ಸಾರಾಂಶ
ರಾಜ್ಯ ಸರ್ಕಾರಿ ಅಧಿಕಾರಿ, ನೌಕರರು ಮತ್ತು ಸಿಬ್ಬಂದಿಗಳಿಗೆ 7ನೇ ವೇತನ ಆಯೋಗ ಜಾರಿಗೊಳಿಸಲು ಹೋರಾಡಿ ಯಶಸ್ವಿಯಾದ ರಾಜ್ಯ ಸರ್ಕಾರಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಗೆ ಸೆ.2 ರಂದು ಅಭಿನಂದಾನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಜ್ಯ ಸರ್ಕಾರಿ ಅಧಿಕಾರಿ, ನೌಕರರು ಮತ್ತು ಸಿಬ್ಬಂದಿಗಳಿಗೆ 7ನೇ ವೇತನ ಆಯೋಗ ಜಾರಿಗೊಳಿಸಲು ಹೋರಾಡಿ ಯಶಸ್ವಿಯಾದ ರಾಜ್ಯ ಸರ್ಕಾರಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಗೆ ಸೆ.2 ರಂದು ಅಭಿನಂದಾನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ತಿಳಿಸಿದರು.ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7ನೇ ವೇತನವನ್ನು ಜಾರಿಗೊಳಿಸುವಂತೆ ಸತತ 2 ವರ್ಷಗಳ ಹೋರಾಟದ ಫಲವಾಗಿ ಎಲ್ಲ ನೌಕರರಿಗೆ 7ನೇ ವೇತನ ಜಾರಿಯಾಗಿದೆ. ಈ ಯಶಸ್ಸಿಗೆ ಕಾರಣೀಭೂತರಾದ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಯವರನ್ನು ಅಭಿನಂಧಿಸಲಾಗುವುದು ಎಂದರು.
ಕಳೆದ ಸರ್ಕಾರ 7ನೇ ವೇತನ ಆಯೋಗ ರಚಿಸಿದರೂ ಜಾರಿ ಮಾಡಿರಲಿಲ್ಲ. ಸಿ.ಎಸ್.ಷಡಕ್ಷರಿ ರಾಜ್ಯದಾದ್ಯಂತ ಎಲ್ಲ ಸರ್ಕಾರಿ ನೌಕರರೊಟ್ಟಿಗೆ ಅವಿರತ ಹೋರಾಟಗಳನ್ನು ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದೊಂದಿಗೆ ರಾಜ್ಯಾಧ್ಯಕ್ಷರು ನಿರಂತರ ಚರ್ಚೆ ನಡೆಸಿ ಅಂತಿಮವಾಗಿ ಆಗಸ್ಟ್‌ನಿಂದ ಎಲ್ಲ ನೌಕರರು, ಪಿಂಚಣಿದಾರರಿಗೆ 7ನೇ ವೇತನ ಕೊಡಿಸುವಲ್ಲಿ ಸಫಲರಾದರು ಎಂದರು.ಸುಮಾರು 15 ಲಕ್ಷ ರು. ಅನುದಾನದ ಕೊರತೆಯಿಂದಾಗಿ ಸರ್ಕಾರಿ ನೌಕರರ ಸಮುದಾಯ ಭವನ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಶಾಸಕ ಎಂ.ಟಿ.ಕೃಷ್ಣಪ್ಪ, ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಗೆ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಅಭಿನಂದನಾ ಸಮಾರಂಭವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜಯರಾಮ್, ತಹಸೀಲ್ದಾರ್ ಎನ್.ಎ.ಕುಂಞಅಹಮ್ಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್, ಇ.ಒ.ಶಿವರಾಜಯ್ಯ, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಆಗಮಿಸಲಿದ್ದಾರೆ.ಉಪಾಧ್ಯಕ್ಷ ವೀರಪ್ರಸನ್ನ, ರಾಜ್ಯ ಪರಿಷತ್ ಸದಸ್ಯ ಗಿಡ್ಡೇಗೌಡರು, ಕಾರ್ಯದರ್ಶಿ ಶ್ರೀಧರ್, ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್ ಇದ್ದರು.