ಸಾರಾಂಶ
ಭಾರತದಲ್ಲಿ ಸ್ಟೆಮ್ ಶಿಕ್ಷಣ ಮತ್ತು ವೈಜ್ಞಾನಿಕ ಚಿಂತನೆಯ ಕುರಿತು ಮೂಡುಬಿದಿರೆ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಚಿಂತನ - ಮಂಥನ ಓದುಗರ ವೇದಿಕೆಯು ಅತಿಥಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆಭಾರತದಲ್ಲಿ ಸ್ಟೆಮ್ ಶಿಕ್ಷಣ ಮತ್ತು ವೈಜ್ಞಾನಿಕ ಚಿಂತನೆಯ ಕುರಿತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಚಿಂತನ - ಮಂಥನ ಓದುಗರ ವೇದಿಕೆಯು ಅತಿಥಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕುಲಪತಿ ಹಾಗೂ ಪ್ರಖ್ಯಾತ ಭೌತಶಾಸ್ತ್ರಜ್ಞರಾದ ಡಾ. ಶರತ್ ಅನಂತಮೂರ್ತಿ ಭಾರತದಲ್ಲಿ ಸ್ಟೆಮ್ (ಸೈನ್ಸ್, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಶಿಕ್ಷಣದ ಸ್ಥಿತಿಗತಿಗಳು ಮತ್ತು ವಿಜ್ಞಾನ ಚಿಂತನೆಯ ಇತಿಹಾಸದ ಕುರಿತು ಮಾತನಾಡಿದರು.ಭಾರತೀಯ ಜಿಡಿಪಿಯ ಶೇ.0.3 ರಷ್ಟು ಮಾತ್ರ ಸಂಶೋಧನೆಗೆ ಖರ್ಚು ಮಾಡಲಾಗುತ್ತಿದೆ ಎಂಬುದರ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಹೆಚ್ಚು ಹೂಡಿಕೆ ಮಾಡಿದರೆ ಉತ್ತಮ ಸಂಶೋಧನೆ ಸಾಧ್ಯವಾಗುತ್ತದೆ. ವಿಶ್ವವಿದ್ಯಾಲಯಗಳು ಪಾರದರ್ಶಕವಾದ ಅಂತಾರಾಷ್ಟ್ರೀಯ ಸಂವಾದ ಹೊಂದಿರಬೇಕು ಹಾಗೂ ಸೃಜನಶೀಲತೆ, ಜ್ಞಾನ ವಿಕಾಸ ಮತ್ತು ಸಾಮಾಜಿಕ ಬದಲಾವನೆಗಳ ಕೇಂದ್ರಗಳಾಗಿರಬೇಕು ಎಂದರು.
ಭಾರತೀಯರು ಯುರೋಪಿಯನ್ ಚಿಂತನೆಗಷ್ಟೇ ಆಧಾರವಾಗಿರುವ ಶಿಕ್ಷಣವನ್ನು ಅನುಸರಿಸುತ್ತಿದ್ದೇವೆ. ಭಾರತೀಯ ಜ್ಞಾನ ಪದ್ಧತಿಗೆ ಪರಿಷ್ಕಾರ ಅಗತ್ಯವಿದೆ; ಅದು ಇತಿಹಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸಬೇಕು ಮತ್ತು ಸತ್ಯತೆಯನ್ನು ಒಪ್ಪಿಕೊಳ್ಳುವಂತಿರಬೇಕು. ಕೌಶಲ್ಯ, ಆಲೋಚನೆ, ನೈತಿಕತೆ ಮತ್ತು ಹೊಸತನವನ್ನು ಒಟ್ಟುಗೂಡಿಸುವ ಸಮಗ್ರ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದರು.ಸಂಸ್ಥೆಯ ವ್ಯವಸ್ಥಾಪಕ ಟ್ರಷ್ಠಿ ವಿವೇಕ್ ಆಳ್ವ, ಚಿಂತನ - ಮಂಥನ ಕ್ಲಬ್ ಸಂಯೋಜಕ ಡಾ. ಶಶಿಕುಮಾರ್ ಉಪಸ್ಥಿತರಿದ್ದರು.