ಬಯಲು ರಂಗ ಮಂದಿರದಲ್ಲಿ ಆಸನ,ನೆರಳಿನ ವ್ಯವಸ್ಥೆ : ಶಾಸಕ ಜಿ.ಎಚ್.ಶ್ರೀನಿವಾಸ್

| Published : Oct 16 2024, 12:40 AM IST

ಬಯಲು ರಂಗ ಮಂದಿರದಲ್ಲಿ ಆಸನ,ನೆರಳಿನ ವ್ಯವಸ್ಥೆ : ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಶಾಸಕರ ಅನುದಾನದಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಪ್ರೇಕ್ಷಕರಿಗೆ ಮತ್ತು ಮಕ್ಕಳಿಗೆ ಕೂರಲು ಆಸನದ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆಯನ್ನು ಶೀಘ್ರದಲ್ಲೇ ಮಾಡಿಕೊಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಅದ್ದೂರಿಯಾಗಿ ನೆಡೆದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಾಸಕರ ಅನುದಾನದಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಪ್ರೇಕ್ಷಕರಿಗೆ ಮತ್ತು ಮಕ್ಕಳಿಗೆ ಕೂರಲು ಆಸನದ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆಯನ್ನು ಶೀಘ್ರದಲ್ಲೇ ಮಾಡಿಕೊಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಮಂಗಳವಾರ ತರೀಕೆರೆಯ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ , ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಪುರಸಭೆ , ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಲ್ಲಾ ಸಮುದಾಯಗಳ ಆಶ್ರಯದಲ್ಲಿ ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಅನಾದಿ ಕಾಲದಿಂದಲೂ ತರೀಕೆರೆ ಕುಸ್ತಿ ಸ್ಪರ್ಧೆಗಳು ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿವೆ. ತರೀಕೆರೆ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಬಹಳ ಅದ್ಧೂರಿಯಾಗಿ ಕುಸ್ತಿ ಸ್ಪರ್ಧೆಗಳು ನೆಡೆಯುತ್ತಿದ್ದು ಇದಕ್ಕೆ ನೆರವಾದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

ರಾಜ್ಯ ಕುಸ್ತಿ ಫೆಡರೇಶನ್‌ ನಿಂದ ಕುಸ್ತಿ ಪಟುಗಳಿಗೆ ಸರ್ಟಿಫಿಕೇಟ್ ವಿತರಿಸಲು ಫೆಡರೇಶನ್ ನಿರ್ದೇಶಕ ಅರಾಧ್ಯ ಅವರ ಬಳಿ ಈಗಾಗಾಲೇ ಮಾತನಾಡಿದ್ದು, ಈ ಸರ್ಟಿಫಿಕೇಟ್ ಶಿಕ್ಷಣ ಮತ್ತು ಉದ್ಯೋಗಕ್ಕೆ ನೆರವಾಗಲಿದೆ ಎಂದರು. ಪಟ್ಟಣ ಸಮೀಪದ ಎ.ರಂಗಾಪುರ ಬಳಿ ಸುಸಜ್ಜಿತವಾದ ಕ್ರೀಡಾಂಗಣ, ಹಳೇ ಎ.ಸಿ.ಕಚೇರಿ ಸ್ಥಳದಲ್ಲಿ ಪುರಸಭೆಗೆ ನೂತನ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಒಂಭತ್ತೂವರೆ ಕೋಟಿ ರು.ಗಳಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಆಧುನೀಕರಣ ಮಾಡಲಾಗುವುದು ಎಂದ ಅವರು, ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್‌ ಮತ್ತು ಪದಾದಿಕಾರಿಗಳು, ಶ್ರೀ ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಜಯಸ್ವಾಮಿ ಸಿ (ಕಾರೆ) ಮತ್ತು ಸಂಘದ ಪದಾದಿಕಾರಿಗಳು ಬಹಳ ಶ್ರಮಪಟ್ಟು ಅದ್ಧೂರಿಯಾಗಿ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳನ್ನುಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ (ಬೈಟು) ಮಾತನಾಡಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದಿಂದ ಎಲ್ಲಾ ಸಮುದಾಯಗಳ ಆಶ್ರಯದಲ್ಲಿ ಹಾಗೂ ದಾನಿಗಳ, ಸಮಾಜದವರ ಸಹಯೋಗದಲ್ಲಿ ಕುಸ್ತಿ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ.ಕುಸ್ತಿ ಕ್ರೀಡೆಗಳಿಗೆ ಬಹಳ ಮಹತ್ವವಿದೆ.ಈ ಹಿನ್ನಲೆಯಲ್ಲಿ ತರೀಕೆರೆ ಪಟ್ಟಣಕ್ಕೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಗಂಣ ಅಗತ್ಯವಿದೆ ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದಿಂದ ಪುರಾತನ ಕಾಲದಿಂದಲೂ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿಸ್ಪರ್ಧೆ ಮತ್ತು ಸಮಾರಂಭವನ್ನು ಉತ್ತಮವಾಗಿ ನಡೆಸಲಾಗುತ್ತಿದೆ. ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರು. ಅನುದಾನ ತಂದಿದ್ದಾರೆ ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್ ಮಾತನಾಡಿ ತರೀಕೆರೆ ಕುಸ್ತಿಸ್ಪರ್ಧೆ ಇತಿಹಾಸ ಪ್ರಸಿದ್ದ. ತಾತ್ಕಾಲಿಕ ಕ್ರೀಡಾಂಗಣ ನಿರ್ಮಿಸಲು ಲಕ್ಷಾಂತರು ರು. ವೆಚ್ಚವಾಗುತ್ತದೆ. ಆದುದರಿಂದ ಪಟ್ಟಣಕ್ಕೆ ಒಳಾಂಗಣ-ಹೊರಾಂಗಣ ಕ್ರೀಡಾಂಗಣ ಅಗತ್ಯವಿದೆ. ಶಾಸಕ ಜಿ.ಎಚ್.ಶ್ರೀನಿವಾಸ್ ಸರ್ಕಾರದ ಅನುದಾನದಲ್ಲಿ ಕ್ರೀಡಾಂಗಣ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ.ಶಿವಶಂಕರಪ್ಪ ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಕುಸ್ತಿ ಕ್ರೀಡೆಗೆ ಇತಿಹಾಸವಿದೆ. ತರೀಕೆರೆ ಕುಸ್ತಿ ಸ್ಪರ್ಧೆಗಳು ಬಹಳ ಜನಪ್ರಿಯತೆ ಪಡೆದಿವೆ ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ಕುಸ್ತಿ ಬದುಕು ವಿಸ್ತರಿಸುವ ಸಾಧನೆಯಾಗಿದೆ. ತರೀಕೆರೆ ಪಟ್ಟಣಕ್ಕೆ ಕುಸ್ತಿ ತರಬೇತಿ ಕೇಂದ್ರ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅದ್ಯಕ್ಷ ಜಯಸ್ವಾಮಿ ಸಿ (ಕಾರೆ) ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಸ್ತಿ ಸ್ಪರ್ಧೆಗಳು ಮತ್ತು ಸಮಾರಂಭ ಯಶಸ್ವಿಯಾಗಿದೆ. ಸಹಕರಿಸಿದ ಸರ್ವರಿಗೂ ಕೃತಜ್ಞತೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಚ್.ಯು.ಫಾರೂಕ್, ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್, ಮಾಜಿ ಪುರಸಭಾಧ್ಯಕ್ಷ ಪರಮೇಶ್, ಪುರಸಭೆ ಸದಸ್ಯ ಟಿ.ಜಿ.ಶಶಾಂಕ, ಪುರಸಭೆ ಮಾಜಿ ಸದಸ್ಯ ಟಿ.ಆರ್.ಶ್ರೀಧರ್, ರವಿಕುಮಾರ್, ಭರತ್ ಅಂಚೆ, ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್, ಪುರಸಭೆ ಸದಸ್ಯ ಟಿ.ಜಿ.ಲೋಕೇಶ್‌ ಮತ್ತಿತರರು ಮಾತನಾಡಿದರು.ಆಟೋ ಶಂಕರ್‌, ಶ್ರೀನಿವಾಸ್‌, ಡಿ.ಸಿ. ದರ್ಶನ್‌, ಶ್ರೀ ಗುರು ರೇವಣ ಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಮತ್ತು ಪದಾದಿಕಾರಿಗಳು, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಪದಾದಿಕಾರಿಗಳು ಮತ್ತು ಸದಸ್ಯರು, ಪುರಸಭಾ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು ಭಾಗವಹಿಸಿದ್ದರು.15ಕೆಟಿಆರ್.ಕೆ.8ಃ ತರೀಕೆರೆಯಲ್ಲಿ ಏರ್ಪಾಡಾಗಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಸಮಾರೋಪ ಸಮಾರಂಭದ ಉದ್ಗಾಟನೆಯನ್ನು ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ನೆರವೇರಿಸಿದರು. ಶ್ರೀ ಗುರು ರೇವಣ ಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷರು ಟಿ.ಎಸ್.ರಮೇಶ್ (ಬೈಟು) ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಅಧ್ಯಕ್ಷರು ಜಯಸ್ವಾಮಿ ಸಿ.(ಕಾರೆ) ಮತ್ತಿತರರು ಇದ್ದಾರೆ.