ಸಾರಾಂಶ
ನವೆಂಬರ್ ೭ರಂದು ಭಾರತ್ ಸ್ಕೌಟ್ ಮತ್ತು ಗೈಡ್ ಎಂದು ವಿಲೀನಗೊಂಡ ಈ ದಿನವನ್ನು ಧ್ವಜ ದಿನವೆಂದು ಆಚರಿಸುವುದಾಗಿದೆ. ಯುವ ಜನರು ತಮ್ಮ ದೈಹಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು ಸ್ಕೌಟ್ ಗೈಡ್ ಸಂಸ್ಥೆಯ ಉದ್ದೇಶವಾಗಿದೆ. ಹಾಸನಾಂಬ ಜಾತ್ರ ಮಹೋತ್ಸವ ಸಮಯದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಸಲ್ಲಿಸಿದ ಸೇವೆ ಶ್ಲಾಘನೀಯ.
ಕನ್ನಡಪ್ರಭ ವಾರ್ತೆ ಹಾಸನ
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ೧೯೫೦ರಲ್ಲಿ ಬಾಯ್ಸ್ ಸ್ಕೌಟ್ಸ್ ಅಸೋಸಿಯೇಷನ್ ಮತ್ತು ಹಿಂದೂಸ್ತಾನ್ ಸ್ಕೌಟ್ ಅಯೋಸಿಯೇಷನ್ ವಿವಿಧ ಹೆಸರಿನಲ್ಲಿ ಸಂಸ್ಥೆಯ ಸ್ಕೌಟ್ ಗೈಡ್ ಚಟುವಟಿಕೆ ನಡೆಯುತ್ತಿದ್ದು, ನವೆಂಬರ್ ೭ರಂದು ಭಾರತ್ ಸ್ಕೌಟ್ ಮತ್ತು ಗೈಡ್ ಎಂದು ವಿಲೀನಗೊಂಡ ಈ ದಿನವನ್ನು ಧ್ವಜ ದಿನವೆಂದು ಆಚರಿಸುವುದಾಗಿದೆ. ಯುವ ಜನರು ತಮ್ಮ ದೈಹಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು ಸ್ಕೌಟ್ ಗೈಡ್ ಸಂಸ್ಥೆಯ ಉದ್ದೇಶವಾಗಿದೆ. ಧ್ವಜ ಚೀಟಿಯ ಈ ದಿನವನ್ನು ಜಿಲ್ಲಾಧಿಕಾರಿಗಳು ಸತ್ಯಭಾಮ, ಕಾರ್ಯನಿರ್ವಾಹಕ ಅಧಿಕಾರಿಗಳು ಪೂರ್ಣಿಮಾ ಬಿ ಆರ್, ಜಿಲ್ಲಾ ಸಹಾಯಕ ಆಯುಕ್ತರು ಶಕುಂತಲ, ಉಪವಿಭಾಗಧಿಕಾರಿಗಳಾದ ಮಾರುತಿ ಹಾಗೂ ಪೋಲಿಸ್ ಅಧಿಕಾರಿ ಮೋಹನ್ ಕೃಷ್ಣ, ಯುನಜನ ಕ್ರೀಡಾ ಇಲಾಖೆಯ ಅಧಿಕಾರಿಗಳಾದ ಹರೀಶ್ ಅವರು ಸಂಸ್ಥೆಯ ೭೫ನೇ ವರ್ಷದ ಧ್ವಜಾ ಚೀಟಿಗಳನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಸನಾಂಬ ಜಾತ್ರ ಮಹೋತ್ಸವ ಸಮಯದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಸಲ್ಲಿಸಿದ ಸೇವೆ ಶ್ಲಾಘನೀಯ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಜಿಲ್ಲಾ ಮುಖ್ಯ ಆಯುಕ್ತರಾದ ವೈ ಎಸ್ ವೀರಭದ್ರಪ್ಪ, ಜಿಲ್ಲಾ ಆಯುಕ್ತರು ಸ್ಕೌಟ್ ಸ್ಟೀಫನ್ ಪ್ರಕಾಶ್, ಜಿಲ್ಲಾ ಆಯುಕ್ತರು ಗೈಡ್ ಜಯರಮೇಶ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ಜಿಲ್ಲಾ ಖಜಾಂಚಿ ಆರ್ ಎಸ್ ರಮೇಶ್ ಕಾಂಚನಮಾಲ, ಹಿರಿಯ ಗೈಡ್ ಶಿಕ್ಷಕಿ, ವೈ ಡಿ ಪದ್ಮ, ಎ.ಎಸ್.ಒ.ಸಿ ಪ್ರಿಯಾಂಕ ಸ್ಕೌಟ್ ಮಾಸ್ಟರ್ ಸದಶಿವ ಹಾಗೂ ಬಸವರಾಜೇಂದ್ರ ಶಾಲೆಯ ಸ್ಕೌಟ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.