ಸಾರಾಂಶ
ಹೊಸಕೋಟೆ: ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಮಾಡಿಸುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಪೂರಕವಾಗಲಿದೆ ಎಂದು ಮಾತಂಗ ಫೌಂಡೇಷನ್ ರಾಜ್ಯ ಉಪಾಧ್ಯಕ್ಷರು ಹಾಗೂ ಬಿಎಂಆರ್‌ಡಿಎ ಸದಸ್ಯರಾದ ಡಾ.ಎಚ್.ಎಮ್ ಸುಬ್ಬರಾಜು ತಿಳಿಸಿದರು.
ನಗರದ ಗೌತಮ್ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.ನಾನು ಶಿಕ್ಷಣ ಪ್ರೇಮಿಯಾಗಿ ನಾನು ಓದಿದ ಗೌತಮ್ ಕಾಲೋನಿಯ ಸರ್ಕಾರಿ ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಗೆ ಮೂಲಭೂತ ಸೌಕರ್ಯಗಳು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಪರಿಕರಗಳು ಸೇರಿ ಮಕ್ಕಳಿಗೆ ಉಚಿತ ಶೈಕ್ಷಣಿಕ ಪ್ರವಾಸದ ಭಾಗ್ಯವನ್ನು ಕಲ್ಪಿಸುತ್ತಿದ್ದೇನೆ. ಮಾಜಿ ಪುರಸಭೆ ಸದಸ್ಯ, ದಿ. ಎಚ್. ಎಸ್. ಮುನಿಯಪ್ಪ ಹಾಗೂ ಎಚ್.ಜಿ ತ್ಯಾಗರಾಜ್ ರವರ ಸ್ಮರಣಾರ್ಥವಾಗಿ ಉಚಿತ ಶೈಕ್ಷಣಿಕ ಪ್ರವಾಸವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದ್ದೇನೆ ಎಂದು ಹೇಳಿದರು.
ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಶರತ್ ಬಚ್ಚೇಗೌಡರ ಸಹಕಾರದಿಂದ ಹೊಸ ಕಟ್ಟಡ ಕಟ್ಟಿಸಿದ್ದೇವೆ. ಪ್ರಮುಖವಾಗಿ ಯಾವುದೇ ಗ್ರಾಮ ಅಥವಾ ಕಾಲೋನಿಯ ಶಾಲೆಗಳನ್ನು ಅಲ್ಲಿ ಓದಿದ ವಿದ್ಯಾರ್ಥಿಗಳೇ ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಬೇಕು. ಆದ್ದರಿಂದಲೇ ನಾನು ಗೌತಮ್ ಕಾಲೋನಿ ಶಾಲೆ ದತ್ತು ಪಡೆದುಕೊಂಡು ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದರುಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಶಿವಾನಂದ್, ರವಿ, ವೆಂಕಟೇಶ್ , ಶ್ರೀನಿವಾಸ್, ಶಿಕ್ಷಕರಾದ ಗಂಗಾಧರ್ ನಿರ್ಮಲ ಸೇರಿದಂತೆ ಗೌತಮ್ ಕಾಲೋನಿಯ ಹಲವಾರು ಮುಖಂಡರು ಹಾಜರಿದ್ದರು.