ಸಾರಾಂಶ
ಜಿಲ್ಲಾ ಭಾರತ್ ಸ್ಕೌಟ್ ಮತ್ತು ಗೈಡ್ ಸಭಾಂಗಣದಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಿಸ್ತು, ಸಮಯಪ್ರಜ್ಞೆ, ಹೊರಾಂಗಣ ಚಟುವಟಿಕೆ, ನೈತಿಕ ಕಟ್ಟುಪಾಡು, ಸಾಮಾಜಿಕ ಕಳಕಳಿ ಹೀಗೆ ಹಲವು ಆದರ್ಶಗಳ ಮೂಲಕ ಜವಾಬ್ದಾರಿಯುತ ಯುವಕ ಯುವತಿಯರನ್ನು ರೂಪಿಸಲು ಶ್ರಮಿಸುತ್ತಿರುವ ಸ್ಕೌಟ್, ಗೈಡ್ ಚಳುವಳಿ ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗುವುದು ಸೂಕ್ತ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ (ಅಭಿವೃದ್ಧಿ) ಕೆ.ಎಂ. ಸುನಿತಾ ಅವರು ಹೇಳಿದರು.ಜಿಲ್ಲಾ ಮೈದಾನದಲ್ಲಿರುವ ಜಿಲ್ಲಾ ಭಾರತ್ ಸ್ಕೌಟ್ ಮತ್ತು ಗೈಡ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಪರೀಕ್ಷೆ, ಅಂಕಗಳಿಸುವುದು ಮಾತ್ರ ವಿದ್ಯಾರ್ಥಿಗಳ ಗುರಿಯಾಗಬಾರದು. ಸುತ್ತಲೂ ಏನು ವಿದ್ಯುಮಾನಗಳು ನಡೆಯುತ್ತಿವೆ ಎಂದು ಗಮನಿಸಿ ಸಮಾಜದ ಸಕ್ರಿಯ ಭಾಗವಾಗಬೇಕು ಎಂದ ಅವರು, ಮೊಬೈಲ್ ಮತ್ತಿತರ ಮಾಧ್ಯಮಗಳಿಂದ ದೂರವಿದ್ದು ಜ್ಞಾನಾರ್ಜನೆ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎ.ಎನ್ ಮಹೇಶ್ ಮಾತನಾಡಿ, ಇತ್ತೀಚಿನ ಮಕ್ಕಳು ಅತ್ಯಂತ ಸೂಕ್ಷ್ಮ ಮನಸ್ಥಿತಿಯವರಾಗಿದ್ದು, ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಕ್ಕಳಿಗೆ ಸೋಲನ್ನು ಸ್ವೀಕರಿಸುವುದನ್ನೂ ಕಲಿಸುವ ಅವಶ್ಯಕತೆಯಿದೆ. ಚೇತೋಹಾರಿ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಭಾಗವ ಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಿ ಸಮಾಜಕ್ಕೆ ಉಪಯೋಗಕಾರಿ ಪ್ರಜೆಗಳಾಗುತ್ತಾರೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್ ಷಡಕ್ಷರಿ ಮಾತನಾಡಿ, ಬದುಕಲು ಬೇಕಾದ ಕಲೆ ಗಳನ್ನು ಕಲಿಸುವ ಜೊತೆಗೆ ಸ್ವಲ್ಪ ಗಟ್ಟಿತನವನ್ನೂ ಕೂಡಾ ಕಲಿಸಲು, ಪೋಷಕರು ಕೂಡಾ ನಮ್ಮ ಕೈ ಜೋಡಿಸಬೇಕು ಎಂದು ಹೇಳಿದರು.ವರ್ಜಿನ್ ಏರ್ ಲೈನ್ಸ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸ್‌ನ್‌ರ ತಾಯಿ ಹೇಗೆ ಭಾನುವಾರದ ದಿನ ಬಾಲ್ಯದಲ್ಲಿ 10 ಡಾಲರ್ ನೀಡಿ ಕತ್ತಲಾಗುವ ತನಕ ಮನೆಗೆ ಬರಬೇಡ ಎಂದು ಹೇಳಿ ಅವನಲ್ಲಿ ಕಷ್ಟ ಸಹಿಷ್ಣುತೆ, ತನ್ನನ್ನು ತಾನು ಹೇಗೆ ನೋಡಿ ಕೊಳ್ಳು ವುದನ್ನು ಕಲಿಸುವುದು ದೊಡ್ಡ ಜೀವನದ ಪಾಠ ಎಂಬುವುದನ್ನೂ ಉಲ್ಲೇಖಿಸುತ್ತಾ, ಮಕ್ಕಳನ್ನು ಅನುಭವಿಸಿ ಕಲಿಯಲು ಅವಕಾಶ ಕೊಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಮಕ್ಕಳನ್ನು ಕೇವಲ ಜವಬ್ದಾರಿಯುತ ಪ್ರಜೆಗಳಾಗಿ ಮಾಡಿದರೆ ಸಾಲದು, ಅವರನ್ನು ಕ್ರಿಯಾಶೀಲ ಪ್ರಜೆಗಳಾಗಿ ರೂಪಿಸು ವುದು ಸ್ಕೌಟ್ ಚಳುವಳಿ ಉದ್ದೇಶ ಎಂದರು.ಚರಣ್ ಹಾಗೂ ಹೀರಕ್ ಪಂಕ್ ಪುರಸ್ಕಾರ ಪತ್ರಗಳನ್ನು ಕೆ.ಎಂ ಸುನೀತಾ ವಿತರಿಸಿದರು. ಮಕ್ಕಳನ್ನು ಈ ಪ್ರಶಸ್ತಿಗಳಿಗೆ ಸಿದ್ದಗೊಳಿಸಿದ ದಳ ನಾಯಕರಿಗೆ ಮೆಂಟರ್ ಅಭಿನಂದನಾ ಪತ್ರ ನೀಡಲಾಯಿತು.ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಗಮಿಸಿದ್ದ ಸುಮಾರು 250 ಮಕ್ಕಳು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ನೀಲಕಂಠಾಚಾರ್, ಜಿಲ್ಲಾ ತರಬೇತಿ ಆಯುಕ್ತೆ ಸಂಧ್ಯಾರಾಣಿ, ಜಿಲ್ಲಾ ಸ್ಕೌಟ್ ಆಯುಕ್ತ ಟಿ.ಕೆ. ಫಣಿರಾಜ್, ಗೈಡ್ ಆಯುಕ್ತೆ ಮಮತಾ, ಜಿಲ್ಲಾ ಸಂಘಟಕ ಕಿರಣ್‌ಕುಮಾರ್, ರಾಧಾ, ಸಿಕ್ವೇರಾ, ದಳ ನಾಯಕರು ಉಪಸ್ಥಿತರಿದ್ದರು.12 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಪುರಸ್ಕಾರ ಪ್ರಸಸ್ತಿ ಪತ್ರ ವಿತರಣಾ ಸಮಾರಂಭವನ್ನು ಕೆ.ಎಂ. ಸುನಿತಾ ಉದ್ಘಾಟಿಸಿದರು. ಎ.ಎನ್. ಮಹೇಶ್, ಎಂ.ಎನ್. ಷಡಕ್ಷರಿ, ಮಮತಾ, ಸಂಧ್ಯಾರಾಣಿ ಇದ್ದರು.