ಸರ್ಕಾರದ ನಿರ್ಲಕ್ಷ್ಯದಿಂದ ಶಾಲೆಗಳು ಮುಚ್ಚುತ್ತಿವೆ: ಎಚ್‌. ವಿಶ್ವನಾಥ್‌ ಕಳವಳ

| Published : Aug 08 2025, 01:00 AM IST

ಸರ್ಕಾರದ ನಿರ್ಲಕ್ಷ್ಯದಿಂದ ಶಾಲೆಗಳು ಮುಚ್ಚುತ್ತಿವೆ: ಎಚ್‌. ವಿಶ್ವನಾಥ್‌ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಓದು ಎಂಬುದು ಕೆಲವರಿಗೆ ಕ್ಲಿಷ್ಟಕರವಾದ ಅಂಶ, ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ಯಾವುದನ್ನೇ ಆಗಲಿ ಸಂಪೂರ್ಣ ಇಚ್ಛೆಯಿಂದ ಕಲಿತು, ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಪೋಷಕರ ಸಂತೋಷ ಕಾಣಬಹುದು.

ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರಿ ಶಾಲೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದ್ದು, ಒಂದೊಂದಾಗಿ ಶಾಲೆಗಳು ಮುಚ್ಚುತ್ತಿವೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಕಳವಳ ವ್ಯಕ್ತಪಡಿಸಿದರು.ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಕನ್ನಡ ಗೆಳೆಯರ ಬಳಗ, ನೃಪತುಂಗ ಕನ್ನಡ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ರಾಜ್ಯದ ಸುಮಾರು 6,500 ಕನ್ನಡ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮಕ್ಕಳ ಯಶಸ್ಸನ್ನು ಕಂಡು ಹೆಚ್ಚು ಸಂತೋಷ ಪಡುವವರು ಹೆತ್ತವರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜೀವನವನ್ನೇ ಮುಡುಪಾಗಿಡುತ್ತಾರೆ. ತಂದೆ, ತಾಯಿಯ ಶ್ರಮಕ್ಕೆ ಪ್ರತಿಫಲವೆಂದರೆ ಮಕ್ಕಳು ಸಮಾಜದ ಉತ್ತಮ ಪ್ರಜೆಗಳಾಗಿ ತಮ್ಮ ಪರಿಸರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಹೇಳಿದರು.ಕನ್ನಡ ಮಾಧ್ಯಮದ ಮಕ್ಕಳು ಶೇ. 90ಕ್ಕಿಂತಲೂ ಹೆಚ್ಚು ಅಂಕಪಡೆದು ತೇರ್ಗಡೆ ಹೊಂದುತ್ತಿರುವುದು ಸಂತಸದ ವಿಷಯ. ನಾವೆಲ್ಲ ಕನ್ನಡದಲ್ಲಿಯೇ ಓದಿದವರು, ಕನ್ನಡಕ್ಕಾಗಿಯೇ ಇರುವವರು, ಕನ್ನಡಕ್ಕಾಗಿಯೇ ದುಡಿಯುವವರು, ಮುಂದಿನ ಪೀಳಿಗೆಯೂ ಕನ್ನಡಕ್ಕಾಗಿಯೇ ಕೆಲಸ ಮಾಡುವಂತವರಾಗಬೇಕು ಎಂದು ಅವರು ಸಲಹೆ ನೀಡಿದರು.ಚಿಂತಕ ಪ. ಮಲ್ಲೇಶ ಅವರು ಕನ್ನಡದ ಬಗೆಗಿನ ದೂರ ದೃಷ್ಟಿಯಿಂದ ನೃಪತುಂಗ ಕನ್ನಡ ಶಾಲೆ ಸ್ಥಾಪಿಸಿದ್ದಾರೆ. ಈ ಸಂಸ್ಥೆಯನ್ನು ಬೆಳೆಸಬೇಕಿರುವ ಜವಾಬ್ದಾರಿ ನಮ್ಮದಾಗಿದ್ದು, ಕನ್ನಡದ ಒಳಿತಿಗಾಗಿ ಸದಾ ಜೊತೆಯಲ್ಲಿರುತ್ತೇವೆ ಎಂದರು.ನಿವೃತ್ತ ಜಿಲ್ಲಾ ನ್ಯಾಯಾಧೀಶ ಸ.ರ. ಮಾಣಿಕ್ಯ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕರನ್ನು ಅನುಸರಿಸಿದ ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟುತ್ತಾರೆ ಎಂದರು.ಓದು ಎಂಬುದು ಕೆಲವರಿಗೆ ಕ್ಲಿಷ್ಟಕರವಾದ ಅಂಶ, ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳು ಯಾವುದನ್ನೇ ಆಗಲಿ ಸಂಪೂರ್ಣ ಇಚ್ಛೆಯಿಂದ ಕಲಿತು, ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಪೋಷಕರ ಸಂತೋಷ ಕಾಣಬಹುದು ಎಂದು ಅವರು ಹೇಳಿದರು.ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಜಿ.ಎನ್‌. ಪ್ರಜ್ವಲ್‌, ಎಂ. ಮಹೋಶ್‌, ಎನ್‌.ಎಂ. ವಿನುತಾ, ಪ್ರೇಮಾಂಜಲಿ ಸಿ.ಬಿ. ನಿತ್ಯಾ, ಕೀರ್ತನಾ, ರಮ್ಯಶ್ರೀ, ಸುಪ್ರಿತಾ, ಎಸ್‌. ನಿತಿನ್‌, ಎಸ್‌. ಸುನೀತಾ, ಡಿ.ಎಂ. ಸಿಂಚನಾ, ಕೆ. ಶಿವಾನಿ ಅವರನ್ನು ಸನ್ಮಾನಿಸಲಾಯಿತು.