ಸಾರಾಂಶ
ವ್ಯಾಯಾಮ ಶರೀರ ಕ್ರಿಯಾವಿಜ್ಞಾನದ ಮೂಲತತ್ವಗಳು, ಜೀವವೈವಿಧ್ಯ, ತಳಿ ವಿಜ್ಞಾನ ತತ್ವಗಳು, ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ ನಾಲ್ಕು ಮತ್ತು ಐದು, ಕಡಲತೀರದ ಅಕಶೇರುಕಗಳು, ವನ್ಯಜೀವಿಗಳು ಮತ್ತು ಸಂರಕ್ಷಣೆ- ಈ ಕೃತಿಗಲನ್ನು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಬಿಡುಗಡೆ ಮಾಡುವರು.
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಇನೋವೇಟಿವ್ ವತಿಯಿಂದ ಹಿರಿಯ ವಿಜ್ಞಾನ ಲೇಖಕ ಡಾ.ಎಸ್.ಎನ್. ಹೆಗಡೆ ಅವರ ಆರು ಕೃತಿಗಳ ಬಿಡುಗಡೆ ಸಮಾರಂಭವು ಫೆ. 18 ರಂದು ಸಂಜೆ 4.30ಕ್ಕೆ ನಗರದ ಜೆಎಲ್ ಬಿ ರಸ್ತೆಯ ಎಂಜಿನಿರುಗಳ ಸಂಸ್ಥೆಯಲ್ಲಿ ನಡೆಯಲಿದೆ.ವ್ಯಾಯಾಮ ಶರೀರ ಕ್ರಿಯಾವಿಜ್ಞಾನದ ಮೂಲತತ್ವಗಳು, ಜೀವವೈವಿಧ್ಯ, ತಳಿ ವಿಜ್ಞಾನ ತತ್ವಗಳು, ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ ನಾಲ್ಕು ಮತ್ತು ಐದು, ಕಡಲತೀರದ ಅಕಶೇರುಕಗಳು, ವನ್ಯಜೀವಿಗಳು ಮತ್ತು ಸಂರಕ್ಷಣೆ- ಈ ಕೃತಿಗಲನ್ನು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಬಿಡುಗಡೆ ಮಾಡುವರು. ಕೃತಿಗಳನ್ನು ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡುವರು.
ಇನೋವೇಟಿವ್ ಸಂಸ್ತೆಯ ಅಧ್ಯಕ್ಷ ಜಿ.ಎಸ್. ಭಟ್ ಅಧ್ಯಕ್ಷತೆ ವಹಿಸುವರು. ಸಮಾಜ ಸೇವಕ ಕೆ. ರಘುರಾಂ ಮುಖ್ಯ ಅತಿಥಿಯಾಗಿರುವರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡುವರು. ಲೇಖಕರಾದ ಡಾ.ಎಸ್.ಎನ್. ಹೆಗಡೆ, ಸಹ ಲೇಖಕ ಡಾ.ಎಂ. ಚಂದ್ರಕುಮಾರ್, ಪ್ರಕಾಶಕ ಮಹಿಮಾ ಶ್ರೀನಿವಾಸ್, ವಿದ್ವಾನ್ ಹೇರಂಹ ಆರ್. ಭಟ್ ಉಪಸ್ಥಿತರಿರುವರು.