ಸಾರಾಂಶ
ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಜಮಾಯಿಸುವ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಸೆಪ್ಟಂಬರ್ 28 ರಂದು ದಿನಾಂಕ ನಿಗದಿಯಾಗಿದೆ. ಸೆ.7 ರಂದು ಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಈ ಸಂಬಂಧ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ಪೆಂಡಾಲ್ ನಿರ್ಮಾಣಕ್ಕಾಗಿ ಶುಕ್ರವಾರ ಧ್ವಜ ಸ್ಥಂಭ ನೆಡಲಾಯಿತು. ಗೋಮಾತೆ ಪೂಜಿಸುವುದರ ಮೂಲಕ ಪೆಂಡಾಲ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಜಮಾಯಿಸುವ ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಸೆಪ್ಟಂಬರ್ 28 ರಂದು ದಿನಾಂಕ ನಿಗದಿಯಾಗಿದೆ. ಸೆ.7 ರಂದು ಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಈ ಸಂಬಂಧ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ಪೆಂಡಾಲ್ ನಿರ್ಮಾಣಕ್ಕಾಗಿ ಶುಕ್ರವಾರ ಧ್ವಜ ಸ್ಥಂಭ ನೆಡಲಾಯಿತು. ಗೋಮಾತೆ ಪೂಜಿಸುವುದರ ಮೂಲಕ ಪೆಂಡಾಲ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.ಈ ಬಾರಿ ಗಣಪತಿ ಮೂರ್ತಿ 14 ಅಡಿ ಎತ್ತರವಿರಲಿದ್ದು, ಮಹಾರಾಷ್ಟ್ರದಲ್ಲಿ ನಿರ್ಮಿಸಿ ನಂತರ ಅದನ್ನು ವಾಹನದಲ್ಲಿ ಚಿತ್ರದುರ್ಗಕ್ಕೆ ತರಲಾಗುತ್ತಿದೆ. ಶುಕ್ರವಾರ ಮುಂಜಾನೆಯಿಂದಲೇ ಗಣಪತಿ ಪ್ರತಿಷ್ಠಾಪನೆ ಜಾಗದಲ್ಲಿ ತಾಯಿ ಭಾರತಾಂಭೆ ಮತ್ತು ಹನುಮಂತನ ಭಾವಚಿತ್ರಗಳನ್ನು ಇರಿಸಿ ಪೂಜೆ ನೇರವೇರಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪೂಜೆಯನ್ನು ಸಾಕ್ಷೀಕರಿಸಿದರು.
ನಂತರ ಗೋಮಾತೆ ಪೂಜೆ ಮಾಡಿ ಅದಕ್ಕೆ ಹಸಿರು ಸೀರೆ, ಕೆಂಪು ಕಣ, ಬಳೆಗಳು ಹೂಗಳನ್ನು ಹಾಕಿ ಸಿಂಗಾರ ಮಾಡಲಾಯಿತು. ಧ್ವಜ ಸ್ತಂಭಕ್ಕೆ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಲೆರೆಯುವುದರ ಮೂಲಕ ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.ಸೆ. 7 ರಂದು ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಸೆ. 27ರ ವರೆಗೆ ಪ್ರತಿ ದಿನ ಗಣಪತಿಗೆ ಪೂಜೆ, ಗಣಹೋಮ, ಚಂಡಿಕಾ ಹೋಮಗಳು ನಡೆಯಲಿವೆ. ಪ್ರತಿ ದಿನ ಸಂಜೆ ವಿವಿಧ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸೆ.28 ರ ಶನಿವಾರ ಶೋಭಾಯಾತ್ರೆ ನಗರದ ಬಿ.ಡಿ ರಸ್ತೆ, ಮೆಜೆಸ್ಟಿಕ್ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಪ್ರವಾಸಿ ಮಂದಿರ ರಸ್ತೆ, ಬಿ.ಡಿ.ರಸ್ತೆ, ಸಂತೇಪೇಟೆ, ಹೊಳಲ್ಕೆರೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಮಾರಮ್ಮ ದೇವಾಲಯ, ಕನಕ ವೃತ್ತದ ಮೂಲಕ ಸಾಗಿ ಚಂದ್ರವಳ್ಳಿ ತಲುಪಲಿದೆ.ಮಾದಾರ ಚನ್ನಯ್ಯ ಗುರು ಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀಕೃಷ್ಣ ಯಾದವನಂದ ಗುರುಪೀಠದ ಯಾದಾವನಂದ ಶ್ರೀ, ಉಪ್ಪಾರ ಗುರುಪೀಠದ ಭಗೀರಥ ಶ್ರೀ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಶ್ರೀ, ಕಬೀರಾನಂದಾಶ್ರಮದ ಶ್ರೀ, ಶಿವಲಿಂಗಾನಂದ ಶ್ರೀ, ಲಂಬಾಣಿ ಗುರುಪೀಠದ ಶ್ರೀ ಸರ್ದಾರ ಸೇವಾಲಾಲ್ ಶ್ರೀ, ಕೊಟ್ಟೂರಿನ ಶಿವಪ್ರಕಾಶ ಶ್ರೀ, ಕುಂಚಿಟಿಗ ಗುರುಪೀಠದ ಶ್ರೀ, ಮತ್ತು ಶಾಂತವೀರ ಶ್ರೀ ಉಪಸ್ಥಿತರಿದ್ದರು.ಸಂಸದ ಗೋವಿಂದ ಕಾರಜೋಳ, ಶಾಸಕರಾದ ಚಂದ್ರಪ್ಪ, ಕೆ.ಸಿ. ವಿರೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, 2024ರ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷೆ ನಯನ, ಮಾರ್ಗದರ್ಶಕರಾದ ಬದರಿನಾಥ್, ಭಜರಂಗದಳದ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಸಂಯೋಜಕರಾದ ಸಂದೀಪ್, ಉಪಾಧ್ಯಕ್ಷರಾದ ಡಾ. ಮಂಜುನಾಥ್, ನಗರಾಧ್ಯಕ್ಷ ಆಶೋಕ್, ಉಪಾಧ್ಯಕ್ಷ ರಂಗನಾಥ್, ಸಂಚಾಲಕ ಸಾಗರ್, ಕಿಶೂರ್, ರಾಮಾಂಜನೇಯ, ಕಾರ್ತಿಕ್, ವಿಠಲ್‍ರಾವ್, ದರ್ಶನ್, ನಗರಸಭಾ ಸದಸ್ಯರಾದ ಸುರೇಶ್, ವೆಂಕಟೇಶ್, ಹರೀಶ್, ಅನುರಾಧ, ಶಶಿಧರ್, ಮಾಜಿ ಸದಸ್ಯರಾದ ರವಿಕುಮಾರ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧಕ್ಷ ತಿಪ್ಪೇಸ್ವಾಮಿ, ಸುರೇಶ್ ಸಿದ್ದಾಪುರ, ಡಾ. ಸಿದ್ದಾರ್ಥ, ವೆಂಕಟೇಶ್ ಯಾದವ್, ಉಮೇಶ್ ಕಾರಜೋಳ, ಪ್ರಶಾಂತ್, ಅಂಜನಪ್ಪ, ಅರುಣ್‍ಕುಮಾರ್ ಶರಣ್‍ಕುಮಾರ್, ಅನಿತ್‍ಕುಮಾರ್, ಮಲ್ಲಿಕಾರ್ಜನ್ ಧ್ವಜ ಸ್ತಂಬ ಪೂಜೆ ವೇಳೆ ಉಪಸ್ಥಿತಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))