತ್, ಉಪಾಧ್ಯಾಯರು ಶೈಕ್ಷಣಿಕ ವರ್ಷದಲ್ಲಿ ಶೀಘ್ರದಲ್ಲಿ ಪಾಠ ಪ್ರವಚನಗಳನ್ನು ಮುಗಿಸಿ ವಾರ್ಷಿಕ ಪರೀಕ್ಷೆಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಗಾಗ್ಗೆ ಪ್ರಿಪರೇಟರಿ ಪರೀಕ್ಷೆ, ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು ಇದರಿಂದ ನಮಗೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಅನುಕೂಲವಾಯಿ. ಇದೇ ಶಾಲೆಯಲ್ಲಿ ಪಿಸಿಎಂಬಿ ತೆಗೆದುಕೊಂಡು ಪಿಯುಸಿ ಯಲ್ಲಿ ಚೆನ್ನಾಗಿ ಓದಿ ಮುಂದೆ ವೈದ್ಯಳಾಗಿ ಸೇವೆ ಸಲ್ಲಿಸಬೇಕೆಂಬ ಆಶಯ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಲು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದ ತಂದೆ ತಾಯಿಗಳಿಗೆ, ಶಾಲೆಯ ಕಾರ್ಯದರ್ಶಿ ಟಿ.ಜಿ.ಶಶಾಂಕ ಮತ್ತು ಪ್ರಿನ್ಸಿಪಾಲರಿಗೆ, ಗುರುಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.11ಕೆಟಿಆರ್.ಕೆ.1ಃ ಮೋನಿಷಾ ಡಿ.