ನಾಡಿದ್ದಿನಿಂದ ವಿಜ್ಞಾನ, ಕಲಾವಸ್ತು ಪ್ರದರ್ಶನ

| Published : Jan 07 2025, 12:15 AM IST

ಸಾರಾಂಶ

ಚಾಮರಾಜನಗರದಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯು ತನ್ನ ೩೮ ವಾರ್ಷಿಕೋತ್ಸವದ ಅಂಗವಾಗಿ ಜ.9, 10 ಮತ್ತು 11ರಂದು ನಗರದ ಸೇವಾಭಾರತಿ ಶಾಲೆ ಆವರಣ ಚೆನ್ನಿಪುರದ ಮೋಳೆ ರಸ್ತೆಯಲ್ಲಿ ಸಾಮರಸ್ಯ ವಿಜ್ಞಾನ ಮತ್ತು ಕಲಾವಸ್ತು ಪ್ರದರ್ಶನ ಮತ್ತು ಸಾಮರಸ್ಯ ಶಾರೀರಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾಭಾರತಿ ಶಿಕ್ಷಣ ಸಂಸ್ಥೆಯ ಎಲ್ಲ ಶಾಲಾ, ಕಾಲೇಜುಗಳ ವಿಜ್ಞಾನ, ಗಣಿತ, ಭಾಷಾ, ಕಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಸಾಮರಸ್ಯ ವಸ್ತು ಪ್ರದರ್ಶನವನ್ನು ಜ.9, ಮತ್ತು 10ನೇ ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 10 ಗಂಟೆವರೆಗೆ ಆಯೋಜಿಸಲಾಗಿದೆ ಎಂದರು.ಮೊದಲ ದಿನ ಕಾಯಕ್ರಮವನ್ನು ನಗರಸಭಾ ಪೌರಾಯುಕ್ತ ರಾಮದಾಸ್ ಉದ್ಘಾಟಿಸಿದರೆ 2ನೇ ದಿನದ ವಸ್ತುಪ್ರದರ್ಶನ ಕಾಯಕ್ರಮವನ್ನು ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಉದ್ಘಾಟಿಸಲಿದ್ದಾರೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಭಾಷಾ, ಕಲಾ ವಿಭಾಗದ ವಿವಿಧ ರೀತಿಯ ಚಾರ್ಟ್, ಮಾದರಿ, ಕಾರ್ಯ ನಿರ್ವಹಿಸುವ ಮಾದರಿಗಳು, ಪ್ರಾಚೀನ ವಸ್ತುಗಳ ಸಂಗ್ರಹ, ಔಷಧಿಯ ಸಸ್ಯಗಳು ಇತ್ಯಾದಿ ವಸ್ತು ಪ್ರದರ್ಶನವಿದ್ದು, ಕಾಲೇಜುಗಳ ಪೋಷಕರು ಮತ್ತು ವಿದ್ಯಾರ್ಥಿಗಳಿಂದಲೇ ವಿಶೇಷ ಸಾಂಪ್ರದಾಯಿಕ ತಿನಿಸುಗಳ ಆಹಾರ ಮೇಳ ಏರ್ಪಡಿಸಲಾಗಿದೆ. ಜ.11ರಂದು ಸಂಜೆ 5 ಗಂಟೆಗೆ ನಡೆಯುವ ಸಾಮರಸ್ಯ ಶಾರೀರಕ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಯದುವೀರ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಂಐಟಿ ಕಾಲೇಜಿನ ಮುರಳೀಧರ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸಾರ್ವಜನಿಕರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವಾಸುದೇವರಾವ್, ಸದಸ್ಯ ಬಾಲಸುಬ್ರಹ್ಮಣ್ಯಂ ಇದ್ದರು.