ಸಾರಾಂಶ
ಗದಗ: ಸರ್ಕಾರಿ ಶಾಲೆಗಳಲ್ಲಿ ಪಾಲಕ-ಪೋಷಕರ ಸೂಕ್ತ ಸಲಹೆ-ಸೂಚನೆಗಳಿಗೆ ಮುಕ್ತ ಅವಕಾಶವಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಚಿಂತನೆಯೇ ನಮ್ಮೆಲ್ಲರ ಗುರಿಯಾಗಿರಲಿ. ಶಾಲೆಗಳು ಮಕ್ಕಳ ಪ್ರಗತಿಯ ಕೇಂದ್ರಗಳಾಗಿವೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಇಲ್ಲಿಯ ಸರ್ಕಾರಿ ಶಾಲೆ ನಂ. 15ರಲ್ಲಿ ಜರುಗಿದ ಪಾಲಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಾವು ಮಾಡಬೇಕಾದ ಕೆಲಸ-ಕಾರ್ಯಗಳ ಕುರಿತು ಚಿಂತನೆ ನಡೆಯಲಿ. ಪ್ರತಿದಿನ ಮಕ್ಕಳು ಶಾಲೆಗೆ ಬರಬೇಕು. ಯಾವ ಮಗುವೂ ಶಾಲೆಯಿಂದ ಹೊರಗುಳಿಯದಂತೆ ಕಾಳಜಿ ವಹಿಸಬೇಕು. ಸರ್ಕಾರದ ಸೌಲಭ್ಯಗಳು ವಿದ್ಯಾರ್ಥಿಗಳನ್ನು ತಲುಪುತ್ತಿದ್ದು, ಮಕ್ಕಳು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಶೋಭಾ ಬಸವ ಮಾತನಾಡಿ, ಮಕ್ಕಳ ಕಲಿಕೆಗೆ ನಾವೆಲ್ಲರೂ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದರು. ದೀಪಿಕಾ ಮರಬದ ಹಾಗೂ ಕಾಂಚನಾ ಮುಧೋಳ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯಿನಿ ವಿ.ಎಸ್. ಬಸಾಪುರ ಸ್ವಾಗತಿಸಿದರು. ಪಿ.ಎಸ್. ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ಯಶೋದಾ ಕಾರ್ಯಕ್ರಮ ನಿರೂಪಿಸಿದರು. ವಿ.ಬಿ. ಕರಬಸಗೌಡ್ರ ವಂದಿಸಿದರು.ಅತಿಥಿ ಶಿಕ್ಷಕಿ ಶೋಭಾ ವಗ್ಗಿ ಹಾಗೂ ಆಸ್ಮಾ ಬಾಗಲಕೋಟಿ, ಶಾರದಾ ಮೊರಬದ, ಕೋಮಲಾ ರಾಯಬಾಗಿ, ಲಲಿತಾ ಮಿಸ್ಕಿನ್, ಕಾವ್ಯಾ ಮಡಿವಾಳರ, ಸುರೇಶ ದಹಿಂಡೆ, ರಚನಾ ಪಾಟೀಲ, ಮಂಗಲಾ ಯಂಡಿಗೇರಿ, ಮಲ್ಲಮ್ಮ ಭಜಂತ್ರಿ, ಉದಯಕುಮಾರ ಚಿಮ್ಮಲಗಿ, ಮಲ್ಲೇಶ ಮುಧೋಳ, ರಾಮಪ್ಪ ಕೊರವರ, ಸರೋಜಾ ಪೂಜಾರ, ಅರವಿಂದ ಕಿರೇಸೂರ, ಮಂಜುನಾಥ, ಶುಭಂ ಕಾಟವಾ, ಹಸೀನಾ ಅಧೋನಿ ಮತ್ತು ಶಾಂತಾ ಮಾದರ ಮುಂತಾದವರು ಹಾಜರಿದ್ದರು.