ಸಾರಾಂಶ
- ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಡಿಸಿ ಪಿ.ಎನ್.ಲೋಕೇಶ್ ಅಭಿಮತ
- - - ಕನ್ನಡಪ್ರಭ ವಾರ್ತೆ, ದಾವಣಗೆರೆವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಲಿರುವ ಭಾರತವು ದೊಡ್ಡ ಮೊತ್ತದ ಯುವಶಕ್ತಿಯನ್ನೂ ಹೊಂದಿದೆ. ಭವಿಷ್ಯದ ಯುವಶಕ್ತಿ ಆಗಲಿರುವ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಉತ್ತಮ ನಾಗರೀಕರಾಗಲು ಸಾಧ್ಯವಿದೆ ಎಂದು ದಾವಣಗೆರೆ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ, ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ. ಮಂಜುನಾಥ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಾವಣಗೆರೆ ಜಿಲ್ಲಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಶಾಲಾ ಪರೀಕ್ಷೆ ಎದುರಿಸಲು ಪಠ್ಯ ಶಿಕ್ಷಣವು ಅನುಕೂಲವಾದರೆ, ಜೀವನದ ಪರೀಕ್ಷೆಗಳ ಎದುರಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿವೆ. ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳು ಇದಕ್ಕೆ ಪೂರಕವಾಗಿವೆ. 1907ರಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಅಧಿಕಾರಿ ಆಗಿದ್ದ ರಾಬರ್ಟ್ ಸ್ಟೀವನ್ ಸನ್ ಬೇಡೆನ್ ಪೊವೆಲ್ ಸ್ಕೌಟ್ಸ್ ಸಂಘಟನೆ ಹುಟ್ಟುಹಾಕಿದರು. ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಈ ಸಂಘಟನೆ ಈಗ ಪ್ರಪಂಚದ 216 ದೇಶಗಳಲ್ಲಿ 6 ಕೋಟಿಯಷ್ಟು ಸ್ಕೌಟ್ಸ್ ಮತ್ತು ಗೈಡ್ಸ್‌ಗಳನ್ನು ಹೊಂದಿದೆ ಎಂದರು.
ಭಾರತ ದೇಶದಲ್ಲೂ 1909ನೇ ಇಸವಿಯಲ್ಲಿ ಮೊಟ್ಟಮೊದಲ ಸ್ಕೌಟ್ ಘಟಕ ಕರ್ನಾಟಕದ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಟಿ.ಎಚ್. ಬೇಕರ್ ಅವರಿಂದ ಆರಂಭವಾಯಿತು. ಪ್ರಸ್ತುತ ದೇಶದಲ್ಲಿ 40 ಲಕ್ಷ ಸ್ಕೌಟ್‌ಗಳು, 16 ಲಕ್ಷ ಗೈಡ್‌ಗಳು ಇದ್ದಾರೆ ಎಂದರು.ಪ್ರಶಸ್ತಿ, ಪುರಸ್ಕಾರ ಪ್ರದಾನ ಮಾಡಿದ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿ, ಶಾಲಾ ಜೀವನದಲ್ಲಿನ ಪಠ್ಯೇತರ ಚಟುವಟಿಕೆಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ ಆಗುತ್ತವೆ. ಮಕ್ಕಳು ಒಳ್ಳೆಯ ಕನಸುಗಳನ್ನು ಕಾಣಬೇಕು. ಅದರ ನನಸಿಗಾಗಿ ಕ್ರಿಯಾಶೀಲರಾಗಬೇಕು ಎಂದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಆರ್.ಡಿ. ಬದರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ, ಸಾಶಿಇ ಉಪನಿರ್ದೇಶಕ ಜಿ.ಕೊಟ್ರೇಶ್, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ, ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ. ಷಡಾಕ್ಷರಪ್ಪ, ಜಿಲ್ಲಾ ಗೈಡ್ ಆಯುಕ್ತೆ ಶಾರದಾ ಮಾಗನಹಳ್ಳಿ, ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಡಿ.ಹಾಲಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ರತ್ನ, ಜಿಲ್ಲಾ ತರಬೇತಿ ಆಯುಕ್ತೆ ಆರ್.ತುಳಸಾಮಣಿ, ಸಹ ಕಾರ್ಯದರ್ಶಿ ಆರ್.ಸುಖವಾಣಿ, ಸ್ಕೌಟ್ ಗೈಡ್ ಸ್ವಯಂಸೇವಕಿ ಜೆ.ಅಶ್ವಿನಿ, ಮಹಮ್ಮದ್ ಹುಸೈನ್, ಹೆಚ್ಚುವರಿ ಜಿಲ್ಲಾ ಅಯುಕ್ತರಾದ ಎಂ.ಅಶೋಕಕುಮಾರ, ಎಸ್.ಶಂಕರ ನಾಯಕ್, ನೂರುಲ್ಲಾ, ಎನ್ .ಕೆ. ಕೊಟ್ರೇಶ್, ಡಾ. ಎಂ.ಜಿ. ಶಶಿಧರ, ಎಚ್.ಎಸ್. ಸಿದ್ಧೇಶ್, ಯುವ ಸಮಿತಿಯ ಮುಸ್ತಫಾರಾಜ, ರೇಂಜರ್ ಆರ್.ಎಚ್.ರಾಧಿಕಾ ಇತರರು ಭಾಗವಹಿಸಿದ್ದರು.- - -
ಕೋಟ್ದಾವಣಗೆರೆಯಲ್ಲಿ 1928ನೇ ಇಸವಿಯಲ್ಲಿ ಆರಂಭವಾದ ಸ್ಥಳೀಯ ಸ್ಕೌಟ್ ಸಂಸ್ಥೆ ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ, ಕೊಂಡಜ್ಜಿ ಬಸಪ್ಪ, ಚಿಗಟೇರಿ ಜಯಣ್ಣ, ಶಿವಶಂಕರ, ಶಿಕ್ಷಕರಾಗಿದ್ದ ಅ.ರಾ. ಶಂಕರಯ್ಯ ಮುಂತಾದ ಅನೇಕ ಮಹನೀಯರ ಪ್ರೋತ್ಸಾಹದಿಂದಾಗಿ ಬೆಳೆದು ಬಂದಿದೆ
- ಡಾ. ಎಚ್.ಬಿ. ಮಂಜುನಾಥ, ಉಪಾಧ್ಯಕ್ಷ, ಜಿಲ್ಲಾ ಸ್ಕೌಟ್ಸ್-ಗೈಡ್ಸ್- - - -24ಕೆಡಿವಿಜಿ36ಃ:
ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು.