ನದಿಗೆ ಹಾರಿದ ಸರ್ಕಾರಿ ನೌಕರನಿಗೆ ಮುಂದುವರಿದ ಶೋಧ

| Published : Jul 26 2024, 01:32 AM IST

ನದಿಗೆ ಹಾರಿದ ಸರ್ಕಾರಿ ನೌಕರನಿಗೆ ಮುಂದುವರಿದ ಶೋಧ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದಲ್ಲಿ ಬುಧವಾರ ಕಾವೇರಿ ನದಿಗೆ ಹಾರಿದ ವ್ಯಕ್ತಿಯ ದೇಹ ಪತ್ತೆಗೆ ಶೋಧಕಾರ್ಯ ಭರದಿಂದ ಸಾಗಿದೆ. ಗುರುವಾರ ಸಂಜೆ ತನಕ ಯಾವುದೇ ಕುರುಹು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ನದಿಗೆ ಹಾರಿ ನಾಪತ್ತೆಯಾದ ಸರ್ಕಾರಿ ನೌಕರ ಅರುಣ್ (50) ಪತ್ತೆಗೆ ಶೋಧ ಕಾರ್ಯ ನಡೆಸುವ ಸಂಬಂಧ ಐದು ತಂಡಗಳು ಕುಶಾಲನಗರದಿಂದ ಕೂಡಿಗೆ ಕಣಿವೆ ಭಾಗಗಳಲ್ಲಿ ಶೋಧ ನಡೆಸುತ್ತಿವೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ ಬುಧವಾರ ಕಾವೇರಿ ನದಿಗೆ ಹಾರಿದ ವ್ಯಕ್ತಿಯ ದೇಹ ಪತ್ತೆಗೆ ಶೋಧಕಾರ್ಯ ಭರದಿಂದ ಸಾಗಿದೆ. ಗುರುವಾರ ಸಂಜೆ ತನಕ ಯಾವುದೇ ಕುರುಹು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ನದಿಗೆ ಹಾರಿ ನಾಪತ್ತೆಯಾದ ಸರ್ಕಾರಿ ನೌಕರ ಅರುಣ್ (50) ಪತ್ತೆಗೆ ಶೋಧ ಕಾರ್ಯ ನಡೆಸುವ ಸಂಬಂಧ ಎರಡು ಎನ್‌ಡಿಆರ್‌ಎಫ್‌ ತಂಡಗಳು , ಕುಶಾಲನಗರ ಪೊಲೀಸರ ಎರಡು ತಂಡಗಳು ಅಗ್ನಿಶಾಮಕ ತಂಡ ಸೇರಿದಂತೆ ಒಟ್ಟು ಐದು ತಂಡಗಳು ಕುಶಾಲನಗರದಿಂದ ಕೂಡಿಗೆ ಕಣಿವೆ ಭಾಗಗಳಲ್ಲಿ ಶೋಧ ನಡೆಸುತ್ತಿವೆ.

ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳ ಆಗಿರುವ ಕಾರಣ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ.

ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರಾಗೃಹಕ್ಕೆ ಹಾಟ್‌ ಬಾಕ್ಸ್‌ ಸರಬರಾಜಿಗೆ ದರಪಟ್ಟಿ ಆಹ್ವಾನ:

ಸಾರ್ವಜನಿಕ ನೋಂದಾಯಿತ ವರ್ತಕರು ಜಿಲ್ಲಾ ಕಾರಾಗೃಹ ಮಡಿಕೇರಿಯಲ್ಲಿ ದಾಖಲಿರುವ ಬಂದಿಗಳಿಗೆ ಆಹಾರವನ್ನು ಹಾಟ್ ಬಾಕ್ಸ್‌ನಲ್ಲಿ ವಿತರಿಸಲು 15 ಲೀ-8, 10 ಲೀ-10 ಮತ್ತು 5 ಲೀಟರ್-15 ಹಾಟ್ ಬಾಕ್ಸ್‌ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಲಾಗಿದೆ. ಇಚ್ಛೆಯುಳ್ಳ ವರ್ತಕರು ಷರತ್ತುಗೊಳಪಟ್ಟು ಹಾಟ್ ಬಾಕ್ಸ್‌ಗಳನ್ನು ಸರಬರಾಜು ಮಾಡಲು ತಮ್ಮ ಜಿಎಸ್‌ಟಿ ಸಹಿತ ದರಪಟ್ಟಿ ನೀಡಬಹುದು. ದರಪಟ್ಟಿ ಸಲ್ಲಿಸಲು ಇರುವ ಕ್ರಮಗಳು ಹಾಗೂ ಷರತ್ತುಗಳು ಇಂತಿವೆ: ದರಪಟ್ಟಿ ಸ್ವೀಕರಿಸಲು ಆ.3 ರ 12 ಗಂಟೆ ಗಡುವಾಗಿದೆ. ದರಪಟ್ಟಿಯನ್ನು ಆ.3 ರಂದು ಸಂಜೆ 3 ಗಂಟೆಗೆ ತೆರೆಯಲಾಗುವುದು. ದರಪಟ್ಟಿಯನ್ನು ತ್ರಿಪ್ರತಿಯಲ್ಲಿ ನೀಡುವುದು. ದರಪಟ್ಟಿಗಳಲ್ಲಿ ಯಾವುದೇ ರೀತಿಯ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ಯಾವುದೇ ಒತ್ತಡ ತರಬಾರದು ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯತ್ ಜಿತ್ತಿ ತಿಳಿಸಿದ್ದಾರೆ.