ಸಾರಾಂಶ
ರ್ಕಾರಿ ಆದರ್ಶ ವಿದ್ಯಾಲಯ(ಆರ್‌ಎಂಎಸ್‌ಎ)ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದ್ದು, ಕುಡಿಯುವ ನೀರನ್ನು ಗುಂಡ್ಲುಪೇಟೆಯ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ದುಡ್ಡು ಕೊಟ್ಟು ನೀರು ತರುತ್ತಿರುವ ಪ್ರಸಂಗ ಎದುರಾಗಿದೆ.ಚಾಮರಾಜನಗರ ರಸ್ತೆಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬೇಸಿಗೆ ಆರಂಭವಾದ ಇಂಥ ಸಮಯದಲ್ಲಿ ದುಡ್ಡು ಕೊಟ್ಟು ನೀರು ಕುಡಿಸುವ ಅನಿವಾರ್ಯತೆ ಬಂದೊದಗಿದೆ.
ಗುಂಡ್ಲುಪೇಟೆ: ಸರ್ಕಾರಿ ಆದರ್ಶ ವಿದ್ಯಾಲಯ(ಆರ್‌ಎಂಎಸ್‌ಎ)ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದ್ದು, ಕುಡಿಯುವ ನೀರನ್ನು ಗುಂಡ್ಲುಪೇಟೆಯ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ದುಡ್ಡು ಕೊಟ್ಟು ನೀರು ತರುತ್ತಿರುವ ಪ್ರಸಂಗ ಎದುರಾಗಿದೆ.
ಚಾಮರಾಜನಗರ ರಸ್ತೆಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬೇಸಿಗೆ ಆರಂಭವಾದ ಇಂಥ ಸಮಯದಲ್ಲಿ ದುಡ್ಡು ಕೊಟ್ಟು ನೀರು ಕುಡಿಸುವ ಅನಿವಾರ್ಯತೆ ಬಂದೊದಗಿದೆ.ಆದರ್ಶ ವಿದ್ಯಾಲಯದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿದೆ. ಘಟಕ ದುರಸ್ಥಿ ಪಡಿಸಿದರೂ ದುರಸ್ಥಿಯಾಗದ ಕಾರಣ ಹಾಗು ಹೊಸ ಘಟಕದ ಯಂತ್ರ ಖರೀದಿಗೆ ಶಾಲೆಯಲ್ಲಿ ಹಣದ ಅಭಾವ ಇರುವ ಕಾರಣ, ನೀರಿನ ಕ್ಯಾನ್‌ಗಳ ಮೂಲಕ ಪಟ್ಟಣದೊಳಗಿನ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಬೈಕ್‌ನಲ್ಲಿ ನೀರು ತರುತ್ತಿದ್ದಾರೆ.
--------ಕೋಟ್........
ಶುದ್ಧ ಕುಡಿಯುವ ನೀರಿನ ಘಟಕದ ಫಿಲ್ಟರ್ ಕೆಟ್ಟು ಹೋಗಿದೆ. ಕಳೆದ ತಿಂಗಳುಗಳ ಹಿಂದೆ ಫಿಲ್ಟರ್ ದುರಸ್ಥಿ ಪಡಿಸಲಾಗಿತ್ತು. ಮತ್ತೆ ಕೆಟ್ಟಿದೆ. ಹೊಸದಾಗಿ ಖರೀದಿಸಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿಲ್ಲ. ಪ್ರತಿನಿತ್ಯ 12 ಕ್ಯಾನ್ ನೀರು ಖರೀದಿಸಿ ತಂದು ನೀರು ಕೊಡಲಾಗುತ್ತಿದೆ. ಸೋಮವಾರದೊಳಗೆ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ ಪಡಿಸಲಾಗುವುದು.-ಎಂ.ಸುಕನ್ಯ, ಮುಖ್ಯ ಶಿಕ್ಷಕಿ, ಆರ್‌ಎಂಎಸ್‌ಎ