ಶಾಲಾ ಶಿಕ್ಷಣ ಎಂದಿಗೂ ಮಹತ್ವವಾದದ್ದು: ಭೈರಣ್ಣ

| Published : Jul 22 2024, 01:24 AM IST

ಶಾಲಾ ಶಿಕ್ಷಣ ಎಂದಿಗೂ ಮಹತ್ವವಾದದ್ದು: ಭೈರಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ನಾವು ವಿದೇಶಕ್ಕೆ ಹೋಗಿ ಪದವಿ ಗಳಿಸಿದರೂ, ಎಲ್ಲೇ ಜೀವನ ರೂಪಿಸಿಕೊಂಡರೂ ಶಿಕ್ಷಣ ಪಡೆದ ಶಾಲೆ ಮತ್ತು ಜನಿಸಿದ ಸ್ಥಳ ನಮಗೆ ವಿಶೇಷವಾಗಿಯೇ ಉಳಿದಿರುತ್ತದೆ ಎಂದು ಶಿಕ್ಷಕ ಭೈರಣ್ಣ ಹೇಳಿದರು.

ದಾಬಸ್‌ಪೇಟೆ: ನಾವು ವಿದೇಶಕ್ಕೆ ಹೋಗಿ ಪದವಿ ಗಳಿಸಿದರೂ, ಎಲ್ಲೇ ಜೀವನ ರೂಪಿಸಿಕೊಂಡರೂ ಶಿಕ್ಷಣ ಪಡೆದ ಶಾಲೆ ಮತ್ತು ಜನಿಸಿದ ಸ್ಥಳ ನಮಗೆ ವಿಶೇಷವಾಗಿಯೇ ಉಳಿದಿರುತ್ತದೆ ಎಂದು ಶಿಕ್ಷಕ ಭೈರಣ್ಣ ಹೇಳಿದರು.

ಬಿಲ್ಲನಕೋಟೆ ಗ್ರಾಮದ ಆರ್‌ವಿಕೆ ಪ್ರೌಢಶಾಲೆ ಆವರಣದಲ್ಲಿ ಗುರು ಪೌರ್ಣಿಮೆ ಪ್ರಯುಕ್ತ 1999-2000ನೇ ಸಾಲಿನ ಏಳನೇ ತರಗತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ 2002-2003ನೇ ಸಾಲಿನ ಆರ್‌ವಿಕೆ ಪ್ರೌಢಶಾಲಾ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಚಿನ್ನಸ್ವಾಮಿ ಮಾತನಾಡಿ, ಗುರು ಶಿಷ್ಯರ ಪರಂಪರೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದುದು. ಬಾಲ್ಯದಲ್ಲಿನ ಸ್ನೇಹ ಸ್ವಚ್ಛಂದವಾದದ್ದು. ಅಂತಹ ಸ್ನೇಹಿತರ ಸಮಾಗಮ ಹಾಗೂ ಕಲಿಸಿದ ಗುರುಗಳ ಭೇಟಿ ಎಂದಿಗೂ ವಿಶೇಷವಾಗಿಯೇ ಇರುತ್ತದೆ. ಬಿಲ್ಲನಕೋಟೆಯಂತಹ ಹಳ್ಳಿಯಲ್ಲಿ ಕಲಿತಿರುವ ವಿದ್ಯಾರ್ಥಿಗಳು ಒಂದೆಡೆ ಸೇರಿ ಬಾಲ್ಯವನ್ನು ಮತ್ತೊಮ್ಮೆ ಮೆಲುಕು ಹಾಕುತ್ತಿರುವುದು ನಿಮ್ಮ ಸುಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ. ಶಾಲೆಯ ಅಭಿವೃದ್ಧಿಗೆ ನಿಮ್ಮ ನೆರವು ಸದಾ ಇರಬೇಕು ಎಂದು ಹೇಳಿದರು.

ಹಳೆಯ ವಿದ್ಯಾರ್ಥಿ ಗುಂಡೇನಹಳ್ಳಿ ಕುಮಾರ್ ಮಾತನಾಡಿ, 20 ವರ್ಷಗಳ ಹಳೆಯ ವಿದ್ಯಾರ್ಥಿಗಳ ಸಮಾಗಮ ಹೊಸ ಆಯಾಮವನ್ನು ಸೃಷ್ಟಿಸಿದೆ, ಹಿಂದಿನ ಶಿಕ್ಷಣ ಪದ್ದತಿಯಲ್ಲಿ ಅನುಭವ, ಅನುಭವಿ ಶಿಕ್ಷಕರಿದ್ದರು. ಅವರಿಂದ ಕಲಿತ ಶಿಕ್ಷಣಕ್ಕೆ ಬೆಲೆ ಕಟ್ಟಲಾಗದು, ಅದೇ ರೀತಿ ಸ್ನೇಹ ಎಂದೆಂದಿಗೂ ಅಮರವಾದದ್ದು. ಆದ್ದರಿಂದ ಸ್ನೇಹಿತರ ಸಮಾಗಮ ಖುಷಿ ತಂದಿದೆ, ನೆಮ್ಮದಿ ಹಣದಿಂದ ಬರುವುದಿಲ್ಲಾ, ನಮ್ಮ ಜೀವನ ಕ್ರಮದಿಂದ ಬರುತ್ತದೆ ಎಂದರು.