ಶಾಲಾ ಪ್ರಾರಂಭೋತ್ಸವದ ಸಂಭ್ರಮ

| Published : Jun 01 2024, 12:46 AM IST

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳು, ಎರಡು ಜೊತೆ ಸಮವಸ್ತ್ರ ವಿತರಿಸಲಾಗಿದೆ. ವಿದ್ಯಾರ್ಥಿಗಳು ಪ್ರಾರಂಭದ ದಿನವೇ ಪಠ್ಯ ಪುಸಕ್ತ, ಸಮವಸ್ತ್ರ ಪಡೆದು ಶಾಲೆಯಲ್ಲಿ ಸಿಹಿ ತಿಂಡಿ ಸವಿದು ಖುಷಿಪಟ್ಟರು.

ಔರಾದ್‌: ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿ ಪ್ರಾರಂಭದ ದಿನವೇ ಮಕ್ಕಳು ಶಾಲೆಯಡೆಗೆ ಬರುವಂತೆ ತಾಲೂಕಿನಾದ್ಯಂತ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಜರುಗಿತು.ಬೇಸಿಗೆ ರಜೆ ಮುಗಿದು ಮಕ್ಕಳು ಮನೆಯಲ್ಲಿ ಕಾಲ ಕಳೆದು ಶುಕ್ರವಾರ ಶಾಲೆ ಪ್ರಾರಂಭಗೊಂಡು ಪಟ್ಟಣದ ಸೇರಿದಂತೆ ಎಲ್ಲೆಡೆ ಸಡಗರ ಸಂಭ್ರಮದ ಮಧ್ಯೆ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳು ಮತ್ತು ಪಾಲಕರು ಶಾಲೆಯೆಡೆಗೆ ಆಗಮಿಸುವ ವಾತಾವರಣ ಕಂಡು ಬಂತು.

ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತ ಪಠ್ಯ ಪುಸ್ತಕಗಳು ಸರಬರಾಜಾಗಿದ್ದು. ಎಲ್ಲ ಶಾಲೆಗಳಲ್ಲಿ ಪಠ್ಯ ಪುಸ್ತಕ ಲಭ್ಯವಿದ್ದು, ಶುಕ್ರವಾರ ಪಾಲಕ ಪೋಷಕರು, ಎಸ್‌ಡಿಎಂಸಿ ಸದಸ್ಯರು, ಜನಪ್ರತಿನಿಧಿಗಳು ಶಾಲೆಗೆ ಆಗಮಿಸಿ ಪ್ರಾರಂಭೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳು, ಎರಡು ಜೊತೆ ಸಮವಸ್ತ್ರ ವಿತರಿಸಲಾಗಿದೆ. ವಿದ್ಯಾರ್ಥಿಗಳು ಪ್ರಾರಂಭದ ದಿನವೇ ಪಠ್ಯ ಪುಸಕ್ತ, ಸಮವಸ್ತ್ರ ಪಡೆದು ಶಾಲೆಯಲ್ಲಿ ಸಿಹಿ ತಿಂಡಿ ಸವಿದು ಖುಷಿಪಟ್ಟರು.

ತಾಲೂಕಿನ ಎಕಲಾರ ಕ್ಲಸ್ಟರ್‌ನ ಬೋರಾಳ ಶಾಲೆಯಲ್ಲಿ ಎತ್ತಿನ ಗಾಡಿಯ ಮೂಲಕ ಮಕ್ಕಳ ಮೆರವಣಿಗೆ ಮಾಡಿ ಶಾಲಾ ಪ್ರಾರಂಭೋತ್ಸವ ವಿಶಿಷ್ಟವಾಗಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಧನರಾಜ ಮುದಾಳೆ, ನಿರ್ಮಲಾ ಸ್ವಾಮಿ, ಸತೀಶ ಮಜಗೆ, ಶಿರಿನ್, ಭಾಗ್ಯವಂತಿ, ರಾಜೇಂದ್ರ ಸೇರಿದಂತೆ ಇನ್ನಿತರರಿದ್ದರು.