ಸಂಬಲ್ ಗೋಲಿಬಾರ್ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

| Published : Nov 30 2024, 12:51 AM IST

ಸಾರಾಂಶ

ಉತ್ತರ ಪ್ರದೇಶದ ಸಂಬಲ್‌ನಲ್ಲಿ ನಡೆದ ಗೋಲಿಬಾರ್‌ನಲ್ಲಿ ಐದು ಜನರ ಹತ್ಯೆ ನಡೆಸಿದ ಘಟನೆಯನ್ನು ವಿರೋಧಿಸಿ ಹಾಗೂ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐನಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಗೋಲಿಬಾರ್‌ಲ್ಲಿ ಪ್ರಾಣ ತೆತ್ತವರ ಕುಟುಂಬಗಳಿಗೆ ಪರಿಹಾರವನ್ನು ಕೊಡಬೇಕು. ಮಸೀದಿ ಸರ್ವೆ ಕಾರ್ಯವನ್ನು ಕೂಡಲೇ ನಿಲ್ಲಿಸಲು ಆದೇಶ ನೀಡಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಉತ್ತರ ಪ್ರದೇಶದ ಸಂಬಲ್‌ನಲ್ಲಿ ನಡೆದ ಗೋಲಿಬಾರ್‌ನಲ್ಲಿ ಐದು ಜನರ ಹತ್ಯೆ ನಡೆಸಿದ ಘಟನೆಯನ್ನು ವಿರೋಧಿಸಿ ಹಾಗೂ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐನಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆ ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಆನೆಮಹಲ್ ಮಾತನಾಡಿ, ಈ ದೇಶದಲ್ಲಿ ಶೇಕಡ ೪೫ರಷ್ಟು ಜನರು ಮುಸ್ಲಿಂ ವರ್ಗಾವನ್ನು ಇರಬಾರದು ಎಂದು ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಸಂಘ ಪರಿವಾರ ಈ ಆಡಳಿತ ವ್ಯವಸ್ಥೆಗೆ, ಇಲ್ಲಿನ ಪೊಲೀಸ್ ವ್ಯವಸ್ಥೆಗೆ ಪೂರಕ ಕೆಲಸ ಮಾಡುತ್ತಿದೆ. ಸಂಘಪರಿವಾರದ ಹೇಳಿಕೆಗೆ ತಲೆತೂಗುತ್ತಾ ಇದ್ದು, ಈ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಜೀವವನ್ನು ಪಣಕ್ಕೆ ಇಟ್ಟಾದರೂ ಸರಿ ನ್ಯಾಯವನ್ನು ಇಲ್ಲಿ ಪಡೆದುಕೊಳ್ಳುತ್ತೇವೆ ಎಂದರು. ಉತ್ತರ ಪ್ರದೇಶದ ಸಂಬಲ್‌ನಲ್ಲಿ ನಡೆದ ಗೋಲಿಬಾರ್ ನಿಂದಾಗಿ ಐದು ಜನರು ಹತ್ಯೆ ನಡೆಸಿದ ಘಟನೆಯನ್ನು ವಿರೋಧಿಸಿ ಹಾಗೂ ಮಸೀದಿಯ ಸರ್ವೆ ನಡೆಸಲು ಅನುಮತಿ ನೀಡಿರುವುದು, ಪ್ರಾರ್ಥನಾ ಸ್ಥಳ ಸಂರಕ್ಷಣಾ ಕಾಯ್ದೆ ೧೯೯೧ ಇದರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಜಂಗಲ್ ರಾಜ್ಯವಾಗಿದೆ. ಹಾಗಾಗಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಹಾಗೂ

ಇದೇ ವೇಳೆ ಎಸ್‌ಡಿಪಿಐ ಇಮ್ರಾನ್ ಅರೇಹಳ್ಳಿ, ನಾಯಕರುಗಳಾದ ವಾಜೀದ್, ಮುಜೀಬ್, ಫೈರೋಜ್, ಅಮನುಲ್ಲಾ, ತನವೀರ್, ಇರ್ಫಾನ್, ತಾಹೇರ್, ಗುಲಾಬ್, ಸತ್ತಾರ್‌ ಹಾಗೂ ಧರ್ಮಗುರುಗಳಾದ ಶರ್ಫುದ್ದಿನ್ ಮೌಲನ, ರಹಮತ್ ಉಲ್ಲಾ,ಭೀಮ್ ಆರ್ಮಿ ಪ್ರದೀಪ್ ಮುಂತಾದವರು ಪ್ರತಿಭಟನೆಯಲ್ಲಿ ಭಗವಹಿಸಿದ್ದರು.