ಸಾರಾಂಶ
ಕೊಪ್ಪಳ ಜಿಪಂ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಭಾಗಿತ್ವದಲ್ಲಿ ಗುನ್ನಳ್ಳಿಯ ಜಿಲ್ಲಾ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.
ಕೊಪ್ಪಳ: ಜಿಪಂ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹಭಾಗಿತ್ವದಲ್ಲಿ ಗುನ್ನಳ್ಳಿಯ ಜಿಲ್ಲಾ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.ಜಿಲ್ಲಾ ಮಟ್ಟದ ಸ್ಕೌಟ್ಸ್, ಗೈಡ್ಸ್ ಕ್ಯಾಪ್ಟನ್‌ಗಳಿಗೆ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಜ.11ವರೆಗೂ ನಡೆಯಲಿದೆ. ಶಿಬಿರದ ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಮುಖ್ಯ ಆಯುಕ್ತ ಎಚ್.ಎಂ. ಸಿದ್ದರಾಮ ಸ್ವಾಮಿ ನೆರವೇರಿಸಿದರು.
ಶಿಬಿರದಲ್ಲಿ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ್, ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ್ ಚೌಕಿಮಠ, ಜಿಲ್ಲಾ ಸ್ಥಾನಿಕ ಆಯುಕ್ತ ಸೈಯದ್ ಮಹಮ್ಮದ್ ಗುತ್ತಿ, ಹಿರಿಯ ತರಬೇತಿದಾರ ಈರಣ್ಣ, ತಾಲೂಕು ಕಾರ್ಯದರ್ಶಿ ಶರಣಪ್ಪ ಹಾದಿಮನಿ, ಅಲಿಹುಸೇನ್, ಜಿಲ್ಲಾ ಖಜಾಂಚಿ ಪ್ರಹ್ಲಾದ್ ಬಡಿಗೇರ ಹಾಗೂ ಜಿಲ್ಲಾ ಪದಾಧಿಕಾರಿಗಳು, ತಾಲೂಕಿನ ಎಲ್ಲಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.ಶಿಬಿರದಲ್ಲಿ ಸ್ಕೌಟ್ ವಿಭಾಗದಲ್ಲಿ 57 ಶಿಕ್ಷಕರು, ಗೈಡ್ಸ್ ವಿಭಾಗದಲ್ಲಿ 72 ಶಿಕ್ಷಕಿಯರು ಸೇರಿದಂತೆ ಒಟ್ಟು 129 ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.ಸ್ಕೌಟ್ಸ್ ವಿಭಾಗದಲ್ಲಿ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀಕಾಂತ ಮಾಸಗಟ್ಟಿ, ಗೈಡ್ಸ್ ವಿಭಾಗದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಅರುಣಾ ವಸ್ತ್ರದ, ಎ.ಸರೋಜಾ, ಜಿಲ್ಲಾ ಸಹ ಕಾರ್ಯದರ್ಶಿ ಪ್ರಭಾಕರ್ ದಾಸರ, ರಾಜ್ಯ ಪ್ರತಿನಿಧಿ ವೀರನಗೌಡ ಪೊಲೀಸ್ ಪಾಟೀಲ್, ಹುಸೇನ್‌ಸಾಬ ಮಕಾಂದಾರ್, ಮಾರುತಿ ದಮ್ಮೂರ, ವೀರಪ್ಪ ಗಾಣಿಗೇರ, ಮಲ್ಲಪ್ಪ ಗುಡದನ್ನವರ, ಬಸವರಾಜ ಚಿತ್ತಾಪುರ, ದಾಕ್ಷಾಯಿಣಿ ಬಂಡಿ, ರೇಣುಕಾ ಬಡಿಗೇರ, ಮಂಜುಳಾ, ಶರೀಫ್ ಹತ್ತಿಮತ್ತೂರ, ಸೇರಿದಂತೆ ಇತರರು ಶಿಬಿರದ ನಾಯಕತ್ವ, ಇತರೆ ಜವಾಬ್ದಾರಿ ನಿರ್ವಹಿಸಿದರು.